ಮಂಡ್ಯ: ತಾಲ್ಲೂಕಿನ ಆಲಕೆರೆ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಗ್ಗಹಳ್ಳಿ ಗ್ರಾಮ ಪಂಚಾಯಿತಿಯ ಹೆಚ್ಚುವರಿ ಪ್ರಭಾರ ಪಿಡಿಒ ಆಗಿದ್ದ ಸಿ.ಶ್ರೀನಿವಾಸಯ್ಯ ಅವರನ್ನು ಕರ್ತವ್ಯಲೋಪ ಆರೋಪದ ಮೇರೆಗೆ ಅಮಾನತುಗೊಳಿಸಿ ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತಗ್ಗಹಳ್ಳಿ ಗ್ರಾ.ಪಂ. ಹೆಚ್ಚುವರಿ ಪ್ರಭಾರ ಪಿಡಿಒ ಆಗಿದ್ದ ಸಂದರ್ಭದಲ್ಲಿ ಮೂರೇ ದಿನಗಳಲ್ಲಿ ಯಾವುದೇ ಸಾಮಗ್ರಿ ಖರೀದಿ ಮಾಡದೇ ₹54 ಲಕ್ಷಕ್ಕೂ ಹೆಚ್ಚು ಹಣವನ್ನು ಏಜೆನ್ಸಿಯೊಂದಕ್ಕೆ ಅಕ್ರಮವಾಗಿ ಪಾವತಿಸಲು ಯತ್ನಿಸಿರುವ ಆರೋಪ ಕೇಳಿ ಬಂದಿತ್ತು.

ಈ ಕುರಿತು ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ₹45 ಲಕ್ಷ ವರ್ಗಾವಣೆಗೆ ಮೇಲಧಿಕಾರಿಗಳು ತಡೆಯೊಡ್ಡಿದ್ದರು. ಗ್ರಾಮ ಪಂಚಾಯಿತಿಯ ಬ್ಯಾಂಕ್ ಖಾತೆಯನ್ನು ಬಂದ್ ಮಾಡಿಸಿದ್ದರು.

ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಸಾಮಗ್ರಿಗಳು ಮತ್ತು ಬೀದಿದೀಪಗಳ ಖರೀದಿಗೆಂದು ಲೆಕ್ಕ ತೋರಿಸಿ, ಏಜೆನ್ಸಿಗೆ ಆನ್ಲೈನ್ ಮೂಲಕ ಹಣ ಪಾವತಿಸಲು ಯತ್ನಿಸಿರುವ ಆರೋಪ ಕೇಳಿಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.