ಸೋಮವಾರ, ನವೆಂಬರ್ 18, 2019
25 °C

ಮದ್ದೂರು: ಶನಿ ದೇವಾಲಯದೊಳಗೆ ಬಂದ ಕಾಗೆ, ಭಕ್ತರಲ್ಲಿ ಆಶ್ಚರ್ಯ

Published:
Updated:

ಮದ್ದೂರು: ತಾಲ್ಲೂಕಿನ ಚಾಮನಹಳ್ಳಿಯ ಶನಿ ದೇವಾಲಯದೊಳಗೆ ಕಾಗೆಯೊಂದು ಪ್ರವೇಶಿಸಿದ್ದು, ಭಕ್ತರಲ್ಲಿ ಆಶ್ಚರ್ಯ ಮೂಡಿಸಿದೆ.

ಇಂದು ಬೆಳಿಗ್ಗೆ 9 ಗಂಟೆಗೆ ಅರ್ಚಕರಾದ ಶ್ರೀನಿವಾಸ, ಕೃಷ್ಣ ಅವರು ಅಭಿಷೇಕ ಮಾಡುವಾಗ ಕಾಗೆ ದೇವಾಲಯ ಪ್ರವೇಶಿಸಿದೆ. ಕಾಗೆಗೂ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗಿದೆ. ಅದು ಅಭಿಷೇಕದ ಹಾಲು ಕುಡಿದು ಶನಿದೇವರ ವಿಗ್ರಹದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಿದೆ.

ಶನಿವಾರವಾದ್ದರಿಂದ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಶನಿ ವಾಹನ ಕಾಗೆಯ ದರ್ಶನ ಪಡೆಯಲು ನೂಕುನುಗ್ಗಲು ಉಂಟಾಗಿದೆ.  

ಪ್ರತಿಕ್ರಿಯಿಸಿ (+)