ಮೊಳಗಿತು ಮಂಡ್ಯ ಜನರ ‘ಸ್ವಾಭಿಮಾನ’ದ ಕಹಳೆ, ಅಂಬರೀಷ್‌ ಅಭಿಮಾನ

ಸೋಮವಾರ, ಜೂನ್ 17, 2019
28 °C

ಮೊಳಗಿತು ಮಂಡ್ಯ ಜನರ ‘ಸ್ವಾಭಿಮಾನ’ದ ಕಹಳೆ, ಅಂಬರೀಷ್‌ ಅಭಿಮಾನ

Published:
Updated:

ಮಂಡ್ಯ: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದ್ದ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಮಂಡ್ಯದ ಜನರ ಸ್ವಾಭಿಮಾನದ ಗೆಲುವಿಗೆ ಸಾಕ್ಷಿಯಾಗಿದರು. ಐತಿಹಾಸಿಕ ದಾಖಲೆಯನ್ನೂ ಬರೆದರು.

ಮುಖ್ಯಮಂತ್ರಿ ಪುತ್ರ, ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರ್‌ಗೆ 1,25,876 ಮತಗಳ ಅಂತರದಲ್ಲಿ ಹೀನಾಯ ಸೋಲುಣಿಸುವ ಮೂಲಕ ಮತದಾರರು ಸುಮಲತಾ ಅವರಿಗೆ ‘ಸ್ವಾಭಿಮಾನ’ಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಮಡಿಲು ತುಂಬಿದ ಮತ...

ಪ್ರಚಾರ ವೇಳೆ ಸುಮಲತಾ ಸೆರಗೊಡ್ಡಿ ಮತ ಭಿಕ್ಷೆ ಕೇಳಿದ್ದರೆ. ಅವರ, ಕರೆಗೆ ಓಗೊಟ್ಟ ಮತದಾರರು, ಅಂಬರೀಷ್ ಅಭಿಮಾನಿಗಳು ಸುಮಲತಾ ಅವರ ಮಡಿಲಿಗೆ ಮತಗಳನ್ನು ಹಾಕಿ ಕೊಡುಗೆ ಕೊಟ್ಟಿದ್ದಾರೆ.

* ಇದನ್ನೂ ಓದಿ: ಗಂಡ ಸತ್ತು ತಿಂಗಳಾಗಿಲ್ಲ ಸುಮಲತಾಗೇಕೆ ರಾಜಕೀಯ? ರೇವಣ್ಣ ಮಾತು ನಿಖಿಲ್‌ಗೆ ಕುತ್ತು?

ಸುಮಲತಾ ಪಡೆದ ಮತ: 7,03,660

ಗೆಲುವಿನ ಅಂತರ: 1,25,876

ಸೋತ ಮೈತ್ರಿ ಅಭ್ಯರ್ಥಿ: ಕೆ.ನಿಖಿಲ್ ಪಡೆದ ಮತ: 5,77,784

2014ರಲ್ಲಿ ಗೆದ್ದವರು– ಸಿ.ಎಸ್.ಪುಟ್ಟರಾಜು

2018ರ ಉಪಚುನಾವಣೆ: ಎಲ್.ಆರ್.ಶಿವರಾಮೇಗೌಡಗೆ ಗೆಲುವಾಗಿತ್ತು.


ಸ್ವಾಭಿಮಾನಿ ಸಮೇವೇಶದಲ್ಲಿ ರಾಕ್‌ಲೈನ್‌ ವೆಂಕಟೇಶ್‌, ಅಂಬರೀಷ್‌ ಪುತ್ರ ಅಭಿಷೇಕ್‌, ನಟ ಯಶ್‌, ಸುಮಲತಾ, ನಟ ದರ್ಶನ್‌, ಹಿರಿಯ ನಟ ದೊಡ್ಡಣ್ಣ ಒಗ್ಗಟ್ಟಿನ ಬಲ ಪ್ರದರ್ಶಿಸಿದ್ದರು.

* ಇದನ್ನೂ ಓದಿ: ಮಂಡ್ಯ: 20,557 ಮತ ಪಡೆದ ಸುಮಲತಾ ಹೆಸರಿನ ಮೂವರು; ಲಾಭ ಯಾರಿಗಾಯ್ತು?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 13

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !