ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸಲು: ಪೂಜೆಗೆ ಸೀಮಿತವಾದ ಜೋಡಿ ರಥೋತ್ಸವ

Published 29 ಏಪ್ರಿಲ್ 2024, 15:24 IST
Last Updated 29 ಏಪ್ರಿಲ್ 2024, 15:24 IST
ಅಕ್ಷರ ಗಾತ್ರ

ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ಸೋಮವಾರ ನಡೆಯಬೇಕಿದ್ದ ಸೋಮೇಶ್ವರ, ಶಂಭುಲಿಂಗೇಶ್ವರ, ಕುದುರೆಮಂಡಮ್ಮನವರ ಜೋಡಿ ರಥೋತ್ಸವ ಬದಲು ರಥಕ್ಕೆ ಪೂಜಿ ಸಲ್ಲಿಸುವ ಮೂಲಕ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು.

ಮುಜರಾಯಿ ಇಲಾಖೆಗೆ ದೇಗುಲ ಸೇರಿದ್ದು, ರಥ ಹಳೆಯದಾಗಿದ್ದರಿಂದ ಭಕ್ತರ ಒತ್ತಾಸೆಯಂತೆ ಹೊಸ ರಥ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು, ಶ್ರೀರಂಗಪಟ್ಟಣ ತಾಲ್ಲೂಕಿನ ಶಿಲ್ಪಿ ಮುಂದಾಗಿದ್ದು ಕೆಲಸ ಕುಂಟುತ್ತ ಸಾಗಿದೆ. ಹೀಗಾಗಿ ರಥಮಂಟಪದಿಂದ ಹೊರಗಡೆ ಎಳೆಯದೆ ಸ್ವಸ್ಥಾನದಿಂದ ರಥವನ್ನು ಒಂದೆರಡು ಮೀಟರ್ ಹೊರಗೆ ತಂದು  ಸಾಂಕೇತಿಕವಾಗಿ ಮುಜರಾಯಿ ಇಲಾಖೆ ಮಾರ್ಗದರ್ಶನದಂತೆ ಅರ್ಚಕರು ರಥಗಳಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.

‘ರಥೋತ್ಸವದ ಬದಲು ಕನಿಷ್ಠ ಉತ್ಸವಮೂರ್ತಿಗಳನ್ನಾದರೂ ರಥಬೀದಿಯಲ್ಲಿ ಮೆರವಣಿಗೆ ಮಾಡಿದ್ದರೆ ದೇವರನ್ನು ಕಣ್ತುಂಬಿಕೊಳ್ಳಬಹುದಿತ್ತು. ಇದಕ್ಕೂ ಅವಕಾಶವನ್ನು ಮುಜರಾಯಿ ಅಧಿಕಾರಿಗಳು ಕಲ್ಪಿಸಲಿಲ್ಲ’ ಎಂದು ಭಕ್ತರು ಬೇಸರ ವ್ಯಕ್ತಪಡಿಸಿದರು.

ರಥೋತ್ಸವ ನೋಡಲು ದೂರದ ಊರುಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು. ಅರ್ಚಕರು ರಥವನ್ನು ಪೂಜಿಸುತ್ತಿರುವುದನ್ನು ಕಂಡ ಭಕ್ತರು ರಥಕ್ಕೆ ಹಣ್ಣು, ಕಾಯಿ ಅರ್ಪಿಸಿದರು.

ಪುಷ್ಕರಣಿಯಲ್ಲಿ ಮಿಂದ ಭಕ್ತರು ಸೋಮೇಶ್ವರ, ಶಂಭುಲಿಂಗೇಶ್ವರ ಮೂರ್ತಿ, ಕುದುರೆಮಂಡಮ್ಮ ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿ, ಮಳೆಗಾಗಿ ಪ್ರಾರ್ಥಿಸಿದರು.

