ಮಂಡ್ಯ: ‘ಹಾಸನ, ಮಂಡ್ಯದ ಹಾಲು ಒಕ್ಕೂಟಗಳು ದೇವೇಗೌಡರ ಕುಟುಂಬದ ಸ್ವತ್ತಾಗಿತ್ತು. ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಅದನ್ನು ತಪ್ಪಿಸಿ, ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದ್ದೆ. ಆದರೆ, ಈಗ ಮತ್ತೆ ಅವರ ಹಿಡಿತದಲ್ಲೇ ಇದ್ದು, ಹಾಸನ ಒಕ್ಕೂಟದ 65ರ ವರದಿ ಪ್ರಕಟವಾದರೆ ಎಚ್.ಡಿ.ರೇವಣ್ಣ ಹಗರಣದಲ್ಲಿ ಸಿಕ್ಕಿ ಬೀಳುತ್ತಾರೆ’ ಎಂದು ಬಿಜೆಪಿ ಮುಖಂಡ ಎ.ಮಂಜು ಹೇಳಿದರು.

ಬುಧವಾರ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ‘ಮಂಡ್ಯ, ಹಾಸನದಲ್ಲಿ ಯಾವುದೇ ಚುನಾವಣೆ ನಡೆಯದೆ ಸಂಘಗ ಳನ್ನು ಹಿಡಿತದಲ್ಲಿ ಇಟ್ಟುಕೊಂಡು, ಹಾಲಿಗೆ ನೀರು ಮಿಶ್ರಣ ಮಾಡಿ ಮಾರಿದ್ದಾರೆ. ಮಂಡ್ಯದಲ್ಲಿ ನಡೆದಂತೆಯೇ ಹಾಸನದಲ್ಲೂ ನಡೆಯುತ್ತಿದೆ. ಹಾಸನದಲ್ಲಿ 65ರ ತನಿಖೆ ವರದಿ ಪ್ರಕಟವಾಗದಂತೆ ಅದನ್ನು ತಡೆದಿದ್ದಾರೆ. ಅದು ಪ್ರಕಟವಾದರೆ ಸಿಕ್ಕಿ ಬೀಳುತ್ತಿದ್ದಾರೆ. ಕುಟುಂಬದವರು ಡೇರಿಯ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಏನೂ ಅನುಕೂಲ ಆಗುತ್ತಿಲ್ಲ’ ಎಂದು ಆರೋಪಿಸಿದರು.

‘ಅಧಿಕಾರಿಗಳು ಬೇಜವಾಬ್ದಾರಿ ತನದಿಂದ ಹೀಗಾಗುತ್ತಿದೆ ಎಂದು ಹೇಳುತ್ತಾರೆ. ಎಲ್ಲಾ ಒಕ್ಕೂಟದಲ್ಲೂ ಹೀಗೆ ಆಗಿರುವುದು ಬೆಳಕಿಗೆ ಬರುತ್ತದೆ. ರೈತರು, ಒಕ್ಕೂಟ ಉಳಿಯುತ್ತದೆ. ಒಕ್ಕೂಟಗಳಲ್ಲಿ ತನಿಖೆ ಮಾಡಿಸಿ, ಒಕ್ಕೂಟ ರಕ್ಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.