‘ಆ.15ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಾರಿಸಿದ್ದ ಧ್ವಜವನ್ನು ಆ.16ರವರೆಗೆ ಧ್ವಜಸ್ತಂಭದಿಂದ ಇಳಿಸಿಲ್ಲ’ ಎಂದು ವ್ಯಕ್ತಿಯೊಬ್ಬರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದರು. 16ರ ರಾತ್ರಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ. ಶ್ರೀನಿವಾಸ್, ಬಿ.ಆರ್.ಸಿ ಸೋಮಣ್ಣ ಸ್ಥಳಕ್ಕೆ ಭೇಟಿ ನೀಡಿದಾಗಲೂ ಧ್ವಜವು ಸ್ತಂಭದಲ್ಲೇ ಇತ್ತು. ‘ಧ್ವಜ ಸಂಹಿತೆಯನ್ನು ಉಲ್ಲಂಘಿಸಲಾಗಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಕ್ಕೆ ವಿರುದ್ಧವಾಗಿ ಶಿಕ್ಷಕರು ವರ್ತಿಸಿದ್ದಾರೆ’ ಎಂದು ಅವರು ವರದಿ ನೀಡಿದ್ದರು.