ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ: ದೀಪಲಂಕಾರದಿಂದ ಕಂಗೊಳಿಸುತ್ತಿರುವ ಪಂಚ ಕಲ್ಯಾಣಿ
ಶ್ರೀಕಾಂತ್ ಮೇಲುಕೋಟೆ
Published : 7 ಏಪ್ರಿಲ್ 2025, 7:14 IST
Last Updated : 7 ಏಪ್ರಿಲ್ 2025, 7:14 IST
ಫಾಲೋ ಮಾಡಿ
Comments
ಮೇಲುಕೋಟೆ ವೈರಮುಡಿ ಹಿನ್ನೆಲೆಯಲ್ಲಿ ವಿವಿಧ ಬಗೆಯ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಪಂಚ ಕಲ್ಯಾಣಿ
ಬ್ರಹ್ಮದೇವ ಪ್ರತಿನಿತ್ಯ ವೈರಮುಡಿ ಕಿರೀಟವನ್ನು ಪೂಜೆ ಮಾಡುತ್ತಿದ್ದರು. ಅತಿಸುಂದರನಾದ ಚೆಲುವನಿಗೆ ಅರ್ಪಿಸಿದ್ದರು. ಆದ್ದರಿಂದ ವೈರಮುಡಿ ಕಿರೀಟದಿಂದಲೇ ಮೇಲುಕೋಟೆ ದೇವಾಲಯ ಪ್ರಖ್ಯಾತಗೊಂಡಿದೆ
– ರಾಮಪ್ರಿಯ ಸಂಪತ್ ಕುಮಾರ್ ದೇವಾಲಯದ ಪುರೋಹಿತ
ವೈರಮುಡಿಗೆ ಮೈಸೂರು ಮಹಾರಾಜರ ನಂಟು
ಮೈಸೂರು ಮಹಾರಾಜರ ಮನೆದೇವರಾದ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ರಾಜರ ಆಳ್ವಿಕೆಯಲ್ಲಿ ಈ ಹಿಂದೆ ಅದ್ದೂರಿಯಾಗಿ ನಡೆಯುತ್ತಿತು. ವೈರಮುಡಿ ಕಿರೀಟ ಈ ಹಿಂದೆ ಮೈಸೂರು ಅರಮನೆಯ ಖಜಾನೆಯಿಂದಲೇ ಪ್ರತಿವರ್ಷ ಮೇಲುಕೋಟೆಗೆ ಆಗಮಿಸುತ್ತಿತ್ತು ಇದಕ್ಕೆ ಸಾಕ್ಷಿ ಎಂಬಂತೆ ಪ್ರತಿಯೊಂದು ಊರಿನಲ್ಲೂ ಹೆದ್ದಾರಿಯ ಅಕ್ಕಪಕ್ಕದಲ್ಲಿರುವ ಕಲ್ಲಿನ ವೈರಮುಡಿ ಮಂಟಪಗಳನ್ನು ನೋಡಬಹುದು. ದೇವಾಲಯಕ್ಕೆ ಮಹಾರಾಜರ ಕೊಡುಗೆ ಅಪಾರವಾಗಿರುವ ಹಿನ್ನಲೆ ರಾಮಾನುಜಾಚಾರ್ಯರು ದೇವಾಲಯದಲ್ಲಿ ಮಹಾರಾಜರ ವಿಗ್ರಹ ಕೆತ್ತನೆ ಮಾಡಿದ್ದಾರೆ. ಇಂದಿಗೂ ಆ ವಿಗ್ರಹಕ್ಕೆ ಪೂಜಾ ಕೈಂಕರ್ಯ ನೆರವೇರಲಿದೆ.
ಜಿಲ್ಲಾ ಖಜಾನೆಯಿಂದ ಕಿರೀಟ ರವಾನೆ
ಮುಂಜಾನೆ ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವೈರಮುಡಿ ಕಿರೀಟ ಹಾಗೂ ತಿರುವಾಭರಣ ಪೆಟ್ಟಿಗೆಗೆ ದೇವಾಲಯದ ಸಂಪ್ರದಾಯದಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ಶ್ರೀರಂಗಪಟ್ಟಣ ಮಾರ್ಗವಾಗಿ ಪಾಂಡವಪುರ ಮಹದೇಶ್ವರಪುರ ಬೆಳ್ಳಾಳೆ ಮಾಣಿಕ್ಯನಹಳ್ಳಿ ಮಾರ್ಗವಾಗಿ ಮೇಲುಕೋಟೆ ತಲುಪಲಿದೆ. ನಂತರ ಜಿಲ್ಲಾಧಿಕಾರಿ ದೇವಾಲಯ ಸ್ಥಾನೀಕರು ಅರ್ಚಕರು ಅಧಿಕಾರಿಗಳು ನೇತೃತ್ವದಲ್ಲಿ ಪರಿಶೀಲನೆಗೊಂಡು ನಂತರ ರಾಮಾನುಜಾಚಾರ್ಯರ ಗುಡಿಯ ಮುಂದೆ ಕಿರೀಟಧಾರಣೆಯಾಗಿ ಬ್ರಹ್ಮೋತ್ಸವ ಮೆರವಣಿಗೆಗೆ ಬರಲಿದೆ. ಮುಂಜಾನೆ ಮೂರು ಗಂಟೆಯವರೆಗೂ ಉತ್ಸವ ನಡೆಯಲಿದೆ.