ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕುವೆಂಪು ಸಾಹಿತ್ಯದಲ್ಲಿ ಜೀವನ ಮೌಲ್ಯ’

ಲಯನ್ಸ್ ಕ್ಲಬ್ ವತಿಯಿಂದ ಕುವೆಂಪು ದಿನಾಚರಣೆ
Published 31 ಡಿಸೆಂಬರ್ 2023, 14:05 IST
Last Updated 31 ಡಿಸೆಂಬರ್ 2023, 14:05 IST
ಅಕ್ಷರ ಗಾತ್ರ

ಹಲಗೂರು: ‘ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕ ಚಿಂತನೆಗಳು ಮತ್ತು ಸಂದೇಶಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೇ ಉತ್ತಮ ಸಮಾಜ ಕಟ್ಟಲು ಸಾಧ್ಯವಿದೆ’ ಎಂದು ಶಿಕ್ಷಕ ಶಿವರಾಮು ಅಭಿಪ್ರಾಯ ಪಟ್ಟರು.

ಹಲಗೂರಿನ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ಕುವೆಂಪು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ವಿಶ್ವಮಾನವ ಎಂದು ಖ್ಯಾತಿ ಪಡೆದ ಕುವೆಂಪು ಅವರ ಸಾಹಿತ್ಯ ಕೃತಿಗಳಲ್ಲಿ ಜೀವನ ಮೌಲ್ಯಗಳು ಅಡಗಿವೆ. ತಮ್ಮ ಅದ್ಭುತ ಚಿಂತನೆ ವಿಚಾರ ಧಾರೆಗಳನ್ನು ಬರಹಗಳ ಮೂಲಕ ವಿಶ್ವಕ್ಕೆ ಉತ್ತಮ ಸಂದೇಶ ನೀಡಿ ಅಜಾರಮರವಾಗಿ ಉಳಿದಿದ್ದಾರೆ’ ಎಂದು ಸ್ಮರಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಶ್ರೀನಿವಾಸಚಾರಿ, ಖಜಾಂಚಿ ಡಿ.ಎಲ್. ಮಾದೇಗೌಡ, ಸದಸ್ಯರಾದ ಎಚ್.ಆರ್.ಪದ್ಮನಾಭ್, ಎ.ಎಸ್.ದೇವರಾಜು, ಡಾ.ಶಂಷುದ್ದೀನ್, ಎನ್.ಕೆ.ಕುಮಾರ್, ಎ.ಟಿ.ಶ್ರೀನಿವಾಸ್, ಎಲ್.ಸಿ.ಪುಟ್ಟಸ್ವಾಮಿ, ಪ್ರವೀಣ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT