ಪ್ರಜಾವಾಣಿ ವಾರ್ತೆ

ಮಳವಳ್ಳಿ: ಪಟ್ಟಣದ ಶ್ರೀರಾಮ ಒಕ್ಕಲಿಗರ ಸೇವಾ ಸಂಘ ಕನಕಪುರ ರಸ್ತೆಯ ಕೆ.ಎಸ್.ನಾಗೇಗೌಡ ಬಡಾವಣೆಯಲ್ಲಿ ನಿರ್ಮಿಸಿರುವ ಪ್ರಸನ್ನ ಗಣಪತಿ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ಶ್ರೀರಾಮ ಒಕ್ಕಲಿಗರ ಸಮುದಾಯದ ಭವನದ ಉದ್ಘಾಟನಾ ಕಾರ್ಯಕ್ರಮವು ಏ.29 ಮತ್ತು ಏ.30ರಂದು ನಡೆಯಲಿದೆ.

ಮಂಗಳವಾರ ಸಂಜೆ ಕೋಟೆ ಗಂಗಾಧರೇಶ್ವರ ದೇವಸ್ಥಾನದಿಂದ ದೇವರ ಮೂರ್ತಿಯನ್ನು ಮಂಟೇಸ್ವಾಮಿ ಬಸಪ್ಪನ ಪೂರ್ಣಕುಂಭ ಪೂಜೆಯೊಂದಿಗೆ ಮೆರವಣಿಗೆ ಮೂಲಕ ತರಲಾಗುವುದು. ನಂತರ ಉಮಾಮಹೇಶ್ವರ ಕಲಶ ಪೂಜೆ, ಗಣಪತಿ ಹೋಮ, ರಾಕ್ಷೋಘ್ನ ಹೋಮ ನಡೆಯಲಿದೆ. ಬುಧವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗಣಪತಿ ಶಿಲಾ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಹೋಮ ಹವನ, ಮಹಾಬಲಿಹಣ, ಪೂರ್ಣಾಹುತಿಯೊಂದಿಗೆ ಮಹಾ ಮಂಗಳಾರತಿ ನಡೆದ ಪ್ರಸಾದ ವಿನಿಯೋಗ ನಡೆಯಲಿದ್ದು, ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಅಂಚೆದೊಡ್ಡಿಯ ನಾಗಭೂಷಣಾರಾಧ್ಯ ಅವರ ನೇತೃತ್ವದಲ್ಲಿ ನಡೆಯಲಿವೆ.

ಮಂಗಳವಾರ ಸಂಜೆ 7ಗಂಟೆಗೆ ಆದಿ ಚುಂಚನಗಿರಿಯ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಆರ್ಶೀವಚನ ನೀಡಲಿದ್ದಾರೆ. ಏ.30ರಂದು ಬೆಳಿಗ್ಗೆ 11ಗಂಟೆಗೆ ದೇವಸ್ಥಾನವನ್ನು ಮೈಸೂರು– ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಸಮುದಾಯ ಭವನವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅಡುಗೆ ಮನೆಯನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಊಟದ ಹಾಲ್ನ್ನು ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಅವರು ಉದ್ಘಾಟಿಸಲಿದ್ದಾರೆ.

ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ದಾನಿಗಳೊಂದಿಗೆ ಮೈಸೂರಿನ ಪ್ರಾಚೀನ ಇತಿಹಾಸ ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಶಲ್ವಪಿಳ್ಳೈ ಅಯ್ಯಂಗಾರ್ ಅವರನ್ನು ಶಾಸಕ ಡಾ. ಅಶ್ವಥ್ ನಾರಾಯಣ ಅಭಿನಂದಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆ ಮಾಜಿ ಅಧ್ಯಕ್ಷ ನಾಡ ಯಜಮಾನ್ ಎಂ.ಸಿ.ವೀರೇಗೌಡ ವಹಿಸುವರು ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.