ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪೇಟೆ | ಹೊಸಹೊಳಲು: ಸಂಭ್ರಮದ ರಂಗದ ಹಬ್ಬ

Published 1 ಮೇ 2024, 12:33 IST
Last Updated 1 ಮೇ 2024, 12:33 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ಪಟ್ಟಣದ ಹೊಸಹೊಳಲು ಗ್ರಾಮದಲ್ಲಿ ರಂಗದ ಹಬ್ಬವು ಸಂಭ್ರಮದಿಂದ ನಡೆಯಿತು.

ರಂಗಸ್ಥಳದಲ್ಲಿ ಆರಾಧ್ಯ ದೈವ ಆಂಜನೇಯ ಸ್ವಾಮಿಯ ಪೂಜಾ ಮಹೋತ್ಸವ, ನಂತರ ದೇವಸ್ಥಾನ ಮುಂಭಾಗದ ರಂಗದಲ್ಲಿ ಜಾತಿಭೇದ, ವಯಸ್ಸಿನ ಅಂತರವಿಲ್ಲದೆ ಗ್ರಾಮದ ಜನರು ತಮಟೆಯ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಸಂಪ್ರದಾಯವನ್ನು ಮೆರೆದರು.

ರಂಗದ ಹಬ್ಬದ ಸಂಭ್ರಮದಲ್ಲಿ ಗ್ರಾಮದ ಜನತೆಯೊಂದಿಗೆ ಸುತ್ತಮುತ್ತಲಿನ ಗ್ರಾಮದ ಜನರೂ ಪಾಲ್ಗೊಂಡಿದ್ದರು. ಗ್ರಾಮದ ರಾಜಬೀದಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತುದ್ದವು. ಗ್ರಾಮದ ಮುಖಂಡರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT