ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಣ್ಣುಭ್ರೂಣ ಹತ್ಯೆ ಪ್ರಕರಣ: 10 ಆರೋಪಿಗಳಿಗೆ ನ್ಯಾಯಾಂಗ ಬಂಧನ

Published 5 ಸೆಪ್ಟೆಂಬರ್ 2024, 14:46 IST
Last Updated 5 ಸೆಪ್ಟೆಂಬರ್ 2024, 14:46 IST
ಅಕ್ಷರ ಗಾತ್ರ

ಪಾಂಡವಪುರ: ಪಟ್ಟಣದ ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ನಡೆಯುತ್ತಿದ್ದ ಹೆಣ್ಣುಭ್ರೂಣ ಹತ್ಯೆ ಪ್ರಕರಣ ಹಾಗೂ ದೇವೇಗೌಡನಕೊಪ್ಪಲಿನ ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡವಪುರ ಪೊಲೀಸರು 10 ಮಂದಿ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯ ಗುರುವಾರ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ನಡೆದ ಹೆಣ್ಣುಭ್ರೂಣ ಹತ್ಯೆ ಪ್ರಕರಣ ಹಾಗೂ ದೇವೇಗೌಡನಕೊಪ್ಪಲು ಭ್ರೂಣಹತ್ಯೆ ಪ್ರಕರಣಗಳಲ್ಲಿ ಒಟ್ಟು 31 ಮಂದಿ ಆರೋಪಿಗಳಿದ್ದು, ಈವರೆಗೆ 27 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನ ನೀಡಲಾಗಿದೆ. ಉಳಿದ 4 ಆರೋಪಿಗಳಿಗಾಗಿ ಪತ್ತೆ ಕಾರ‍್ಯ ನಡೆಯುತ್ತಿದೆ.

ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ನಡೆದ ಭ್ರೂಣ ಹತ್ಯೆ ಪ್ರಕರಣದಲ್ಲಿ ಮಾತ್ರ ಒಟ್ಟು 24 ಮಂದಿ ಆರೋಪಿಗಳಿದ್ದು, ಈ ಪೈಕಿ 23 ಮಂದಿ ಯನ್ನು ಬಂಧಿಸಲಾಗಿದೆ. ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ದೇವೇಗೌಡನಕೊಪ್ಪಲು ಭ್ರೂಣಹತ್ಯೆ ಪ್ರಕರಣದಲ್ಲಿ ಮಾತ್ರ ಒಟ್ಟು 7 ಮಂದಿ ಆರೋಪಿಗಳಿದ್ದು , 4 ಮಂದಿಯನ್ನು  ಬಂಧಿಸಲಾಗಿದೆ. ಉಳಿದ 3 ಮಂದಿ ತಲೆಮರೆಸಿಕೊಂಡಿದ್ದಾರೆ. 

ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣದ ಸತ್ಯ ಆಲಿಯಾಸ್ ಲ್ಯಾಬ್ ಸತೀಶ, ಮದ್ದೂರು ತಾಲ್ಲೂಕಿನ ಹುಣ್ಣನದೊಡ್ಡಿಯ ಕುಮಾರ, ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದ ದಾಸೇಗೌಡ, ಪತ್ನಿ ಶಾರದಮ್ಮ, ಕೆ.ಆರ್.ನಗರ ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲಿನ ಪುಟ್ಟರಾಜು, ಪಾಂಡವಪುರ ತಾಲ್ಲೂಕಿನ ಬುಗದ ಕಾಳೇನಹಳ್ಳಿ ಮಲ್ಲಿಕಾರ್ಜುನ, ಚಿನಕುರಳಿಯ ರತ್ನಮ್ಮ, ನಾರಾಯಣಪುರದ ಮೀನಾ, ಮೈಸೂರಿನ ಶ್ರೀರಾಂಪುರದ ಸೋಮಶೇಖರ, ಬೆಂಗಳೂರಿನ ರಾಜಾಜಿನಗರ ಪಾರ್ವತಿ ಎಂಬ ಆರೋಪಿಗಳನ್ನು ಬಂಧಿಸಿ ಗುರುವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶೆ ಬಿ.ಪಾರ್ವತಮ್ಮ ಅವರು ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿ ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT