ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ರಾಮಮಂದಿರವನ್ನು ಲೋಕಾರ್ಪಣೆ ಮಾಡಲಾಯಿತು.

ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಗಳು ನಮ್ಮ ಪೂರ್ವಜರು ಕೊಟ್ಟ ಬಳುವಳಿಯಾಗಿವೆ. ದೇವಸ್ಥಾನಗಳು ಮನಸ್ಸಿಗೆ ನೀಡುವ ತಾಣಗಳು. ರಾಮಮಂದಿರವನ್ನು ಲೋಕಾರ್ಪಣೆ ಮಾಡಿಸಿದ್ದು, ಪ್ರತಿದಿನ ಅಲ್ಲಿ ಪೂಜೆ ನೈವೇದ್ಯ ನಡೆಯುವಂತೆ ನೋಡಿಕೊಳ್ಳಿ’ಎಂದು ಸಲಹೆ ನೀಡಿದರು.

‘ಶ್ರೀರಾಮ ಈ ದೇಶದ ಮಹಾನ್ ಆದರ್ಶ ವ್ಯಕ್ತಿ. ಆತ ತೋರಿದ ಧರ್ಮದ ಪಥವನ್ನು ನಾವೆಲ್ಲರೂ ಪಾಲಿಸಿದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದರು.

ಬೇಬಿ ಬೆಟ್ಟ ಮಠದ ಶಿವಬಸವ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರ ಮಠದ ಪೀಠಾಧಿಪತಿ ಸ್ವತಂತ್ರ ಚೆನ್ನವೀರಯ್ಯ ಸ್ವಾಮೀಜಿ ಅವರು ಮಾತನಾಡಿದರು.

ಭಕ್ತರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಮಿತ್ರ ಫೌಂಡೇಶನ್ನ ಅಧ್ಯಕ್ಷ ವಿಜಯ್ ರಾಮೇಗೌಡ, ಮುಖಂಡರಾದ ಜವರಾಯಿಗೌಡ, ಮೀನಾಕ್ಷಿ ಪುಟ್ಟರಾಜು ಹೆಳವೇಗೌಡ, ಗೌಡ, ಶ್ಯಾಮ್ ಪ್ರಸಾದ್ ಮಲ್ಲಿಕಾರ್ಜುನ, ಪ್ರಕಾಶ್, ಬೂಕನಕೆರೆ, ನಾಗೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.