ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಣ್ಣು ಭ್ರೂಣ ಹತ್ಯೆ: ಮತ್ತೆ 6 ಆರೋಪಿಗಳ ಬಂಧನ

Published : 9 ಸೆಪ್ಟೆಂಬರ್ 2024, 20:26 IST
Last Updated : 9 ಸೆಪ್ಟೆಂಬರ್ 2024, 20:26 IST
ಫಾಲೋ ಮಾಡಿ
Comments

ಮಂಡ್ಯ: ಜಿಲ್ಲೆಯ ಪಾಂಡವಪುರ, ಬೆಳ್ಳೂರು ಮತ್ತು ಮೇಲುಕೋಟೆ ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ‘ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ’ಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಮತ್ತೆ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. 

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಬೇವಿನಹಳ್ಳಿಯ ರಾಮಕೃಷ್ಣ ಬಿನ್‌ ನಿಂಗೇಗೌಡ (55), ಬನ್ನೂರು ಪಟ್ಟಣದ ಗುರು ಬಿನ್‌ ನಿಂಗಣ್ಣ (22), ಮೈಸೂರು ನಗರದ ಆದಿಶಕ್ತಿ ಬಡಾವಣೆಯ ಸೋಮಶೇಖರ್‌ ಪಟೇಲ್ (38), ಮೈಸೂರಿನ ರಾಘವೇಂದ್ರ ಬಡಾವಣೆಯ ಶಂಕರ ಜಿ.ಎನ್‌. (54), ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಹಿರೇಮರಳಿ ಗ್ರಾಮದ ನವೀನ್‌ ಎಚ್‌.ಕೆ (41) ಮತ್ತು ಹರಳಹಳ್ಳಿ ಗ್ರಾಮದ ಜಬ್ಬರ್‌ ಬಿನ್‌ ಜಿಯಾವುಲ್ಲಾ (46) ಬಂಧಿತರು. ಇವರಿಂದ ಎರಡು ಸ್ಕ್ಯಾನಿಂಗ್‌ ಯಂತ್ರಗಳು ಹಾಗೂ ಎರಡು ಕಾರ್‌ ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಮಂಡ್ಯ ಜಿಲ್ಲೆಯ 7 ವಿಶೇಷ ತನಿಖಾ ತಂಡಗಳು, ಶಂಕಿತರನ್ನು ಕರೆತಂದು ವಿಚಾರಣೆ ನಡೆಸುತ್ತಿವೆ. ಎಲ್ಲ ಆರೋಪಿಗಳನ್ನು ಬಂಧಿಸಿ, ಈ ಕೃತ್ಯಕ್ಕೆ ಸಂಪೂರ್ಣ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT