ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಣ್ಣನ ವಚನ ಅರಿತವರು ಸಂಸ್ಕಾರವಂತರಾಗುತ್ತಾರೆ: ಮಧು ಜಿ. ಮಾದೇಗೌಡ

Published 21 ಆಗಸ್ಟ್ 2024, 13:47 IST
Last Updated 21 ಆಗಸ್ಟ್ 2024, 13:47 IST
ಅಕ್ಷರ ಗಾತ್ರ

ಭಾರತೀನಗರ: ವಿಶ್ವ ಗುರು ಬಸವಣ್ಣನವರ ವಚನವನ್ನು ಅರಿತವನು ಸಂಸ್ಕಾರವಂತರಾಗುತ್ತಾರೆ. ಬಸವಣ್ಣ ಅವರ ಚಳವಳಿಯ ಹಾದಿ ಎಲ್ಲರಿಗೂ ದಾರಿ ದೀಪ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಹೇಳಿದರು.

ಇಲ್ಲಿನ ವೀರಶೈವ ಸಮುದಾಯ ಭವನದಲ್ಲಿ ಮಂಡ್ಯ ಜಿಲ್ಲಾ ಶರಣರ ಸಂಘಟನಾ ವೇದಿಕೆ, ಕಾಯಕಯೋಗಿ ಫೌಂಡೇಷನ್ ಮಂಡ್ಯ ಸಹಯೋಗದಲ್ಲಿ ನಡೆದ ‘ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜೀವನ ಚರಿತ್ರೆ’ ವಿಷಯ ಕುರಿತ ಲಿಖಿತ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣ ಅವರು ಅವರ ಜೀವನ ಕಾಲದುದ್ದಕ್ಕೂ ಅಸ್ಪೃಶ್ಯತೆ, ಮಹಿಳೆಯರ ಮೇಳಿನ ಶೋಷಣೆ ವಿರುದ್ಧ ಹೋರಾಟ ನಡೆಸಿ ಚಳವಳಿಗೆ ನಾಂದಿ ಹಾಡಿದವರು. ಇಂತಹ ಮಹಾತ್ಮರ ತತ್ವಗಳನ್ನು ಪಾಲಿಸಬೇಕು. ಜಾತಿ, ಬೇಧವಿಲ್ಲದ ಬಸವಣ್ಣನವರ ಹಾದಿಯಲ್ಲಿ ಎಲ್ಲರೂ ಸಾಗುವಂತಾಗಬೇಕು. ಅಂದು ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ’ ಎಂದರು.

ಶರಣ ಸಂಘಟನಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಕಾಡುಕೊತ್ತನಹಳ್ಳಿ ನಂದೀಶ್ ಅಧ್ಯಕ್ಷತೆ ವಹಿಸಿದ್ದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ತೇಜ(ಪ್ರಥಮ) ₹3 ಸಾವಿರ ನಗದು, ವರ್ಷಿತಾ ಮತ್ತು ಕೃಪಾಂಜಲಿ (ದ್ವಿತೀಯ) ₹2 ಸಾವಿರ ನಗದು, ಹರ್ಷಯಾ ತೃತೀಯ ಬಹುಮಾನ ₹1 ಸಾವಿರ ನಗದು ಬಹುಮಾನ ಪಡೆದರು. 250ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಆರಕ್ಷಕ ಉಪನಿರೀಕ್ಷಕ ರಾಮಸ್ವಾಮಿ, ವೀರಶೈವ ಕ್ಷೇಮಾವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣ, ವೀರಶೈವ ಲಿಂಗಾಯಿತ ಮಹಾಸಭಾದ ಮಾಜಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಸಮಾಜ ಸೇವಕ ಬಬ್ರುವಾಹನ, ಆರ್.ಪ್ರಭುಸ್ವಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಲಿಂಗಾಯತ ಮಹಾಸಭಾದ ಅಧ್ಯಕ್ಷ ಮಂಜುನಾಥ್, ಮದ್ದೂರು ಘಟಕದ ಅಧ್ಯಕ್ಷ ವಿಜಯಕುಮಾರ್, ಮಳವಳ್ಳಿ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯಸ್ವಾಮಿ, ಗೌರವಾಧ್ಯಕ್ಷ ರಾಗಿಮುದ್ದನಹಳ್ಳಿ ರಮೇಶ್, ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ಕವಿತಾ.ವೈ.ಬಿ.ಶ್ರೀ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಘಟಕದ ಉಪಾಧ್ಯಕ್ಷ ಶಿವಲಿಂಗಪ್ಪ, ಉಪನ್ಯಾಸಕಿ ಮಾನಸ, ಮುಖಂಡರಾದ ಮಹದೇವಸ್ವಾಮಿ, ಡಾ.ದರ್ಶನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT