‘ಬೀದಿಯು ಕಿರಿದಾಗಿರುವುದರಿಂದ ವಿಸ್ತರಣೆಗೆ ಯೋಜಿಸಲಾಗಿದೆ. ಇದಕ್ಕಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಪೌರಾಡಳಿತ ಸಚಿವಾಲಯದಿಂದ ಪತ್ರ ಬಂದಿರುವುದರಿಂದ ಭೇಟಿ ನೀಡಿದ್ದೇನೆ. ಲೋಕೋಪಯೋಗಿ ಇಲಾಖೆಯಿಂದ ಅಳತೆ ಮಾಡಲಾಗಿದೆ. ಮಂಗಳವಾರ ಸಂಜೆ 5ಕ್ಕೆ ಅಧಿಕಾರಿಗಳ ಸಭೆಯನ್ನು ಮಂಡ್ಯದಲ್ಲಿ ಕರೆಯಲಾಗಿದ್ದು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಲಿದೆ’ ಎಂದರು.