ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ಮುಲ್‌: ಮಾರ್ಚ್ 14ರಿಂದ ಹಾಲಿನ ದರ ₹2 ಹೆಚ್ಚಳ

Last Updated 9 ಮಾರ್ಚ್ 2022, 7:07 IST
ಅಕ್ಷರ ಗಾತ್ರ

ಮದ್ದೂರು: ‘ಮಾರ್ಚ್ 14ರಿಂದ ಜಿಲ್ಲೆಯ ಹಾಲು ಉತ್ಪಾದಕರು ಸರಬರಾಜು ಮಾಡುವ ಪ್ರತಿ ಲೀಟರ್‌ ಹಾಲಿಗೆ ₹2 ಹೆಚ್ಚಳ ಮಾಡಲಾಗುವುದು’ ಎಂದು ಮನ್‌ಮುಲ್ ಅಧ್ಯಕ್ಷ ರಾಮಚಂದ್ರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ಮನ್‌ಮುಲ್‌ ಮೆಗಾ ಡೇರಿ ಕಾಮಗಾರಿ ಮುಗಿಯುವ ಹಂತ ತಲುಪಿದ್ದು, ಏಪ್ರಿಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದರಿಂದ ಸಾಗಣೆ ವೆಚ್ಚ ಹಾಗೂ ಕಟ್ಟಡ ಬಾಡಿಗೆ ವೆಚ್ಚ ಉಳಿತಾಯವಾಗಲಿದೆ’ ಎಂದರು

‘ಹೆಚ್ಚುವರಿಯಾಗಿ 8.5 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತದೆ. ಇದರಿಂದ ಹಾಲಿನ ಪುಡಿ ಉತ್ಪನ್ನಗಳು ಹೆಚ್ಚಾಗುತ್ತವೆ. ಮೆಗಾ ಡೇರಿಯಲ್ಲಿ 30 ಟನ್ ಹಾಲಿನ ಪುಡಿ ತಯಾರಿಕಾ ಘಟಕ ಹೊಂದಿದ್ದು, ಇಲ್ಲಿ ಹೆಚ್ಚುವರಿ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತದೆ. ಇದರಿಂದ ಒಕ್ಕೂಟಕ್ಕೆ ಆದಾಯ ಹೆಚ್ಚಲಿದ್ದು, ಉತ್ಪಾದಕರಿಗೆ ಹಾಲಿನ ದರವನ್ನು ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.

‘ಕೆ.ಆರ್.ಪೇಟೆಯಲ್ಲಿರುವ ಪಶು ಆಹಾರ ಘಟಕದಿಂದ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಾವಿರ ಟನ್‌ ಪಶು ಆಹಾರ ಸರಬರಾಜಾಗುತ್ತಿದೆ. ಮುಂದಿನ ದಿನಗಳಲ್ಲಿ ಅದು ಕೂಡ ಉಳಿತಾಯವಾಗುತ್ತದೆ. ಮೆಗಾ ಡೇರಿ ಕಾರ್ಯಾರಂಭದ ನಂತರ ರೈತರಿಗೆ ಇನ್ನೂ ಹೆಚ್ಚಿನ ದರ ದೊರೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT