ಕೆ.ಆರ್.ಪೇಟೆ: ಸ್ಪೃಶ್ಯ ಸಮುದಾಯಗಳಾದ ಬೋವಿ, ಲಂಬಾಣಿ, ಕುಳುವ ಸಮುದಾಯಗಳೊಂದಿಗೆ ಅಲೆಮಾರಿ ಸಮುದಾಯಗಳನ್ನು ಸೇರ್ಪಡೆ ಮಾಡಿದ್ದು ಅಸ್ಪೃಶ್ಯರಾಗಿರುವ ಅಲೆಮಾರಿ ಸಮುದಾಯಗಳಿಗೆ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಶೇ 1 ಒಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ತಾಲ್ಲೂಕು ಅಲೆಮಾರಿ ಸಮುದಾಯಗಳ ಸಂಘಗಳ ಒಕ್ಕೂಟ ಇಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿತು.

ಪಟ್ಟಣದ ಮಿನಿ ವಿಧಾನಸೌಧದವರೆ ಗೆ ಸಾಂಪ್ರದಾಯಿಕ ವೇಷಭೂಷಣ ತೊಟ್ಟು ಪ್ರತಿಭಟನಾ ಮೆರವಣಿಗೆ ನಡೆಸಿದ ಅಲೆಮಾರಿ ಸಮುದಾಯದವರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಯೋಗದ ಶಿಫಾರಸ್ಸಿನಂತೆ ಅಲೆಮಾರಿ ಸಮುದಾಯಗಳಿಗೆ ಶೇ 1 ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಗ್ರೇಡ್ -2 ತಹಶೀಲ್ದಾರ್ ಲೋಕೇಶ್ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಒಕ್ಕೂಟದ ಅಧ್ಯಕ್ಷ ಮಾಣಿಕ್ಯನಹಳ್ಳಿ ಶಿವಣ್ಣ, ಹಂದಿಜೋಗಿ ಸಂಘದ ಅಧ್ಯಕ್ಷ ಸ್ವಾಮಿ, ಒಕ್ಕೂಟದ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಅಲೆಮಾರಿ ಶಿಳ್ಳೇಕ್ಯಾತ ಸಮುದಾಯ ಸಂಘಟನೆಗಳ ಜಿಲ್ಲಾಧ್ಯಕ್ಷ ಎಂ.ಆರ್.ಕರಿಯಪ್ಪ, ಒಕ್ಕೂಟದ ಮುಖಂಡರಾದ ಕೃಷ್ಣಾಪುರ ಶಿವಣ್ಣ, ಪ್ರಮುಖರಾದ ಚೌಡೇನಹಳ್ಳಿ ದೇವರಾಜು, ಗಿರೀಶ್, ಬಳ್ಳೇಕೆರೆ ಶಿವಣ್ಣ, ರಾಮನಹಳ್ಳಿ ಮಂಜುನಾಥ್, ವಡ್ಡರಹಳ್ಳಿ ಬಾಲಯ್ಯ, ಉದ್ದಿನಬೋರೇಕಾವಲು ಕೃಷ್ಣಪ್ಪ, ಕೃಷ್ಣಾಪುರ ರಾಮು, ರಂಗ, ಹನುಮಂತ, ಭಾಗವಹಿಸಿದ್ದರು.ಪ್ರತಿಭಟನೆಯ ನಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.