ಕೆ.ಆರ್.ಎಸ್ ಮುಖ್ಯ ರಸ್ತೆಯಲ್ಲಿರುವ ಮದ್ದಿನ ಮನೆಯ ದುಃಸ್ಥಿತಿ
ಪಾಂಡವಪುರದಲ್ಲಿರುವ ಫ್ರೆಂಚ್ ಸೈನಿಕರ ಅಧಿಕಾರಿಗಳ ಸಮಾಧಿ ಹಾಗೂ ಮದ್ದಿನ ಮನೆಯನ್ನು ಸಂರಕ್ಷಿಸುವ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಪರಿಶೀಲಿಸಿ ಕ್ರಮವಹಿಸಲು ಸೂಚಿಸಲಾಗುವುದು. ಪುರಾತತ್ವ ಇಲಾಖೆಗೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು.
ಕುಮಾರ್, ಜಿಲ್ಲಾಧಿಕಾರಿ
ಆಂಗ್ಲೋ–ಮೈಸೂರು ಯುದ್ಧದ ಕಾಲದಲ್ಲಿ ಟಿಪ್ಪು ಸಹಾಯಕ್ಕಾಗಿ ಫ್ರೆಂಚ್ ಸೈನ್ಯ ಹಿರೋಡೆಗೆ ಬಂದು ಕುಂತಿಬೆಟ್ಟದಲ್ಲಿ ತಂಗಿತ್ತು. ಇದಕ್ಕಾಗಿ ನಮ್ಮ ತಾಲ್ಲೂಕಿಗೆ ಫ್ರೆಂಚ್ ರಾಕ್ಸ್ ಎಂಬ ಹೆಸರು ಬಂತು. ಈ ಫ್ರೆಂಚ್ ರಾಕ್ಸ್ ನೆನಪಿಗಾದರೂ ಪಟ್ಟಣದ ಹಾರೋಹಳ್ಳಿ ಬಳಿ ಇರುವ ಫ್ರೆಂಚ್ ಸೈನಿಕ ಸಮಾಧಿಯನ್ನು ಸಂರಕ್ಷಣೆ ಮಾಡಬೇಕಿದೆ.