ಮಳವಳ್ಳಿ: ತಾಲ್ಲೂಕಿನ ಗೌಡಗೆರೆ ಗ್ರಾಮದ ಗೌರಮ್ಮ ಎಂಬುವವರ ಕಬ್ಬಿನ ಗದ್ದೆಯಲ್ಲಿ ಭಾನುವಾರ ಕಬ್ಬು ಕಟಾವಿನ ವೇಳೆ ಎರಡು ಚಿರತೆ ಮರಿಗಳು ಪತ್ತೆಯಾಗಿವೆ.
ಕೂಲಿ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದ ಕೆಲ ದಿನ ಹಿಂದೆ ಜನಿಸಿರುವ ಎರಡು ಚಿರತೆ ಮರಿಗಳು ಕಾಣಿಕೊಂಡಿವೆ. ಇದ್ದರಿಂದ ಭಯಬೀತರಾದ ಕೂಲಿ ಕಾರ್ಮಿಕರು ತಾಯಿ ಚಿರತೆ ಇರಬಹುದು ಎನ್ನುವ ಉದ್ದೇಶದಿಂದ ಕೆಲಸ ನಿಲ್ಲಿಸಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ವಲಯ ಅರಣ್ಯಾಧಿಕಾರಿ ಎನ್.ಸಿ.ಮಹದೇವ್ ಮಾತನಾಡಿ, ‘ಚಿರತೆ ಮರಿಗಳು ಸಿಕ್ಕಿರುವ ಜಾಗದ ಸುತ್ತಮುತ್ತ ತಾಯಿ ಚಿರತೆ ಸೆರೆಗೆ ಬೋನು ವ್ಯವಸ್ಥೆ ಕಲ್ಪಿಸಿ ಕೂಂಬಿಂಗ್ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಅನುಮತಿ ಮೇರೆಗೆ ಮರಿಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.