ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಘಟ್ಟ ಅರಣ್ಯಕ್ಕೆ ಬೆಂಕಿ: ಗಿಡಗಳು ನಾಶ

Last Updated 9 ಫೆಬ್ರುವರಿ 2021, 1:52 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರಸಿದ್ಧ ಪ್ರಕೃತಿ ತಾಣ ಕರಿಘಟ್ಟಕ್ಕೆ ಸೋಮವಾರ ಮಧ್ಯಾಹ್ನ ಬೆಂಕಿ ಬಿದ್ದಿದ್ದು, ಹತ್ತಾರು ಎಕರೆ ಅರಣ್ಯ ನಾಶವಾಗಿದೆ.

ಘಟ್ಟದ ಬಲ ಪಾರ್ಶ್ವದಲ್ಲಿ ಕಾಣಿಸಿಕೊಂಡ ಬೆಂಕಿ ಪೂರ್ವ ದಿಕ್ಕಿಗೂ ವ್ಯಾಪಿಸಿದೆ. ಒಂದು ವರ್ಷದ ಹಿಂದಷ್ಟೇ ನೆಟ್ಟಿದ್ದ ಆಲ, ಅರಳಿ, ಬೇವು, ಹೊಂಗೆ, ಹಲಸು ಇತರ ಜಾತಿಯ ನೂರಾರು ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿವೆ. ಮುಳ್ಳು ಕಂಟಿಗಳಲ್ಲಿ ವಾಸಿಸುವ ಬುಲ್‌ಬುಲ್‌ ಇತರ ಜಾತಿಯ ಕೆಲವು ಪಕ್ಷಿಗಳ ಮರಿ ಮತ್ತು ಮೊಟ್ಟೆಗಳು ಕೂಡ ಸುಟ್ಟು ಹೋಗಿವೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನ ನಡೆಸಿದರೂ ಗಾಳಿಯ ತೀವ್ರತೆ ಜಾಸ್ತಿ ಇದ್ದುದರಿಂದ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಹಲವು ಗಂಟೆಗಳ ಪ್ರಯತ್ನ ಬಳಿಕ ಬೆಟ್ಟದ ಎಡ ಪಾರ್ಶ್ವಕ್ಕೆ ಬೆಂಕಿ ಹರಡುವುದನ್ನು ಅಗ್ನಿಶಾಮದ ದಳದ ಸಿಬ್ಬಂದಿಯ ಜತೆಗೂಡಿ ತಪ್ಪಿಸಲಾಯಿತು. ಬೆಂಕಿ ಹರಡಲು ಕಾರಣ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT