ಕೃಷಿಗೆ ಒತ್ತು ನೀಡಿಲ್ಲ

ಕರ್ನಾಟಕವು ಶೇ60 ರಷ್ಟು ಕೃಷಿಯಾಧಾರಿತ ರಾಜ್ಯವಾಗಿದ್ದು, ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಬಜೆಟ್ನಲ್ಲಿ ಯಾವುದೇ ಒತ್ತು ನೀಡಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್, ರಾಜ್ಯಕ್ಕೆ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ. ರಾಜ್ಯದ 19 ಸಂಸದರಿದ್ದು, ಮೂವರು ಮಂತ್ರಿಗಳಿದ್ದಾರೆ. ಬಿಜೆಪಿ ಸಂಸದರು, ಮಂತ್ರಿಗಳು ಒತ್ತಡ ಹಾಕಿ ರಾಜ್ಯಕ್ಕೆ ಯೋಜನೆ ತರಲು ಮುಂದಾಗಬೇಕಿತ್ತು. ಅದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರೈತ, ಜನರ ವಿರೋಧಿ ಬಜೆಟ್ ಆಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಬಜೆಟ್ ಮಂಡಿಸಿ ತನ್ನದೇ ಬೆನ್ನು ತಟ್ಟಿಕೊಳ್ಳುತ್ತಿದೆ. ಇದರಲ್ಲಿ ಜನರಿಗೆ ಅನುಕೂಲವಾಗುವಂಥಹ ಯಾವುದೇ ಯೋಜನೆಗಳಿಲ್ಲ.

ಎನ್. ಚಲುವರಾಯಸ್ವಾಮಿ, ಸಚಿವ

ಉತ್ತಮ ಬಜೆಟ್

ಇದೊಂದು ಉತ್ತಮ ಬಜೆಟ್ ಆಗಿದೆ. ವೃದ್ಧರಿಗೆ ಮೆಡಿಕಲ್ ಕೇರ್ ಸೌಲಭ್ಯ, ಕೈಗಾರಿಕಾ ಕ್ಲಸ್ಟರ್ಗಳ ನವೀಕರಣ, ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೇಗೇರಿಸುವುದು, ಕೌಶಲಾಧಾರಿತ ಉದ್ಯೋಗಕ್ಕೆ ಒತ್ತು, ರೈತರ ಆದಾಯ ದ್ವಿಗುಣಗೊಳಿಸುವಂತಹ ಯೋಜನೆ ಘೋಷಣೆ ಮಾಡಲಾಗಿದೆ. ಒಟ್ಟಾರೆ ವಿಕಸಿತ ಭಾರತಕ್ಕೆ ಪೂರಕವಾದ ಬಜೆಟ್.

ಸಿ.ಪಿ.ಉಮೇಶ್, ಮಾಜಿ ಅಧ್ಯಕ್ಷ, ಎಂಡಿಸಿಸಿ ಬ್ಯಾಂಕ್

ನಿರಾಶಾದಾಯಕ

ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ನಿರಾಶಾದಾಯಕವಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ಮೇಲಿನ ಬರೆ ಹಾಗೆ ಉಳಿದಿದೆ. ಕೆಲವು ವಸ್ತುಗಳ ಮೇಲೆ ಜಿಎಸ್ಟಿ ಕಡಿತಗೊಳಿಸಿದ್ದು ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಯಾವುದೇ ಅನುಕೂಲವಿಲ್ಲ.

ಜಯಲಕ್ಷ್ಮಿ ವೆಂಕಟೇಗೌಡ, ಭಾರತೀ ನಗರ

ಜನ ವಿರೋಧಿ

ಕೇಂದ್ರದ ಬಜೆಟ್ ನಿರೀಕ್ಷೆಯಂತೆ ಜನವಿರೋಧಿಯಾಗಿದೆ. ದುಡಿಯುವ ವರ್ಗದ ಜನರಿಗೆ ದ್ರೋಹ ಬಗೆದಿದೆ. ಗ್ರಾಮೀಣ ಉದ್ಯೋಗ ಯೋಜನೆಗಳಿಗೆ ಕಡಿಮೆ ಅನುದಾನ ನೀಡಿದೆ. ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮಗಳಿಲ್ಲ.ಇಂಧನ, ಆಹಾರ ಪದಾರ್ಥ, ಔಷಧಿ ಬೆಲೆ ಏರಿಕೆಗೆ ಸ್ಪಷ್ಟ ಪರಿಹಾರ ಇಲ್ಲ ಹಾಗಾಗಿ ಇದೊಂದು ಜನಸಾಮಾನ್ಯರ ವಿರೋಧಿ ಬಜೆಟ್

ದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ

ಒಕ್ಕೂಟ ತತ್ವದ ವಿರೋಧಿ

ಇಂದು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಬಡವರು ಮತ್ತು ಒಕ್ಕೂಟ ತತ್ವದ ವಿರೋಧಿಯಾಗಿದೆ. ಹಣಕಾಸು ಶಿಸ್ತಿನ ಹೆಸರಿನಲ್ಲಿ ಶಿಕ್ಷಣ, ಆರೋಗ್ಯ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನದಲ್ಲಿ ಗಣನೀಯ ಕಡಿತ ಮಾಡಲಾಗಿದೆ. ರಾಜ್ಯ ಸರ್ಕಾರಗಳಿಗೆ ಬರಬೇಕಾಗಿದ್ದ ಹಣದಲ್ಲಿ ₹2 ಲಕ್ಷ ಕೋಟಿ ಕಡಿತ ಮಾಡಲಾಗಿದೆ. ಶ್ರೀಮಂತರ ಮೇಲೆ ಹೊಸ ತೆರಿಗೆ ವಿಧಿಸದ ಬಜೆಟ್, ಹಿಂದಿನ ವರ್ಷದ ತೆರಿಗೆ ಸಂಗ್ರಹದಲ್ಲೂ ಹಿಂದೆ ಬಿದ್ದಿದೆ.

ಟಿ.ಎಲ್.ಕೃಷ್ಣೇಗೌಡ, ಕಾರ್ಯದರ್ಶಿ, ಸಿಪಿಐಎಂ.

ಹಾಸ್ಟೆಲ್ ಸ್ಥಾಪನೆಗೆ ಒತ್ತು

ಈ ಬಜೆಟ್ ಮೂಲಕ ದೇಶದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಬಾಲಕಿಯರ ಹಾಸ್ಟೆಲ್ ಸ್ಥಾಪಿಸುವ ಯೋಜನೆಯನ್ನು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದಾರೆ. ಇದು ದೇಶದಾದ್ಯಂತ 700ಕ್ಕೂ ಹೆಚ್ಚು ಜಿಲ್ಲೆಗಳನ್ನು ಒಳಗೊಳ್ಳಲಿದೆ. ಅಲ್ಲದೆ, ಕೈಗಾರಿಕಾ ಕೇಂದ್ರಗಳ ಬಳಿ, ಐದು ಹೊಸ ವಿಶ್ವವಿದ್ಯಾಲಯ ಪಟ್ಟಣಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿರುವುದು ಶ್ಲಾಘನೀಯ.

ಮೀರಾ ಶಿವಲಿಂಗಯ್ಯ, ಕಾರ್ಯದರ್ಶಿ, ಎಸ್ಬಿಇಟಿ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.