‘ಮುಂಬರುವ ವರ್ಷದಲ್ಲಿ ನೂತನ ರಥ, ನವೀಕೃತ ದೇಗುಲ ಲೋಕಾರ್ಪಣೆಯಾಗಲಿದೆ. ಭಕ್ತರು ಎಂದಿನಂತೆ ಸಹಕರಿಸಬೇಕು’ ಎಂದು ತಹಶೀಲ್ದಾರ್ ಎಸ್.ವಿ. ಲೋಕೇಶ್ ಮನವಿ ಮಾಡಿದರು.

ಉಪತಹಶೀಲ್ದಾರ್ ವೀಣಾ, ಕಂದಾಯ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಆಡಳಿತಾಧಿಕಾರಿ ಪ್ರಸನ್ನ, ತಿಪ್ಪೇಶ್, ಸುನಿಲ್ ಗಾಣಿಗೇರ್, ಗ್ರಾಪಂ. ಸದಸ್ಯ ಈರಾಜು, ಭಾಗ್ಯಮ್ಮ ಭಾಗವಹಿಸಿದ್ದರು.

ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ಸೋಮವಾರ ನಡೆಯಬೇಕಿದ್ದ ಸೋಮೇಶ್ವರ ಶಂಭುಲಿಂಗೇಶ್ವರ ಕುದುರೆಮಂಡಮ್ಮನವರ ಜೋಡಿ ರಥೋತ್ಸವ ಬದಲು ರಥಕ್ಕೆ ಪೂಜಿ ಸಲ್ಲಿಸುವ ಮೂಲಕ ಜಾತ್ರೆಯನ್ನು ಸರಳವಾಗಿ ಆಚರಿಸಲಾಯಿತು. ಯುಗಾದಿಯ ನಂತರ ರಜೆಯ ಸೋಮವಾರದಲ್ಲಿ ಜಾತ್ರಾ ರಥೋತ್ಸವ ನಡೆಯುವುದರಿಂದ ರಥೋತ್ಸವ ವೀಕ್ಷಿಸಲು ದೂರದ ಊರುಗಳಿಂದ ಭಕ್ತರು ಆಗಮಿಸಿದ್ದರು. ರಥೋತ್ಸವ ಜರುಗದೆ ಕೇವಲ ಜೋಡಿ ರಥಗಳಿಗೆ ಪೂಜಿಸುವಲ್ಲಿ ಮಾತ್ರ ಅವಕಾಶವನ್ನು ಮುಜರಾಯಿ ಇಲಾಖೆ ಕಲ್ಪಿಸಿರುವುದನ್ನು ಕಂಡು ಬೇಸರಿಸಿದರು. ವರ್ಷಕ್ಕೆ ಸಾಕಷ್ಟು ವರಮಾನ ಮುಜರಾಯಿ ಇಲಾಖೆಗೆ ದೇಗುಲದಿಂದ ಬರುತ್ತಿದ್ದು ಭಕ್ತರ ಹತ್ತಾರು ವರ್ಷಗಳ ಬೇಡಿಕೆ ಒತ್ತಾಸೆಯಿಂದ ಎರಡು ವರ್ಷಗಳ ಹಿಂದೆ ರಥ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕರೆಯಲಾಗಿತ್ತು. ಎರಡು ವರ್ಷಗಳ ಹಿಂದೆ ರಥ ನಿರ್ಮಿಸಲು ಶ್ರೀರಂಗಪಟ್ಟಣ ತಾಲ್ಲೂಕಿನ ಶಿಲ್ಪಿ ಮುಂದಾಗಿದ್ದು ಕುಂಟುತ್ತ ಸಾಗಿದೆ. ಪರಿಣಾಮ ಕಳೆದ ವರ್ಷ ಹಳೆಯ ರಥಗಳನ್ನು ಹಗ್ಗಕಟ್ಟಿ ಎಳೆಯದೆ ರಥಗಳನ್ನು ನೂಕುವ ಮೂಲಕ ರಥೋತ್ಸವವನ್ನು ಆಚರಿಸಲಾಗಿತ್ತು. ಈ ಬಾರಿ ರಥಮಂಟಪದಿಂದ ಹೊರಗಡೆ ಎಳೆಯದೆ ಸ್ವಸ್ಥಾನದಿಂದ ಒಂದೆರಡು ಮೀಡರ್ ಹೊರಗೆ ತಂದು ರಥಕ್ಕೆ ಸಾಂಕೇತಿಕವಾಗಿ ಮುಜರಾಯಿ ಇಲಾಖೆ ಮಾರ್ಗದರ್ಶನದಂತೆ ಅರ್ಚಕರು ರಥಗಳಿಗೆ ಪೂಜಿಸಿದರು. ಕನಿಷ್ಟ ಉತ್ಸವಮೂರ್ತಿಗಳನ್ನಾದರೂ ರಥಬೀದಿಯಲ್ಲಿ ಮೆರವಣಿಗೆ ಮಾಡಿದ್ದರೆ ದೇವರನ್ನು ಕಣ್ತುಂಬಿಕೊಳ್ಳಬಹುದಿತ್ತು. ಇದಕ್ಕೂ ಅವಕಾಶವನ್ನು ಮುಜರಾಯಿ ಅಧಿಕಾರಿಗಳು ಕಲ್ಪಿಸಲಿಲ್ಲ ಎಂದು ಬೇಸರಿಸಿದರು. ದೂರದ ಊರುಗಳಿಂದ ರಥೋತ್ಸವಕ್ಕಾಗಿ ಬರಲಾಗುತ್ತದೆ. ಕನಿಷ್ಟ ಭಕ್ತರಿಗೆ ಸೌಲಭ್ಯವಿಲ್ಲ. ಹೊಸದಾಗಿ ರಥ ನಿರ್ಮಿಸಲು ಸಾಕಷ್ಟು ಕಾಲವಕಾಶವಿತ್ತು. ಅಧಿಕಾರಿಗಲ ಧೋರಣೆಯಿಂದ ಈ ಬಾರಿ ರಥೋತ್ಸವ ನಡೆಯಲಾಗಲಿಲ್ಲ ಎಂದು ಬೇಸರಿಸಿದರು. ಅರ್ಚಕರು ರಥವನ್ನು ಪೂಜಿಸುತ್ತಿರುವುದನ್ನು ಕಂಡ ಭಕ್ತರು ರಥಕ್ಕೆ ಹಣ್ಣು ಕಾಯಿ ಅರ್ಪಿಸಿ ಧೂಪ ದೀಪಗಳಿಂದ ಬೆಳಗಿದರು. ಪುಷ್ಕರಿಣಿಯಲ್ಲಿ ಮಿಂದು ಭಕ್ತರು ಬಾಲಾಯಲದಲ್ಲಿನ ಸೋಮೇಶ್ವರ ಶಂಭುಲಿಂಗೇಶ್ವರ ಮೂರ್ತಿ ಕುದುರೆಮಂಡಮ್ಮ ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿ ಮಳೆಗಾಗಿ ಪ್ರಾರ್ಥಿಸಿದರು. ಮುಂಬರುವ ವರ್ಷದಲ್ಲಿ ನೂತನ ರಥ ನವೀಕೃತ ದೇಗುಲ ಲೋಕಾರ್ಪಣೆಯಾಗಲಿದೆ. ಭಕ್ತರು ಎಂದಿನಂತೆ ಸಹಕರಿಸಬೇಕು ಎಂದು ತಹಸೀಲ್ದಾರ್ ಎಸ್.ವಿ. ಲೋಕೇಶ್ ಮನವಿ ಮಾಡಿದರು. ಉಪತಹಸೀಲ್ದಾರ್ ವೀಣಾ ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ ಗ್ರಾಮ ಆಡಳಿತಾಧಿಕಾರಿ ಪ್ರಸನ್ನ ತಿಪ್ಪೇಶ್ ಸುನಿಲ್ ಗಾಣಿಗೇರ್ ಗ್ರಾಪಂ. ಸದಸ್ಯ ಈರಾಜು ಭಾಗ್ಯಮ್ಮ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT