ನಿವೇಶನ ಹಸ್ತಾಂತರ ಮಂಡ್ಯ ನಗರದ ಕಾಳಿಕಾಂಬ ದೇವಸ್ಥಾನದ ಮುಂಭಾಗದ ಪಶು ಆಸ್ಪತ್ರೆ ಆವರಣದಲ್ಲಿ ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸಲು 40X60 ಚ.ಅಡಿ ಅಳತೆಯ ಖಾಲಿ ನಿವೇಶನವನ್ನು ಗುರುತಿಸಿ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಸೆಂಟರ್‌ನ ಯೋಜನಾ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ. ಅನುಮೋದಿತ ನಕ್ಷೆಯ ಪ್ರಕಾರ ಕಟ್ಟಡ ಕಾಮಗಾರಿ ಕೈಗೊಳ್ಳುವಂತೆ ಕೋರಿದ್ದೇವೆ
– ಡಾ.ಶಿವಲಿಂಗಯ್ಯ ಉಪನಿರ್ದೇಶಕ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಡ್ಯ
ಡಾ.ಸಿದ್ದರಾಮು ಎನ್.ಎಂ.
ಸಮಗ್ರ ಪರೀಕ್ಷೆಗೆ ಅನುಕೂಲ ಪ್ರಸ್ತುತ ಇರುವ ಪಾಲಿ ಕ್ಲಿನಿಕ್‌ನಲ್ಲಿ ಎಕ್ಸ್‌ರೇ ಅಲ್ಟ್ರಾಸೌಂಡ್ ಹಾಗೂ ರಕ್ತ ಪರೀಕ್ಷೆ ಮಾಡುತ್ತಿದ್ದೇವೆ. ಪಶುರೋಗ ತನಿಖಾ ಪ್ರಯೋಗಾಲಯ ಆರಂಭವಾದರೆ ಪಶುಗಳಿಗೆ ತಗಲುವ ಎಲ್ಲ ರೋಗಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.