ಮಂಡ್ಯ: ಕೈಗಾರಿಕಾ ಅಭಿವೃದ್ಧಿಗಾಗಿ ಕೆಐಎಡಿಬಿ ವತಿಯಿಂದ ಮದ್ದೂರು ತಾಲ್ಲೂಕು ಕುದುರುಗುಂಡಿ ಗ್ರಾಮದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ರೈತರು ವಿರೋಧ ವ್ಯಕ್ತಪಡಿಸಿದ ಪರಿಣಾಮ ಗುರುವಾರ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಅರ್ಧಕ್ಕೆ ಮೊಟುಕುಗೊಳಿಸಲಾಯಿತು.

ಭೂಮಿಯ ದರ ನಿಗದಿ ಮಾಡಲು ಜಿಲ್ಲಾಧಿಕಾರಿ ಸಭೆ ಕರೆದಿದ್ದರು. ಆದರೆ ಭೂಸ್ವಾಧೀನ ಅಧಿಸೂಚನೆ ಹೊರಡಿಸುವ ಮೊದಲು ರೈತರ ಅಭಿಪ್ರಾಯ ಕೋರಿಲ್ಲ ಎಂದು ರೈತರು, ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಸಭೆ ಮೊಟುಕುಕೊಂಡಿತು.

‘ಕುದುರುಗುಂಡಿ ಗ್ರಾಮದ ಸರ್ವೇ ನಂಬರ್ 245 ರ 109 ಎಕರೆ ಭೂ ಸ್ವಾಧೀನದ ಪ್ರಕ್ರಿಯೆಗೆ ಸಂಬಂಧಿಸಿದಂತೆ 2001ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. 20 ವರ್ಷಗಳ ನಂತರ 2021ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. ರೈತರ ಜಮೀನನ್ನು ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ದುರುಪಯೋಗ ಮಾಡುತ್ತಿದ್ದಾರೆ. ಈಗಾಗಲೇ ತಾಲ್ಲೂಕಿನ ಗೆಜ್ಜಲಗೆರೆ, ಸೋಮನಹಳ್ಳಿಯಲ್ಲಿ ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಫ್ಲಾಟ್ಗಳು ಶೇ 75 ರಷ್ಟು ಖಾಲಿ ಇವೆ. ಅನುಕೂಲಸ್ತರಿಗೆ ಮತ್ತೆ ಅನುಕೂಲ ಮಾಡಿಕೊಡಲು ಮುಂದಾಗುತ್ತಿದ್ದಾರೆ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಟಿ. ಯಶವಂತ ಆರೋಪಿಸಿದರು.

‘ಕೆಎಐಡಿಬ ಯ ಭೂ ಸ್ವಾಧೀನ ಕಾನೂನು ಬಾಹಿರವಾಗಿದೆ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ 20 ವರ್ಷಗಳ ನಂತರ ಅಂತಿಮ ಅಧಿಸೂಚನೆ ಹೊರಡಿಸಿರುವುದು ಭೂ ಸ್ವಾಧೀನ ಕಾಯ್ದೆ 2013ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಸಂಬಂಧಿಸಿದ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುಗಳು ಕೂಡ ಇಂತಹ ಅಕ್ರಮ ಭೂ ಸ್ವಾಧೀನ ವನ್ನು ನಿರ್ಬಂಧಿಸಿವೆ. ಕೂಡಲೇ ಕೆಎಐಡಿಬಿ ಅಕ್ರಮ ಭೂ ಸ್ವಾಧೀನವನ್ನು ರದ್ದು ಪಡಿಸಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟ ಜಾತಿ ಸಮುದಾಯದ ಕುಟಂಬಗಳೇ ಹೆಚ್ಚು ಇರುವ ರೈತರ ಹಿತರಕ್ಷಣೆಗೆ ಮಾರಕವಾಗಿರುವ ಹಾಗೂ ದಲಿತರ ಕಲ್ಯಾಣದ ಉದ್ದೇಶಕ್ಕೆ ವಿರುದ್ಧ ವಾಗಿರುವ ಕೆಎಐಡಿಬಿ ಭೂ ಸ್ವಾಧೀನ ದ ವಿರುದ್ಧ ಜಿಲ್ಲಾಧಿಕಾರಿ ಗಳ ರೈತರಿಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿದರು.

ಗ್ರಾಮದ ಸಿದ್ದಯ್ಯ, ಶಿವಣ್ಣ, ಶಿವಲಿಂಗಯ್ಯ,ಶ್ರೀನಿವಾಸ್, ಪುಟ್ಟಸ್ವಾಮಿಗೌಡ, ಮಾದಪ್ಪ, ಸ್ವಾಮಿ, ಸಿದ್ದರಾಮು, ಮಹದೇವಯ್ಯ, ಪ್ರಕಾಶ್, ಬಿ.ಸಿದ್ದಯ್ಯ, ಸಂಜೀವಮ್ಮ, ಸಣ್ಣತಾಯಮ್ಮ, ಸಿ.ಬೆಟ್ಟಯ್ಯ, ಶ್ರೀನಿವಾಸ, ರಾಮಲಿಂಗಯ್ಯ, ಸುದರ್ಶನ್ ಸೇರಿದಂತೆ ಇನ್ನಿತರ ರೈತರು ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ ಎಂದು ಹೇಳಿದರು. ಕೆಎಐಡಿಬಿ ಭೂ ಸ್ವಾಧೀನ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದರು.

ಕೆಎಐಡಿಬಿ ವಿಶೇಷ ಭೂ ಸ್ವಾಧಿನ ಅಧಿಕಾರಿ ಸುರೇಶ್ ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಶ್, ಕೈಗಾರಿಕಾ ಜಂಟಿ ನಿರ್ದೇಶಕ, ಮತ್ತಿತರ ಅಧಿಕಾರಿಗಳು ಇದ್ದರು.

ದರ ಪರಿಷ್ಕರಣೆ: ಡಿ.ಸಿ

ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಾತನಾಡಿ ‘ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ, ಅಂತಿಮ ಅಧಿಸೂಚನೆ ಬಗ್ಗೆ ದೂರುಗಳು ಬಂದಿವೆ. ಭೂಮಿಗೆ ಹೆಚ್ಚಿನ ಬೆಲೆ ಬೇಡಿಕೆ, ನೋಟಿಸ್ ಸಿಗದಿರುವ ಬಗ್ಗೆಯೂ ಆಕ್ಷೇಪಗಳಿವೆ. ಒಂದು ದಿನದಲ್ಲಿ ಚರ್ಚಿಸಿ ದರ ನಿರ್ಧರಣೆ ಮಾಡಲು ಆಗುವುದಿಲ್ಲ. ಪ್ರಸ್ತುತ ಸರ್ಕಾರಿ ಬೆಲೆಯ ಅನ್ವಯ ಭೂಮಿಯ ಬೆಲೆ ಪರಿಷ್ಕರಣೆ ಮಾಡಲಾಗುವುದು. ಕೆಐಎಡಿಬಿ ಅಧಿಕಾರಿಗಳೊಂದಿಗೆ ಎರಡು ಬಾರಿ ಸ್ಥಳೀಯವಾಗಿ ಸಭೆ ನಡೆಸಿದ ನಂತರ ಮತ್ತೆ ಸಭೆ ಕರೆಯಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.