ಮಂಡ್ಯ: ಮನೆಯಲ್ಲಿ ಕಳವು ಮತ್ತು ಮಹಿಳೆಯರಿಂದ ಚಿನ್ನಾಭರಣ ದೋಚಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅಂದಾಜು ₹48 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, ಕಾರು, ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ವೃದ್ಧ ಮಹಿಳೆಯರಿಗೆ ಟೀ ಮತ್ತು ಜ್ಯೂಸ್ನಲ್ಲಿ ಪ್ರಜ್ಞೆ ತಪ್ಪುವ ಮಾತ್ರೆ ಬೆರಸಿ, ಅವರ ಮೈಮೇಲಿನ ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಬೆಂಗಳೂರು ನಗರದ ಬನ್ನೇರಘಟ್ಟದ ಪಿಳ್ಳಗಾನಹಳ್ಳಿಯ ಮುನಾಜೀರ್ (45) ಎಂಬಾತನನ್ನು ಹಲಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ವಿಜಯನಗರದ ಜೆ.ಸಯ್ಯದ್ ಅಹಮದ್ (43) ಮತ್ತು ಬೆಂಗಳೂರಿನ ಕೆ.ಆರ್.ಪುರಂ, ದೇವಸಂದ್ರದ ತಸ್ಲೀಂ ಪಾಷಾ (43) ಈ ಇಬ್ಬರನ್ನು ಮಳವಳ್ಳಿ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೇ 8ರಂದು ಮಳವಳ್ಳಿ ತಾಲ್ಲೂಕು ಹಲಗೂರು ಪೊಲೀಸ್ ಠಾಣೆಯಲ್ಲಿ ನಾಗೇಂದ್ರ ಎಂಬುವರು ನೀಡಿದ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳು ವೃದ್ಧೆ ಕಮಲಮ್ಮ ಅವರನ್ನು ಪರಿಚಿತರಂತೆ ಮಾತನಾಡಿಸಿ, ಸಿಹಿ ತಿನ್ನಲು ಕೊಟ್ಟಿದ್ದರು. ಅದನ್ನು ಸೇವಿಸಿದ ಕಮಲಮ್ಮ ಅವರು ಪ್ರಜ್ಞೆ ಕಳೆದುಕೊಂಡರು. ಆಗ ಆರೋಪಿಗಳು ಆಕೆಯಿಂದ ಚಿನ್ನದ ಬಳೆಗಳು, ಸರ ಸೇರಿದಂತೆ 126 ಗ್ರಾಂ ತೂಕದ ಸುಮಾರು ₹12 ಲಕ್ಷ ಮೌಲ್ಯದ ಚಿನ್ನಾಭರಣ ಕಸಿದುಕೊಂಡು ಪರಾರಿಯಾಗಿದ್ದರು ಎಂದು ಎಸ್ಪಿ ತಿಳಿಸಿದರು.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಹಲಗೂರು ಪೊಲೀಸ್ ಠಾಣೆ, ಸಾತನೂರು ಠಾಣೆ, ಕನಕಪುರ ಠಾಣೆಗಳಲ್ಲಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈತನಿಂದ ಒಟ್ಟು ₹22.60 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಸ್ಕೂಟರ್ ವಶಪಡಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಬೀರುವಿನಲ್ಲಿದ್ದ ಚಿನ್ನಾಭರಣ ಕಳವು:

ಮಳವಳ್ಳಿ ತಾಲ್ಲೂಕು ಹೊಸದೊಡ್ಡಿ ಗ್ರಾಮದ ಪುಟ್ಟವೆಂಕಟಯ್ಯ ಎಂಬುವವರ ಮನೆಯಲ್ಲಿ ಮಾರ್ಚ್ ತಿಂಗಳಲ್ಲಿ ಕಳ್ಳತನ ನಡೆದಿತ್ತು. ಮನೆಯ ಬೀರುವಿನಲ್ಲಿದ್ದ ₹4.90 ಲಕ್ಷ ಮೌಲ್ಯದ 75 ಗ್ರಾಂ ತೂಕದ ಚಿನ್ನಾಭರಣವನ್ನು ಆರೋಪಿಗಳು ಕಳವು ಮಾಡಿದ್ದರು.

ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಮತ್ತಷ್ಟು ಕಳವು ಪ್ರಕರಣಗಳ ಬಗ್ಗೆ ಬಾಯಿಬಿಟ್ಟರು. ಮಳವಳ್ಳಿ ಗ್ರಾಮಾಂತರ ಠಾಣೆ, ಮಂಡ್ಯ ಪಶ್ಚಿಮ ಠಾಣೆ, ಮಳವಳ್ಳಿ ಟೌನ್, ತಲಘಟ್ಟಪುರ, ಕೆಸ್ತೂರು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಇವರಿಂದ 319 ಗ್ರಾಂ ತೂಕದ ಚಿನ್ನಾಭರಣಗಳು, 132 ಗ್ರಾಂ ತೂಕದ ಬೆಳ್ಳಿ ಸಾಮಗ್ರಿಗಳು, ಕೃತ್ಯಕ್ಕೆ ಬಳಿಸಿದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ₹25.62 ಲಕ್ಷ ಎಂದು ಎಸ್ಪಿ ತಿಳಿಸಿದರು.

ಮಳವಳ್ಳಿ ಡಿವೈಎಸ್ಪಿ ವಿ.ಕೃಷ್ಣಪ್ಪ, ಹಲಗೂರು ಸಿಪಿಐ ಶ್ರೀಧರ್ ಬಿ.ಎಸ್, ಪಿಎಸ್ಐ ಲೋಕೇಶ್, ಮಳವಳ್ಳಿ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್, ಪಿಎಸ್ಐಗಳಾದ ಶ್ರವಣ್ ದಾಸರಡ್ಡಿ, ಶಿವಶಂಕರ್ ಮತ್ತು ಪೊಲೀಸ್ ಸಿಬ್ಬಂದಿಯನ್ನು ಎಸ್ಪಿ ಅವರು ಅಭಿನಂದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಈ. ಗಂಗಾಧರಸ್ವಾಮಿ, ಪೊಲೀಸ್ ಅಧಿಕಾರಿಗಳು ಇದ್ದರು.

ಪುಡಿರೌಡಿಗಳ ವಿರುದ್ಧ ರೌಡಿಶೀಟರ್ ತೆರೆಯುತ್ತೇವೆ ಕ್ಲಬ್ಗಳು ನಿಯಮ ಉಲ್ಲಂಘಿಸಿದರೆ ಲೈಸೆನ್ಸ್ ರದ್ದು ಬೆಟ್ಟಿಂಗ್: 7 ಪ್ರಕರಣ ದಾಖಲು

ಕತ್ತರಘಟ್ಟ ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ. ಅನಿಲ್ಕುಮಾರ್ನನ್ನು ವಶಕ್ಕೆ ಪಡೆದಿದ್ದೇವೆ. ಎಫ್ಎಸ್ಎಲ್ ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ
– ಮಲ್ಲಿಕಾರ್ಜುನ ಬಾಲದಂಡಿ ಎಸ್ಪಿ ಮಂಡ್ಯ

‘ಬೆಟ್ಟಿಂಗ್ ವೇಶ್ಯಾವಾಟಿಕೆ ವಿರುದ್ಧ ಕ್ರಮ’ ‘ಜಿಲ್ಲೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮತ್ತು ಸೆಲೂನ್ ಹೆಸರಿನಲ್ಲಿ ನಡೆಯುವ ವೇಶ್ಯಾವಾಟಿಕೆ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ. ಐಪಿಎಲ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ ಈಗಾಗಲೇ 7 ಪ್ರಕರಣಗಳು ದಾಖಲಾಗಿವೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು. ಮಂಡ್ಯ ನಗರದಲ್ಲಿ ಇತ್ತೀಚೆಗೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು ಒಬ್ಬರನ್ನು ಬಂಧಿಸಿದ್ದೇವೆ. ಸೆಲೂನ್ ಲೈಸೆನ್ಸ್ ಅನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಅಪರಾಧ ಪ್ರಕರಣಗಳಿಗೆ ಪೊಲೀಸರ ಬೆಂಬಲ’ ಎಂಬ ಶಾಸಕರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕ್ಲಬ್ ನಡೆಸುವಲ್ಲಿ ನಿಯಮ ಉಲ್ಲಂಘನೆಯಾಗಿದ್ದರೆ ಲೈಸೆನ್ಸ್ ರದ್ದು ಮಾಡಲಾಗುವುದು. ಸ್ಥಳೀಯ ಪೊಲೀಸರು ಭಾಗಿಯಾಗಿದ್ದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ನಗರದಲ್ಲಿ ಈಚೆಗೆ ರೌಡಿಗಳ ಪರೇಡ್ ನಡೆಸಿ ವಾರ್ನಿಂಗ್ ನೀಡಿದ್ದೇನೆ. ಪುಡಿರೌಡಿಗಳ ವಿರುದ್ಧ ರೌಡಿಶೀಟರ್ ತೆರೆದು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.