ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ರೇಣುಕಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಬಿಡುಗಡೆಗೆ ವಿಶೇಷ ಪೂಜೆ

Published 28 ಜೂನ್ 2024, 14:20 IST
Last Updated 28 ಜೂನ್ 2024, 14:20 IST
ಅಕ್ಷರ ಗಾತ್ರ

ಮಂಡ್ಯ: ನಗರದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ದರ್ಶನ್ ತೂಗದೀಪ ಅಭಿಮಾನಿಗಳ ಒಕ್ಕೂಟ, ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ನಟ ದರ್ಶನ್‌ ಅವರು ಜೈಲಿನಿಂದ ಬಿಡುಗಡೆ ಆಗಬೇಕು ಎಂದು ವಿಶೇಷ ಪೂಜೆಯನ್ನು ಶುಕ್ರವಾರ ಮಾಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್, ‘ಕನ್ನಡ ನಾಡಿನ ಮೆಚ್ಚಿನ ನಾಯಕ ನಟ ದರ್ಶನ್ ತೂಗದೀಪ ಅವರಿಗೆ ಬಂದಿರುವ ಸಂಕಷ್ಟವನ್ನು ಪಾರು ಮಾಡಬೇಕೆಂದು ದೇಲವಾಯದಲ್ಲಿ ಪೂಜೆ ಸಲ್ಲಿಸುತ್ತಿದ್ದೇವೆ’ ಎಂದರು.

ನಮ್ಮ ನಟ ದರ್ಶನ್‌ ಅವರು ಅಭಿಮಾನಿಗಳ ಮನಸ‌ಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಶ್ರೀಕಾಳಿಕಾಂಬ ಮತ್ತು ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ಅವರಲ್ಲಿ ವಿಶೇಷ ಪೂಜೆ ನಡೆಸಿ ಪ್ರಾರ್ಥನೆ ಮಾಡಿಕೊಂಡಿದ್ದೇವೆ. ಶೀಘ್ರ ದರ್ಶನ್‌ ಅವರು ಜೈಲಿನಿಂದ ಹೊರ ಬರಬೇಕು ಎಂದರು.

ಅಭಿಮಾನಿಗಳಾದ ಕಾರ್ತಿಕ್‌ ಕಾವೇರಿನಗರ, ಮಂಜುನಾಥ್, ನಾಗಣ್ಣ, ದರ್ಶನ್, ಕಿಶನ್, ನಿತಿನ್, ಅಭಿ, ವಿವೇಕ್, ಶೇಖರ್, ಸಿಂಹಾದ್ರಿ, ಪವನ್  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT