ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೇಲುಕೋಟೆ ಚೆಲುವ ನಾರಾಯಣ ಸ್ವಾಮಿಗೆ ₹75 ಲಕ್ಷ ಮೌಲ್ಯದ ಚಿನ್ನಾಭರಣ ನೀಡಿದ ವೃದ್ಧೆ

Published 10 ಜುಲೈ 2024, 14:30 IST
Last Updated 10 ಜುಲೈ 2024, 14:30 IST
ಅಕ್ಷರ ಗಾತ್ರ

ಮೇಲುಕೋಟೆ: ಇಲ್ಲಿನ ಚೆಲುವನಾರಾಯಣ ಸ್ವಾಮಿ ದೇವಾಲಯಕ್ಕೆ ಮೈಸೂರು ಕುವೆಂಪುನಗರದ ನಿವಾಸಿ ಡಾ. ಲಕ್ಷ್ಮಮ್ಮ ಎಂಬುವವರು ಸುಮಾರು ₹75 ಲಕ್ಷ ಮೌಲ್ಯದ ಚಿನ್ನಾಭರಣ ಕೊಡುಗೆಯಾಗಿ ನೀಡಿದ್ದಾರೆ.

ಚೆಲುವನಾರಾಯಣ ಸ್ವಾಮಿಯ ಪರಮಭಕ್ತೆಯಾದ 70 ವರ್ಷದ ಲಕ್ಷ್ಮಮ್ಮ ತಮ್ಮ ನಿವಾಸದಲ್ಲಿ ಬಳಿಸಿದ ಚಿನ್ನ ಮತ್ತು ಬೆಳ್ಳಿಯ ಆಭರಣವನ್ನು ಎರಡು ಟ್ರಂಕ್‌ನಲ್ಲಿ ತುಂಬಿ ದೇವಾಲಯದ ಇಒ ಮಹೇಶ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.

ಸ್ಥಳೀಯ ಅಕ್ಕಸಾಲಿಗರನ್ನು ಕರೆಸಿದ ಅಧಿಕಾರಿ ಚಿನ್ನ ಬೆಳ್ಳಿಯ ಮೌಲ್ಯಮಾಪನ ಮಾಡಿಸಿದ್ದಾರೆ. ದೀಪದ ಕಂಬ, ಚೊಂಬು, ಆರತಿ ತಟ್ಟೆ ಸೇರಿದಂತೆ ಅಂದಾಜು 25 ಕೆ.ಜಿ ಬೆಳ್ಳಿ, ಬಂಗಾರದ ಬಳೆ, ಸರ ಸೇರಿದಂತೆ 250 ಗ್ರಾಂ ಬಂಗಾರದ ಆಭರಣಗಳು ತೂಕದ ಮೂಲಕ ಲೆಕ್ಕಾಚಾರ ಮಾಡಿ, ಭದ್ರಪಡಿಸಲಾಗಿದೆ.

ತನ್ನ ಕುಟುಂಬದ ಅಭರಣಗಳು ಅನ್ಯರ ಪಾಲಾಗುವ ಬದಲು ದೇವಾಲಯಕ್ಕೆ ಸೇರಲಿ ಎಂಬ ಆಶಯದಿಂದ ದೇವಾಲಯಕ್ಕೆ ದಾನ ಮಾಡಿದ್ದಾರೆ. ಮೈಸೂರಿನ ಕುವೆಂಪು ನಗರದಲ್ಲಿ ಒಬ್ಬರೇ ವಾಸವಿದ್ದು ಮೇಲುಕೋಟೆಯ ಸೇರಿದ ಮಗಳಾಗಿದ್ದಾರೆ ಎನ್ನಲಾಗಿದೆ.

ಬೆಳ್ಳಿಯ ಪದಾರ್ಥಗಳು
ಬೆಳ್ಳಿಯ ಪದಾರ್ಥಗಳು
ಬೆಳ್ಳಿಯ ಆಭರಣಗಳು
ಬೆಳ್ಳಿಯ ಆಭರಣಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT