ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ಪೇಟೆ | ಸರ್ವೀಸ್ ರಸ್ತೆಗಾಗಿ ರೈತರ ಪ್ರತಿಭಟನೆ

ಜಲಸೂರು- ಬೆಂಗಳೂರು ರಸ್ತೆ ಕಾಮಗಾರಿ ಅವೈಜ್ಞಾನಿಕ: ಆರೋಪ
Published 22 ಜೂನ್ 2024, 13:47 IST
Last Updated 22 ಜೂನ್ 2024, 13:47 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಮಾರ್ಗವಾಗಿ ಹಾದು ಹೋಗಿರುವ ಜಲಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಕಾಮಗಾರಿಯನ್ನು ಕೆ-ಶಿಫ್ ಇಲಾಖೆಯ ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ವಹಿಸುತ್ತಿದ್ದು ರೈತರಿಗೆ ಮತ್ತು ಗ್ರಾಮಸ್ಥರಿಗೆ ಉಪಯುಕ್ತವಾಗುವಂತೆ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಅಗ್ರಹಾರಬಾಚಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ರೈತರಿಗೆ ಅನುಕೂಲವಾಗುವಂತೆ ಸರ್ವೀಸ್ ರಸ್ತೆಗಳನ್ನು ನಿರ್ಮಿಸಬೇಕು, ಗೇಟ್‌ನಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು, ಹಳ್ಳದ ನೀರು ಪ್ರವಾಹದ ಮಾದರಿಯಲ್ಲಿ ಸೇತುವೆಯ ಕೆಳಗೆ ಹರಿಯುವುದರಿಂದ ರೈತರ ಜಮೀನಿಗೆ  ನುಗ್ಗುವ ಸಂಭವ ಇರುವುದರಿಂದ ತಡೆಗೋಡೆ ನಿರ್ಮಿಸಬೇಕು. ಸರ್ವೀಸ್ ರಸ್ತೆ ಇಲ್ಲದಿರುವುದರಿಂದ ರೈತರು ಜಮೀನಿಗೆ ಹೋಗಲು ತೊಂದರೆಯಾಗುವುದಲ್ಲದೆ ಕಬ್ಬು ಸಾಗಣೆಗೆ ಆಗದಂತಹ ಅಂಡರ್ ಪಾಸ್ ರಸ್ತೆ ನಿರ್ಮಿಸಲಾಗುತ್ತಿದೆ. ಈ ಎಲ್ಲ ಲೋಪಗಳನ್ನು ಸರಿಪಡಿಸಿ ಉಪಯುಕ್ತವಾದ ರಸ್ತೆ ನಿರ್ಮಾಣ ಮಾಡದಿದ್ದರೆ ನಿರಂತರ ಪ್ರತಿಭಟನೆ ನಡೆಸಿ ಕಾಮಗಾರಿ ನಿಲ್ಲಿಸಬೇಕಾಗುವುದು ಎಂದು ರೈತ ಮುಖಂಡ ಎ.ಸಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಎ.ಸಿ.ವೆಂಕಟೇಶ್, ಎ.ಸಿ.ಮುರುಳಿ, ಎ.ಬಿ.ದೇವರಾಜು, ಪಿ.ಬಿ.ಮಂಚನಹಳ್ಳಿ ನಾಗಣ್ಣಗೌಡ, ಮುಖಂಡರಾದ ಜವರೇಗೌಡ, ಪುಟ್ಟಸ್ವಾಮೀಗೌಡ, ಎ.ಎಸ್. ರಮೇಶ್, ಜಯರಾಮೇಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT