ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಶು ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಿ: ಶಾಸಕ ಎಚ್.ಟಿ. ಮಂಜು

Published : 21 ಆಗಸ್ಟ್ 2024, 13:41 IST
Last Updated : 21 ಆಗಸ್ಟ್ 2024, 13:41 IST
ಫಾಲೋ ಮಾಡಿ
Comments

ಸಂತೇಬಾಚಹಳ್ಳಿ: ಜಾನುವಾರುಗಳಿಗೆ ಪಶು ವೈದ್ಯರು ಸಕಾಲಕ್ಕೆ ಆಗಮಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಶಾಸಕ ಎಚ್.ಟಿ. ಮಂಜು ತಿಳಿಸಿದರು.

ಸಂತೇಬಾಚಹಳ್ಳಿ ಹೋಬಳಿಯ ಸಾರಂಗಿ ಗ್ರಾಮದಲ್ಲಿ ತುರ್ತು ಚಿಕಿತ್ಸೆಗೆ ಸಹಾಯವಾಣಿ ನಾಮಫಲಕ ಹಾಗೂ ಸರ್ಕಾರಿ ನೂತನ ಪಶು ಚಿಕಿತ್ಸಾಲಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ರೈತರು ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಆದ್ದರಿಂದ ರೈತರ ಜೀವನಾಡಿಯಾಗಿರುವ ರಾಸುಗಳು ಅನಾರೋಗ್ಯಕ್ಕೆ ಸಿಲುಕಿದ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಮಯದಲ್ಲಿ ಕರ್ತವ್ಯ ಲೋಪವು ಸಂಭವಿಸಿವೆ. ವೈದ್ಯರು ಸಕಾಲಕ್ಕೆ ಆಗಮಿಸಿ ಚಿಕಿತ್ಸೆ ನೀಡುವುದಿಲ್ಲ ಎಂಬ ದೂರುಗಳು ಇವೆ. ರೈತರಿಗೆ ಅನುಕೂಲವಾಗುವಂತೆ ಉತ್ತಮ ಕೆಲಸ ಮಾಡಬೇಕು’ ಎಂದು ಹೇಳಿ

‘ಪಶು ಸಂಗೋಪನಾ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಿ ಪಶು ಆಸ್ಪತ್ರೆ ತರಲಾಗಿದೆ. ಜಾನುವಾರಿಗೆ ತುರ್ತು ಚಿಕಿತ್ಸೆ 1962ಕ್ಕೆ ಕರೆ ಮಾಡಿ ಉಚಿತವಾಗಿ ಚಿಕಿತ್ಸೆ ಕೊಡಿಸಬೇಕು. ನಾನು ರೈತರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ’ ಎಂದರು.

ಜಿಲ್ಲಾ ಪಶು ಸಂಗೋಪನೆ ಉಪ ನಿರ್ದೇಶಕ ಡಾ. ಎಸ್. ಸಿ.ಸುರೇಶ, ಸಂಘದ ಅಧ್ಯಕ್ಷ ಸಾರಂಗಿ ನಾಗರಾಜು, ಪಶು ವೈದ್ಯಾಧಿಕಾರಿ ಡಾ. ದೇವರಾಜು, ಡಾ. ರವಿಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ಪ್ರತಾಪ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾಕ್ಷಮ್ಮ, ಉಪಾಧ್ಯಕ್ಷೆ ರಾಜು, ಮುಖಂಡರಾದ ಮೋಹನ್ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್, ನಂಜಪ್ಪ, ಆನಂದ್, ಮಂಜು, ಹೇಮಾ ನವೀನ್, ಸೌಭಾಗ್ಯ, ಮೀನಾಕ್ಷಿ, ಪ್ರೇಮಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT