ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ಗಣತಿಯಲ್ಲಿ ಸಿಎಂ, ಡಿಸಿಎಂನಿಂದ ನ್ಯಾಯ ಸಿಗುವ ವಿಶ್ವಾಸ: ಚಲುವರಾಯಸ್ವಾಮಿ

Published 26 ನವೆಂಬರ್ 2023, 13:54 IST
Last Updated 26 ನವೆಂಬರ್ 2023, 13:54 IST
ಅಕ್ಷರ ಗಾತ್ರ

ಮಂಡ್ಯ: ಜಾತಿ ಗಣತಿಯಿಂದ ಸರ್ಕಾರ ಯಾರಿಗೂ ಅನ್ಯಾಯ ಮಾಡುವುದಿಲ್ಲ, ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ರಾಜ್ಯದಲ್ಲಿ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತಾರೆ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಭರವಸೆ ನೀಡಿದರು.

ಬೇರೆ ಬೇರೆ ಕಾರಣಕ್ಕೆ ಆಯಾ ಸಮಾಜದವರು ಆತಂಕದಲ್ಲಿ ಹೇಳಬಹುದು? ನನಗೆ ಸಿದ್ದರಾಮಯ್ಯ ನವರ ಮೇಲೆ ನಂಬಿಕೆ ಇದೆ. ಸಿದ್ದರಾಮಯ್ಯ ನವರು ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಜಾತಿಗಣತಿ ಜಾರಿಗೊಳಿಸುತ್ತಾರೆ. ವರದಿ ಸ್ವೀಕಾರವು ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು ಎಂದು ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದರು.

ಮುಖ್ಯಮಂತ್ರಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ, ಎಲ್ಲ ಸಮಾಜದ ಅಹವಾಲು ಕೇಳಿದ್ದಾರೆ. ಯಾವ ಸಮಾಜದ ಆತಂಕ ಇದೆ ಅದನ್ನ ಮುಖ್ಯಮಂತ್ರಿ ಮುಂದೆ ಪ್ರಸ್ತಾಪ ಮಾಡಲಾಗಿದೆ. ಇದನ್ನು ಕ್ರೂಢೀಕರಿಸಿ ಸೂಕ್ತ ತೀರ್ಮಾನ ಮಾಡುತ್ತಾರೆ, ವರದಿ ಸಲ್ಲಿಕೆ ಆದ ಮೇಲೆ ಆತಂಕ ಪಡಬೇಕು. ಆತಂಕ ಪಟ್ಟಿರುವುದು ಸೂಕ್ತವಾಗಿದೀಯಾ ಆಮೇಲೆ ಅದನ್ನ ಸರಿ ಮಾಡಬೇಕು. ವರದಿ ಬಂದ ಮೇಲೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಪಕ್ಷದವರೇ ಜಾತಿ ಗಣತಿ ವರದಿ ಜಾರಿಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಮಾಡಲು ಅವರು ಸ್ವತಂತ್ರ ಇದ್ದಾರೆ, ಅವರ ಅಭಿಪ್ರಾಯ ಹೇಳಿದ್ದಾರೆ, ಕ್ಯಾಬಿನೆಟ್‌ಗೆ ತಂದ ಮೇಲೆ ಸೂಕ್ತ ತೀರ್ಮಾನ ಮಾಡುತ್ತೇವೆ ಮಾಜಿ ಸಚಿವ ವಿ.ಸೋಮಣ್ಣ ವಿಚಾರವು ಅವರ ಪಕ್ಷದ ವಿಚಾರ ನಾನೇನು ಹೇಳಲು ಆಗುತ್ತೆ? ಅವರಿಗೆ ಬೇರೆ ಕ್ಷೇತ್ರದಲ್ಲಿ ನಿಲ್ಲಿಸಿ ಇರಿಸು‌ಮುರಿಸು ಮಾಡಿರುವುದು ಸತ್ಯ ಅದನ್ನ ಹೇಳಿದ್ದಾರೆ ಅಷ್ಟೇ ಎಂದು ಹೇಳಿ ಹೊರಟು ಹೋದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಮಂಡ್ಯದಲ್ಲಿ ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದ ವಿಚಾರವು ಗಂಭೀರವಾಗಿದೆ. ಇದು ದೊಡ್ಡ ಅಪರಾಧವಾಗಿದೆ. ಯಾರು ಯಾರು ಇದರಲ್ಲಿ ಭಾಗಿಯಾಗಿದ್ದಾರೆ ತಕ್ಕ ಶಿಕ್ಷೆಯಾಗಬೇಕು. ಈ ಕಾಲದಲ್ಲೂ ಈ ತರಹದ ಕೆಲಸ ಮಾಡಿದ್ದಾರೆ ಅಂದರೆ ನಂಬಲು ಸಾಧ್ಯವಾಗುತ್ತಿಲ್ಲ, ಈ ರೀತಿ ನಡೆದಿರುವುದು ದೊಡ್ಡ ಅಪರಾಧ. ಎಲ್ಲಾ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸುತ್ತೇನೆ, ನನಗೆ ಇವಾಗ ವಿಚಾರ ಗೊತ್ತಾಗಿದೆ ನಾನೇ ನಿಂತು ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT