ಸೋಮವಾರ, ಫೆಬ್ರವರಿ 24, 2020
19 °C

ರೈತ ಇರುವವರೆಗೂ ಈ ಘಟ ಇರುತ್ತೆ: ಎಚ್‌.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್‌.ಪೇಟೆ: ‘ನಾನು ತುಮಕೂರಿನಲ್ಲಿ ಸೋಲು ಕಂಡಿರಬಹುದು. ಆದರೆ, ಮನೆಯಲ್ಲಿ ಸುಮ್ಮನೆ ಮಲಗುವ ವ್ಯಕ್ತಿ ನಾನಲ್ಲ. ರೈತ ಇರುವವರೆಗೂ ಈ ನನ್ನ ಘಟ ಇರುತ್ತದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಶುಕ್ರವಾರ ಹೇಳಿದರು.

‘1999ರಲ್ಲಿ ದೇವೇಗೌಡನ ಕತೆ ಮುಗಿಯಿತ. ಇನ್ನೇನಿದ್ದರೂ ಮನೆ ಕಡೆ ಹೋಗಬೇಕು ಎಂದು ನನ್ನ ಸಂಬಂಧಿಕರೇ ಮಾತನಾಡಿದ್ದರು. ಆದರೆ, ರೈತರ ಪರವಾದ ಹೋರಾಟ ನನ್ನಲ್ಲಿ ಕೆಚ್ಚು ತುಂಬಿದೆ. ಇನ್ನೂ ಶಕ್ತಿಯಿದ್ದು, ಹೋರಾಟ ಮುಂದುವರಿಸುತ್ತೇನೆ. ನಮ್ಮ ಅಭ್ಯರ್ಥಿಗೆ ಕೊಡುವ ಒಂದೊಂದು ಮತವೂ ದೇವೇಗೌಡನಿಗೆ ಕೊಡುವ ಮತವಾಗಿದೆ’ ಎಂದರು.

‘ಈ ಉಪ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಉಳಿಯಬೇಕು. ಕಾವೇರಿ ನೀರು ಹಂಚಿಕೆ ಸೇರಿದಂತೆ ಅಭಿವೃದ್ಧಿ ವಿಚಾರ ಬಂದಾಗ ನಮ್ಮ ರಾಜ್ಯ ಅನ್ಯಾಯಕ್ಕೆ ಒಳಗಾಗಿದೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು