ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಜ.16ರಂದು ಅಂಗಮಣಿ ಬ್ರಹ್ಮೋತ್ಸವ, ಮಡಿಲು ತುಂಬುವ ಶಾಸ್ತ್ರ

Published 14 ಜನವರಿ 2024, 7:27 IST
Last Updated 14 ಜನವರಿ 2024, 7:27 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಮೇಲುಕೋಟೆಯಲ್ಲಿ ಮರಕ ಸಂಕ್ರಾತಿಯ ಅಂಗವಾಗಿಚೆಲುವ ನಾರಾಯಣ ಸ್ವಾಮಿಯ ಪತ್ನಿಯರಾದ ದೇವಿ ಭೂ ದೇವಿಗೆ ಮಡಿಲು ತುಂಬುವ ಶಾಸ್ತ್ರ ಹಾಗೂ ಸ್ವಾಮಿಯ ಪ್ರೇಮ ಪ್ರಸಂಗಕ್ಕೆ ಸಾಕ್ಷಿಯಾಗಲಿದೆ ವಿಶ್ವ ವಿಖ್ಯಾತ ಅಂಗಮಣಿ ಬ್ರಹ್ಮೋತ್ಸವ.

ಮಕರ ಸಂಕ್ರಾಂತಿ ಅಂಗವಾಗಿ ಅಂಗಮಣಿ ಬ್ರಹ್ಮೋತ್ಸವ ವೈಭವದಿಂದ ಇಲ್ಲಿ  ನಡೆಯುತ್ತಿದ್ದು , ಈ ಬಾರಿ ಮಕರ ಸಂಕ್ರಾಂತಿಯ ಮರುದಿನ ಬೆಳಿಗ್ಗೆಕೆ  ಭೂದೇವಿಗೆ ಪಂಚನಾದಸ್ವರ ಗೋಷ್ಠಿಯೊಂದಿಗೆ ಅಭಿಷೇಕ ನಡೆಯಲಿದೆ. ಪಂಚಕಲ್ಯಾಣಿಯಲ್ಲಿ ದೇವಿಯರಿಗೆ ವಿಶೇಷ ಪೂಜೆ  ನೆರವೇರಲಿದೆ.

ಮಡಿಲು ತುಂಬುವ ಹಬ್ಬ: ರೈತರು ಸಿರಿಧಾನ್ಯಗಳನ್ನು ಬೆಳೆದು ರಾಶಿಗೆ ಪೂಜೆ ನೆರವೇರಿಸಿ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಿದರೆ, ಮೇಲುಕೋಟೆ ದೇವಾಲಯದಲ್ಲಿ   ಭೂದೇವಿಗೆ ದೇಶದ ರೈತರು  ಹಣ್ಣುಗಗಳಿಂದ ತುಂಬುವ ಶಾಸ್ತ್ರ ನೆರವೇರಿಸಲಾಗುತ್ತದೆ.


ಅಂಗಮಣಿ ಬ್ರಹ್ಮೋತ್ಸವ: ಮೇಲುಕೋಟೆಯ ಪ್ರಥಮ ಸ್ಥಾನೀಕರಾದ ಕರಗಂ ನಾರಾಯಣ ಅಯ್ಯಂಗಾರ್, ಸಜ್ಜೆಹಟ್ಟಿ ತಿರುನಾರಾಯಣ ಅಯ್ಯಂಗಾರ್ ಅವರ ಮನೆಗಳಲ್ಲಿ ಏಕಕಾಲದಲ್ಲಿ  ನೂರಾರು ತಟ್ಟೆಗಳಲ್ಲಿ ಜೋಡಿಸಿ ಜ 16ರಂದು ಸಂಜೆ ದೇವಿಯರಿಗೆ ಅಲಂಕಾರ ಮಾಡಲಾಗುತ್ತದೆ . 7 ಗಂಟೆಯ ನಂತರ ದರ್ಶನ ಅವಕಾಶ ಕಲ್ಪಿಸಲಾಗುತ್ತದೆ.  ಸಜ್ಜೆಹಟ್ಟಿ ಮಂಟಪದಲ್ಲಿ ದೇವಿಯರಿಗೆ ಜಿಲ್ಲಾ ಖಜಾನೆಯಿಂದ ತಂದ  ಚಿನ್ನಾಭರಣ ಹಾಗೂ ಪುಪ್ಪಗಳಿಂದ ಅಲಂಕಾರ ಮಾಡಿ, ಅಕ್ಕಿ, ಬೆಲ್ಲ, ಹೂ ಹಣ್ಣುಗಳಿಂದ ಮಡಿಲು ತುಂಬಿಸಿ, ಪೂಜೆ  ನೆರವೇರಿಸಿ ಉತ್ಸವ ನೆರವೇರಲಿದೆ.  ಹಣ್ಣುಗಳಿಂದ ಪ್ರಸಾದ ತಯಾರಿಸಿ ದೇವಿಯರಿಗೆ ಅರ್ಪಿಸಲಾಗುತ್ತದೆ.

ಪ್ರೇಮ ಪ್ರಸಂಗ:  ಚೆಲುವ ನಾರಾಯಣ ಸ್ವಾಮಿಯ ಪತ್ನಿಯರ ಜತೆ ಜಗಳವಾಡಿ ಇನ್ನೊಂದು ಮದುವೆಯಾಗಲು ದೇವಾಲಯ ಬಿಟ್ಟುಬರುತ್ತಾರೆ. ದೇವಿಯರು ಸ್ವಾಮಿಯನ್ನು ಹಿಂಬಾಲಿಸಿ ಮನವೊಲಿಸಿ ದೇವಾಲಯಕ್ಕೆ ಕರೆತರುತ್ತಾರೆ. ಈ ಸನ್ನಿವೇಶವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಾರೆ.ಮಕರಸಂಕ್ರಾಂತಿ ಮರು ದಿನ ಮೇಲುಕೋಟೆಯಲ್ಲಿ ಜರುಗುವ ಅಂಗಮಣಿ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು. ದರ್ಶನ್ ಪುಟ್ಟಣ್ಣಯ್ಯ ಶಾಸಕ

ಶ್ರೀ ದೇವಿ ಭೂದೇವಿ ಅಮ್ಮನವರ
ಶ್ರೀ ದೇವಿ ಭೂದೇವಿ ಅಮ್ಮನವರ
ಶಾಸಕ ದರ್ಶನ್ ಪುಟ್ಟಣ್ಣಯ್ಯ
ಶಾಸಕ ದರ್ಶನ್ ಪುಟ್ಟಣ್ಣಯ್ಯ
ವಿದ್ವಾನ್ ರಾಮಪ್ರೀಯ ಮೇಲುಕೋಟೆ
ವಿದ್ವಾನ್ ರಾಮಪ್ರೀಯ ಮೇಲುಕೋಟೆ
ಮಕರಸಂಕ್ರಾಂತಿ ಮರು ದಿನ ಮೇಲುಕೋಟೆಯಲ್ಲಿ ಜರುಗುವ ಅಂಗಮಣಿ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆ ಕಲ್ಪಿಸಲಾಗುವುದು.
ದರ್ಶನ್ ಪುಟ್ಟಣ್ಣಯ್ಯ ಶಾಸಕ
ಅಂಗಮಣಿ ಉತ್ಸವಕ್ಕೆ ದೇಶ ವಿದೇಶದಿಂದ ಭಕ್ತರು ಬಂದು ಮಡಿಲು ತುಂಬುವ ಶಾಸ್ತ್ರದಲ್ಲಿ ಭಾಗಿಯಾಗುತ್ತಾರೆ. ಸ್ವಾಮಿ ಪ್ರೇಮ ಪ್ರಸಂಗದ ಉತ್ಸವ ದರ್ಶನ ಪಡೆದರೆ ಭಕ್ತರ ಇಷ್ಟಾರ್ಥ ಈಡೇರಲಿದೆ ಎಂಬುದು ನಂಬಿಕೆ.
ವಿದ್ವಾನ್ ರಾಮಪ್ರಿಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT