ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಅರಮನೆ: ಪ್ರವಾಸಿಗರು ವಾಪಾಸ್‌

ಪ್ರವೇಶಕ್ಕೆ ಆನ್‌ಲೈನ್‌ ಟಿಕೆಟ್‌ ಕಡ್ಡಾಯ
Last Updated 17 ಅಕ್ಟೋಬರ್ 2021, 3:44 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದ ಟಿಪ್ಪು ಸುಲ್ತಾನ್‌ ಬೇಸಿಗೆ ಅರಮನೆ ದರಿಯಾ ದೌಲತ್‌ ನೋಡಲು ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆದವರಿಗೆ ಮಾತ್ರ ಪ್ರವೇಶಾವಕಾಶ ನೀಡುತ್ತಿದ್ದು, ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆಯಲು ವಿಫಲರಾದ ಪ್ರವಾಸಿಗರು ವಾಪಸ್‌ ಹೋಗುತ್ತಿದ್ದಾರೆ.

ಟಿಪ್ಪು ಸುಲ್ತಾನನ ವಸ್ತುಸಂಗ್ರಹಾಲ ಯವೂ ಆಗಿರುವ ಈ ಬೇಸಿಗೆ ಅರಮನೆ ವೀಕ್ಷಿಸಲು ಎರಡು ದಿನಗಳಿಂದ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದಾರೆ. ಬರುವವರು ಅರಮನೆ ಪ್ರವೇಶಿಸಬೇಕಾದರೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡುವುದು ಕಡ್ಡಾಯ ವಾಗಿದೆ. ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆಯುವುದು ಕೆಲವರಿಗೆ ಸಾಧ್ಯವಾಗುತ್ತಿಲ್ಲ. ಅರಮನೆಯ ಪ್ರವೇಶ ದ್ವಾರದಲ್ಲಿ ಟಿಕೆಟ್‌ ಬುಕ್‌ ಮಾಡುವ ಮಾಹಿತಿ ಫಲಕ ಇದ್ದರೂ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಉಂಟಾಗುತ್ತಿದೆ.

ಬೇಸಿಗೆ ಅರಮನೆ ಆವರಣದಲ್ಲಿ ವೈಫೈ ವ್ಯವಸ್ಥೆ ಇಲ್ಲ. ಕೆಲವು ಬಾರಿ ಒಂದು ಗಂಟೆ ಪ್ರಯತ್ನಿಸಿದರೂ ಸರ್ವರ್‌ ಸಿಗುವುದಿಲ್ಲ. ಟಿಕೆಟ್‌ ಬುಕ್‌ ಮಾಡು ವವರು ಹಣ ಪಾವತಿಸುವಾಗ ಗೂಗಲ್‌ ಆಯ್ಕೆ ಕ್ರಮವಾಗಿ ತೆಗೆದುಕೊಳ್ಳುವುದಿಲ್ಲ. ಒಮ್ಮೆ 5 ಮಂದಿಯ ಹೆಸರಿನಲ್ಲಿ ಮಾತ್ರ ಟಿಕೆಟ್‌ ಬುಕ್‌ ಮಾಡುವ ಆಯ್ಕೆ ಇದ್ದು, ತಂಡವಾಗಿ ಬರುವ ಪ್ರವಾಸಿಗರು ಗಂಟೆಗಟ್ಟಲೆ ಕಾಯಬೇಕಾಗಿದೆ.

‘ಕೊರೊನಾ ಹರಡುವುದನ್ನು ತಡೆಯಲು ಬೇಸಿಗೆ ಅರಮನೆಗೆ ಬರುವ ಪ್ರವಾಸಿಗರು ಆನ್‌ಲೈನ್ ಮೂಲಕವೇ ಟಿಕೆಟ್‌ ಖರೀದಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಆನ್‌ಲೈನ್‌ ಟಿಕೆಟ್‌ ಪಡೆಯಲು ವಿಫಲರಾದವರು ವಾಪಸ್‌ ಹೋಗುತ್ತಿದ್ದಾರೆ. ಇದುವರೆಗೆ ರಾಜ್ಯ, ಹೊರ ರಾಜ್ಯಗಳ ಎರಡು ಸಾವಿರಕ್ಕೂ ಹೆಚ್ಚು ಮಂದಿ ಈ ಅರಮನೆಯನ್ನು ನೋಡಲಾಗದೆ ನಿರಾಸೆಯಿಂದ ವಾಪಸ್‌ ತೆರಳಿದ್ದಾರೆ’ ಎಂದು ಬೇಸಿಗೆ ಅರಮನೆಯ ಸಿಬ್ಬಂದಿ ಹೇಳುತ್ತಾರೆ.

‘ಆನ್‌ಲೈನ್‌ ಮೂಲಕ ಟಿಕೆಟ್‌ ಪಡೆಯಲು ನಿಯಮಗಳು ಕಠಿಣವಾಗಿವೆ. ವಿದ್ಯಾವಂತರೇ ತಿಣುಕಾಡುತ್ತಿದ್ದಾರೆ. ಆಂಡ್ರಾಯ್ಡ್‌ ಫೋನ್‌ ಇಲ್ಲದವರು ಟಿಕೆಟ್‌ ಖರೀದಿಸಲು ಆಗುವುದಿಲ್ಲ. ಆಫ್‌ಲೈನ್‌ ಮೂಲಕವೂ ಟಿಕೆಟ್‌ ಖರೀದಿಸಿ ಅರಮನೆ ನೋಡಲು ಅವಕಾಶ ಮಾಡಿಕೊಡಬೇಕು’ ಎಂದು ಶನಿವಾರ ಬೆಂಗಳೂರಿನಿಂದ ಕುಟುಂಬ ಸಹಿತ ಬಂದಿದ್ದ ಡಾ.ಅನೀಸ್‌ ಫಾತಿಮಾ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT