ಸೋಮವಾರ, ಜುಲೈ 4, 2022
21 °C

ಉಗ್ರರ ದಾಳಿ: ಮಂಡ್ಯ ಯೋಧ ಹುತಾತ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕಾಶ್ಮೀರ ಉಗ್ರರ ದಾಳಿಯಿಂದ ಹುತಾತ್ಮರಾದ ಸಿ ಆರ್ ಪಿ ಎಫ್ ಯೋಧರಲ್ಲಿ ಜಿಲ್ಲೆಯ ಯೋಧರೊಬ್ಬರು ಸೇರಿದ್ದಾರೆ.
ಮದ್ದೂರು ತಾಲ್ಲೂಕು, ಗುಡಿಗೆರೆ ಗ್ರಾಮದ ಎಚ್.ಗುರು (33) ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧ.

ಇದನ್ನೂ ಓದಿಪುಲ್ವಾಮದಲ್ಲಿ ಉಗ್ರರ ದಾಳಿಗೆ 40 ಯೋಧರು ಹುತಾತ್ಮ

ಅವರು ಹೊನ್ನಯ್ಯ- ಚಿಕ್ಕಹೊಳ್ಳಮ್ಮ ದಂಪತಿಯ ಹಿರಿಯ ಪುತ್ರ. ಇನ್ನಿಬ್ಬರು ಪುತ್ರರು ಇದ್ದಾರೆ. ಎಚ್.ಗುರು ಕಳೆದ 8 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಕನಕಪುರ ತಾಲ್ಲೂಕು ಸಾಸಲಾಪುರ ಗ್ರಾಮದ ಕಲಾವತಿ ಅವರನ್ನು ವಿವಾಹವಾಗಿದ್ದರು. ಮದುವೆಯ ನಂತರ ಪತ್ನಿಯನ್ನು ಸಾಸಲಾಪುರದಲ್ಲೇ ಬಿಟ್ಟು ಕರ್ತವ್ಯಕ್ಕೆ ತೆರಳಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದ ಸದಸ್ಯರು ದುಃಖದಲ್ಲಿ ಮುಳುಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು