ಮಂಡ್ಯ: ‘ಶಾಸಕ ಮುನಿರತ್ನ ಅವರು ದಲಿತ ನಿಂದನೆ ಮಾಡಿರುವುದು ಸಾಕ್ಷಿ ಸಮೇತ ಸಿಕ್ಕಿರುವುದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿ ಬಂಧಿಸಿದ್ದು, ಜಾಮೀನು ನೀಡಬಾರದು. ಶಾಸಕ ಸ್ಥಾನದಿಂದಲೂ ವಜಾ ಮಾಡಬೇಕು ಎಂದು ನಗರದ ಎಸ್ಪಿ ಕಚೇರಿ ಸರ್ಕಲ್ ಇನ್‌ಸ್ಪೆಕ್ಟರ್ ಯಶ್ವಂತ್ ಮೂಲಕ ಭಾನುವಾರ ಕಾಂಗ್ರೆಸ್ ಸಮಿತಿ(ಪರಿಶಿಷ್ಟ ಜಾತಿ ವಿಭಾಗ) ಕಾರ್ಯಕರ್ತರು ಸರ್ಕಾರಕ್ಕೆ ಮನವಿ ನೀಡಿದರು.

ದಲಿತ(ಹೊಲೆಯ) ಮತ್ತು ಒಕ್ಕಲಿಗ ಜಾತಿ ಪದಗಳನ್ನು ಬಳಿಸಿ ಮುನಿರತ್ನ ಅವರು ಮಾತನಾಡಿರುವುದನ್ನು ಆಧರಿಸಿ, ಪರಿಶಿಷ್ಟ ಜಾತಿ 1986 ತಡೆ ಕಾಯ್ದೆ 1956 ಮತ್ತು 1989 ಅಡಿಯಲ್ಲಿ ದೂರು ದಾಖಲಿಸಬೇಕು. ಸಾಮಾಜಿಕ ಜಾಲತಾಣದಲ್ಲಿಯೂ ಈ ಆಡಿಯೊ ಹರಿದಾಡುತ್ತಿದೆ ಎಂದು ಆರೋಪಿಸಿದರು.

ಹೊಲೆಯ ಎಂಬ ಪದ ಮತ್ತು ಒಕ್ಕಲಿಗ ಸಮುದಾಯವನ್ನು ಅಸಭ್ಯವಾದ ಪದಗಳಿಂದ ನಿಂದಿಸಿ, ಸಮುದಾಯಗಳ ಸ್ವಾಭಿಮಾನಕ್ಕೆ ಕುಂದು ಉಂಟು ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಶಾಸಕ ಸ್ಥಾನವನ್ನು ಅನರ್ಹಗೊಳಿಸ ಬೇಕು. ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಕಿತ್ತುಹಾಕಿ ಮತ್ತು ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ವಿಜಯ್‌ಲಕ್ಷ್ಮಿ ರಘುನಂದನ್, ಎಂ.ಎನ್.ಶ್ರೀಧರ್, ಕೆ.ಎನ್.ದೀಪಕ್, ತಿಬ್ಬನಹಳ್ಳಿ ರಮೇಶ್, ನಿತ್ಯಾನಂದ, ವಿಜಯ್‌ಕುಮಾರ್, ದೇವರಾಜು, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.