ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸದೃಢ ಯುವಜನರಿಂದ ಸ್ವಸ್ಥ ಸಮಾಜ: ಬಿಇಒ

Published : 4 ಸೆಪ್ಟೆಂಬರ್ 2024, 13:02 IST
Last Updated : 4 ಸೆಪ್ಟೆಂಬರ್ 2024, 13:02 IST
ಫಾಲೋ ಮಾಡಿ
Comments

ನಾಗಮಂಗಲ:  ‘ಕ್ರೀಡೆಗೆ ಪ್ರೋತ್ಸಾಹ ನೀಡಿ ಎಲ್ಲರೂ ದೈಹಿಕ ಮಾನಸಿಕವಾಗಿ ಸದೃಢ, ಆರೋಗ್ಯವಾಗಿರುವಂತೆ ಮಾಡುವುದು ಶ್ರೇಷ್ಠ ಕಾರ್ಯ.  ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಆರೋಗ್ಯವಂತ ಯುವಜನತೆಯ ಪಾತ್ರವೂ ಮುಖ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ  ಕಚೇರಿ, ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶ್ರೀವಿಶ್ವೇಶ್ವರಯ್ಯ ಗ್ರಾಮಾಂತರ ಪ್ರೌಢಶಾಲೆ ಜಿ.ಬೊಮ್ಮನಹಳ್ಳಿ ಶಾಲೆಗಳ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡುವ ಮೂಲಕ‌ ತಾಲ್ಲೂಕಿಗೆ ಕೀರ್ತಿ ತರಬೇಕು ಎಂ ದರು.

ಕ್ರೀಡಾಕೂಟದಲ್ಲಿ ಬಾಲಕರ ವಿಭಾಗದಲ್ಲಿ ಶ್ರೀ ಗಂಗಾಧರೇಶ್ವರ ಪ್ರೌಢಶಾಲೆ ಆರ್.ಮಿಥುನ್ ಭರ್ಜಿ ಎಸೆತ, ಚಕ್ರ ಎಸೆತ, ತ್ರಿವಿಧ ಜಿಗಿತಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ವೈಯಕ್ತಿಕ ಚಾಂಪಿಯನ್ ಆಗಿದ್ದು, ಬಾಲಕಿಯರ ವಿಭಾಗದಲ್ಲಿ ಶ್ರೀ ರಮಾನಂದನಾಥ ಸ್ವಾಮಿ ಪ್ರೌಢಶಾಲೆ ಬ್ರಹ್ಮದೇವರಹಳ್ಳಿ ಬಿ.ಎಂ.ಕೀರ್ತನಾ 100 ಮೀ., 200 ಮೀ., ಉದ್ದ ಜಿಗಿತಗಳಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

  ಗುಂಪು ಆಟಗಳಲ್ಲಿ ವಾಲಿಬಾಲ್ ಬಾಲಕರ ವಿಭಾಗದಲ್ಲಿ ಶಾಂತಿನಿಕೇತನ ಅದ್ದೀಹಳ್ಳಿ ಶಾಲೆ , ಬಾಲಕಿಯರ ವಿಭಾಗದಲ್ಲಿ ಕರಡಹಳ್ಳಿ ಸರ್ಕಾರಿ ಪ್ರೌಢಶಾಲೆ; ಕಬ್ಬಡ್ಡಿ ಬಾಲಕರ ವಿಭಾಗದಲ್ಲಿ ಎ.ಸಿ.ಗಿರಿ ಪ್ರೌಢಶಾಲೆ, ಬಾಲಕಿಯರ ವಿಭಾಗದಲ್ಲಿ ಕೆ.ಪಿ.ಎಸ್ ದೇವಲಾಪುರ; ಕೊಕ್ಕೊದಲ್ಲಿ ಬಾಲಕರ ವಿಭಾಗದಲ್ಲಿ ಎ.ಸಿ.ಗಿರಿ ಪ್ರೌಢಶಾಲೆ, ಬಾಲಕಿಯರ ವಿಭಾಗದಲ್ಲಿ ಮಾಯಿಗೋನಹಳ್ಳಿ ಎಸ್.ಕೆ.ಎಸ್ ಪ್ರೌಢಶಾಲೆ; ಥ್ರೋಬಾಲ್ಲ್‌ನಲ್ಲಿ ಬಾಲಕರ ವಿಭಾಗದಲ್ಲಿ ಕೆ.ಪಿ.ಎಸ್ ದೇವಲಾಪುರ, ಬಾಲಕಿಯರ ವಿಭಾಗದಲ್ಲಿ ಕರಡಹಳ್ಳಿ ಸರ್ಕಾರಿ ಪ್ರೌಢಶಾಲೆ; ಬಾಲ್ ಬ್ಯಾಡ್ಮಿಂಟನ್ ಬಾಲಕರ ವಿಭಾಗದಲ್ಲಿ ಎಲ್‌ಎನ್ ಶಾಲೆ, ಬಾಲಕಿಯರ ವಿಭಾಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಬಿಂಡಿಗನವಿಲೆ; ಶಟಲ್ ಬಾಲಕರ ವಿಭಾಗದಲ್ಲಿ ಎಲ್‌ಎನ್ ಶಾಲೆ, ಬಾಲಕಿಯರ ವಿಭಾಗದಲ್ಲಿ ರೋಟರಿ ಶಾಲೆಗಳ ತಂಡದ ಮಕ್ಕಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್‌.ಎಂ.ಸುರೇಶ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಪರಮಶಿವಯ್ಯ, ವಿಶ್ವೇಶ್ವರಯ್ಯ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಸಿ.ಮಂಜುನಾಥ್, ಶಿವಣ್ಣಗೌಡ, ಎ.ಸಿ.ಎಫ್.ಶಿವರಾಮು, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ರತ್ನಮ್ಮ, ದೈಹಿಕ ಶಿಕ್ಷಣ ಶಿಕ್ಷಕರಾದ ತಿಮ್ಮೇಗೌಡ, ಜಗದೀಶ್, ಮಂಜುನಾಥ್, ವಿಜಯ್ ಕುಮಾರ್ , ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT