ಮಂಡ್ಯ: ‘ಕೃಷಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೈತರು ಭಾರತ ದೇಶದ ಬೆನ್ನೆಲುಬು’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ಡಿಸೆಂಬರ್ನಲ್ಲಿ ನಡೆಯಲಿರುವ ಕೃಷಿ ಮೇಳ-2025ರ ಪ್ರಚಾರದ ಜಾಥಾಕ್ಕೆ ಜಿಲ್ಲಾಧಿಕಾರಿ ಕಚೇರಿಯ ಎದುರು ಚಾಲನೆ ನೀಡಿ ಮಾತನಾಡಿದರು.

ಮಂಡ್ಯ ಕೃಷಿ ಪ್ರಧಾನವಾಗಿರುವ ಜಿಲ್ಲೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕಳೆದ ವರ್ಷ ಸ್ಥಾಪನೆಯಾಗಿರುವುದು ಸಂತಸದ ಸಂಗತಿ. ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯಾದ ಆರು ತಿಂಗಳಲ್ಲಿ ಯು.ಜಿ.ಸಿ ಅನುಮೋದನೆ ದೊರೆತಿರುವುದು ವಿಶ್ವವಿದ್ಯಾಲಯದ ಸಾಧನೆ ಮೆರುಗು ನೀಡಿದೆ ಎಂದರು.

ಡಿಸೆಂಬರ್ 5, 6 ಹಾಗೂ 7 ಮೂರು ದಿನಗಳ ಕಾಲ ಕೃಷಿ ಮೇಳವನ್ನು ಮಂಡ್ಯ ಕೃಷಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಕೃಷಿ ಮೇಳ ರೈತರಿಗೆ ಅತ್ಯಮೂಲ್ಯವಾದ ಕಾರ್ಯಕ್ರಮವಾಗಿದೆ. ಕೃಷಿಯಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ಬಳಸಿ ಆದಾಯ ಹೆಚ್ಚಿಸಿ ರೈತರು ಅಭಿವೃದ್ಧಿ ಹೊಂದಲು ಅರಿವು ಮೂಡಿಸುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ‘ಕೃಷಿಗೆ ಅನುಕೂಲವಾಗುವ ಸಾಕಷ್ಟು ಪ್ರಾತ್ಯಕ್ಷಿಕೆಗಳನ್ನು ಕೃಷಿ ಮೇಳದಲ್ಲಿ ಕಾಣಬಹುದು. ನೆರೆ ಜಿಲ್ಲೆಯ ರೈತರು ಸಹ ಸದರಿ ಮೇಳದ ಪ್ರಯೋಜನ ಪಡೆದುಕೊಳ್ಳಬಹುದು. ಸದರಿ ಕೃಷಿ ಮೇಳದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪೊಲೀಸ್ ಇಲಾಖೆ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದರು.

ಕೀಟ ಪ್ರಪಂಚದ ಕುರಿತಾಗಿಯೂ ಕೃಷಿ ಮೇಳದಲ್ಲಿ ತಿಳಿಸಲಾಗುವುದು ಮಕ್ಕಳು ಸಹ ಇದನ್ನು ವೀಕ್ಷಿಸಿ ವಿಷಯ ತಿಳಿದುಕೊಳ್ಳಬಹುದು. ಹೊಸ ತಂತ್ರಜ್ಞಾನ ಬಳಸಿ ಸಮಗ್ರ ಕೃಷಿಯಿಂದ ಹೇಗೆ ರೈತರು ಆದಾಯ ಗಳಿಸಬಹುದು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಕೃಷಿ ಮೇಳದ ಪ್ರಯೋಜನ ಪಡೆದು ರೈತರು ಹೆಚ್ಚು ಆದಾಯ ಗಳಿಸುವುದು ನಮ್ಮ ಉದ್ದೇಶ ಎಂದು ತಿಳಿಸಿದರು.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಡೀನ್ ಫಾತಿಮಾ, ವಲಯ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕ ಶಿವಕುಮಾರ್, ಭತ್ತದ ತಳಿ ವಿಜ್ಞಾನಿ ರಾಮಚಂದ್ರ, ಕೃಷಿ ಇಲಾಖೆಯ ವ್ಯವಸ್ಥಾಪಕ ತಿಮ್ಮೇಗೌಡ, ಕೃಷಿ ವಿಶ್ವವಿದ್ಯಾಲಯದ ಆಶಾ, ಸುಮಾ, ವಿದ್ಯಾ, ಭಾಗ್ಯಲಕ್ಷ್ಮಿ ಭಾಗವಹಿಸಿದ್ದರು.

350 ಕೃಷಿ ಮಳಿಗೆಗಳು

ಮಂಡ್ಯ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹರಿಣಿ ಕುಮಾರ್ ಅವರು ಮಾತನಾಡಿ‘ಕೃಷಿ ಮೇಳದಲ್ಲಿ 350ಕ್ಕೂ ಹೆಚ್ಚು ಕೃಷಿ ಮಳಿಗೆಗಳನ್ನು ತೆರೆಯಲಾಗುವುದು. ಕೃಷಿಯಲ್ಲಿನ ವೈಜ್ಞಾನಿಕ ಹಾಗೂ ತಾಂತ್ರಿಕತೆಯ ಕುರಿತಾಗಿ ಮೇಳದಲ್ಲಿ ತಿಳಿಸಲಾಗುವುದು. ಸುಮಾರು 60 ಎಕರೆ ಜಾಗದಲ್ಲಿ ಕೃಷಿ ಬೆಳೆಗೆ ಬೇಕಾದ ಬೆಳೆಗಳು ಬೆಳೆಗಳ ಪದ್ಧತಿ ಅಂತರ ಬೆಳೆಗಳು ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಪ್ರಾತ್ಯಕ್ಷಿಕೆಗಳನ್ನು ನೇರ ಪ್ರದರ್ಶನದ ಮೂಲಕ ಕೃಷಿ ಮೇಳದಲ್ಲಿ ಕಾಣಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.