ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುಗಡ್ಡೆ ಅಭಿವೃದ್ಧಿ; ಆಕರ್ಷಣೆಗೆ ಒತ್ತು: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್

ಪ್ರವಾಸಿ ತಾಣಗಳಿಗೆ ಭೇಟಿ, ಪರಿಶೀಲನೆ
Last Updated 17 ಜುಲೈ 2021, 3:38 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ಕೆ.ಆರ್.ಎಸ್ ಹಿನ್ನೀರಿನಲ್ಲಿರುವ ಭೂವರಾಹನಾಥದೇವಸ್ಥಾಮಿ ದೇವಸ್ಥಾನ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿ, ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ಬಗ್ಗೆ ಪರಿಶೀಲನೆ ನಡೆಸಿದರು.

ಅವರು ವಿಶೇಷ ಬೋಟ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಜಿಲ್ಲಾಧಿಕಾರಿ ಅಶ್ವಥಿ, ಜಿಲ್ಲಾ ಪಂಚಾಯಿತಿ ಸಿಇಒ ದಿವ್ಯಪ್ರಭು ಮೊದಲಾದವರೊಂದಿಗೆ ಕೆ.ಆರ್.ಎಸ್ ಹಿನ್ನೀರಿನಲ್ಲಿ ಶುಕ್ರವಾರ ಸಂಜೆ ತಾಲ್ಲೂಕಿನ ಅಂಬಿಗರಹಳ್ಳಿ- ಸಂಗಾಪುರದ ತ್ರಿವೇಣಿ ಸಂಗಮದಿಂದ ಬೆಳತೂರು ದ್ವೀಪ, ಭೂವರಹನಾಥ ದೇಗುಲ ಇರುವ ಕಲ್ಲಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸಾಹಸ ಕ್ರೀಡೆಗಳನ್ನು ವೀಕ್ಷಿಸಿದರು.

‘ಮುಂಬರುವ ದಿನಗಳಲ್ಲಿ ಕೆ.ಆರ್.ಎಸ್ ಅಣೆಕಟ್ಟೆ ನೀರು ಕೃಷಿ ಮತ್ತು ಕುಡಿಯುವ ನೀರಿಗೆ ಮಾತ್ರ ಬಳಕೆಯಾಗದೆ ಗುಜರಾತ್ ರಾಜ್ಯದ ನರ್ಮದಾ ಸರೋವರದ ಮಾದರಿಯಲ್ಲಿ ಅಣೆಕಟ್ಟೆಯ ಹಿನ್ನೀರನ್ನು ಪ್ರವಾಸೋದ್ಯಮದ ವಿವಿಧ ಕಾರ್ಯಗಳಿಗೆ ಬಳಕೆ ಮಾಡಿ
ಕೊಂಡು ಅಭಿವೃದ್ಧಿಗೊಳಿಸಲಾಗುವುದು’ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಅಪಾರವಾದ ಅವಕಾಶಗಳಿದ್ದು, ಜಿಲ್ಲೆಯಲ್ಲಿರುವ ಪ್ರಾಚೀನ ದೇವಾಲಯಗಳು, ಹಿನ್ನೀರಿನಲ್ಲಿರುವ ನಡುಗಡ್ಡೆಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಜಿಲ್ಲೆಗೆ ಆಕರ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದರು.

‘ಹೇಮಾವತಿ ನದಿಯು ಹಲವಾರು ನಡುಗಡ್ಡೆಗಳನ್ನು ಸೃಷ್ಟಿಸಿದ್ದು, ಅವುಗಳ ಅಭಿವೃದ್ಧಿಗೆ ಕ್ರಮ ವಹಿಸಿ ಪ್ರವಾಸಿಗರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು. ತೂಗು ಸೇತುವೆ ನಿರ್ಮಿಸುವ ಮೂಲಕ ಆಕರ್ಷಕಗೊಳಿಸಲಾಗುವುದು. ದೋಣಿ ವಿಹಾರ ಆರಂಭಿಸಲಾಗುವುದು’ ಎಂದು ನುಡಿದರು.

ನಾರಾಯಣಗೌಡ ಮಾತನಾಡಿ, ‘ಜಿಲ್ಲೆಯಲ್ಲಿ ನೂರಾರು ಪ್ರವಾಸಿತಾಣಗಳಿದ್ದು, ತಾಲ್ಲೂಕಿನಲ್ಲಿ ಹೇಮಾವತಿ ನದಿಯು ಹೇಮಗಿರಿ
ಬಳಿ ಹೊಸಪಟ್ಟಣ ಸೇರಿದಂತೆ ಕಲ್ಲಹಳ್ಳಿ, ಮಂದಗೆರೆ ಬಳಿ ನಡುಗಡ್ಡೆಯನ್ನು ಸೃಷ್ಟಿಸಿದ ಜಿಲ್ಲೆಯ ಹೆಸರನ್ನು ಜಾಗತಿಕ ಭೂಪಟದಲ್ಲಿ ಶಾಶ್ವತಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಿದ್ದು, ಯೋಜನೆ ಕಾರ್ಯಗತಗೊಳ್ಳಲಿದೆ’ ಎಂದರು.

ಪಾಂಡವಪುರ ಉಪವಿಭಾ ಗಾಧಿಕಾರಿ ಶಿವಾನಂದ ಮೂರ್ತಿ, ತಹಶೀಲ್ದಾರ್‌ಗಳಾದ ರೂಪ, ಎಂ.ಶಿವಮೂರ್ತಿ , ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್, ಮುಖಂಡರಾದ ಅಂ.ಚಿ.ಸಣ್ಣಸ್ವಾಮೀಗೌಡ, ಡಾ. ಆರ್.ಕೆ.ವೆಂಕಟೇಶ್ ಸೇರಿದಂತೆ ಪ್ರವಾಸೋದ್ಯಮ, ಕ್ರೀಡೆ ಹಾಗೂ ಯುವಜನ ಸೇವಾ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT