ಭಾರತೀನಗರ: ಇಲ್ಲಿಯ ಹಳೇ ಊರಿನ ವೆಂಕಟೇಶ್ವರ ಸ್ವಾಮಿ ದೇವಾಲಯದ 3ನೇ ವಾರ್ಷಿಕೋತ್ಸವ, ಹರಿಸೇವೆ (ಪರ) ಅದ್ಧೂರಿಯಾಗಿ ಜರುಗಿತು.

ಪ್ರಶಾಂತ್ ಶಾಲೆಯ ಹತ್ತಿರದ ಸೂಳೆಕರೆ ನಾಲೆಯಲ್ಲಿ ಹೂ, ಹೊಂಬಾಳೆ ಪೂಜಾ ಕಾರ್ಯಕ್ರಮದ ಮೂಲಕ ಚಾಲನೆಗೊಂಡಿತು. ಲಕ್ಷ್ಮೀವೆಂಕಟೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿ ಮಣೆಸೇವೆ (ಪರಾಕ್) ಮೂಲಕ ಮೆರವಣಿಗೆ ಹೊರಟಿತು.

ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಜಾನಪದ ಕಲಾ ಪ್ರಕಾರಗಳು, ಚರ್ಮವಾದ್ಯ ಮೇಳಗಳೊಂದಿಗೆ ಮರವಣಿಗೆ ದೇವಾಲಯದವರೆಗೆ ಸಾಗಿತು. ಮಾರ್ಗ ಮಧ್ಯೆ ಭಕ್ತಾದಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮೇಲುಕೋಟೆಯ ಡಾ.ಶೆಲ್ವ ಪಿಳ್ಳೈ ಅಯ್ಯಂಗಾರ್ ನೇತೃತ್ವದಲ್ಲಿ ಪುರೋಹಿತರಾದ ಯು.ವಿ.ಗಿರೀಶ್, ವೆಂಕಟೇಶ್ ಪೂಜಾ ಕೈಂಕರ್ಯಗಳನ್ನು ನಡೆಸಿದರು. ಭಕ್ತರು ದೇವರ ದರ್ಶನ ಪಡೆದರು.

ಶಾಸಕರಾದ ಕೆ.ಎಂ.ಉದಯ್, ಮಧು ಜಿ.ಮಾದೇಗೌಡ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬಿಇಟಿ ಟ್ರಸ್ಟ್ ಕಾರ್ಯನಿರ್ವಹಣಾಧಿಕಾರಿ ಆಶಯ್ ಮಧು ಸೇರಿದಂತೆ ಹಲವು ಗಣ್ಯರು ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.