ಬುಧವಾರ, ಸೆಪ್ಟೆಂಬರ್ 28, 2022
27 °C

Video: ಮಂಡ್ಯದಲ್ಲಿ ನಾಗರಹಾವಿನಿಂದ ಕ್ಷಣಾರ್ಧದಲ್ಲಿ ಮಗನನ್ನು ಪಾರು ಮಾಡಿದ ತಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತನ್ನ ಮಗುವಿಗೆ ನಾಗರಹಾವು ಕಚ್ಚುವುದನ್ನು ಕ್ಷಣಾರ್ಧದಲ್ಲಿ ತಪ್ಪಿಸಿದ ತಾಯಿಯ ಸಾಹಸದ ವಿಡಿಯೊ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಇಲ್ಲಿನ ಚಾಮುಂಡೇಶ್ವರಿ ನಗರದಲ್ಲಿ ಈಚೆಗೆ ನಡೆದಿರುವ ಘಟನೆ ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

ಮದ್ದೂರು ‌ಪಟ್ಟಣದ ಕೆಮ್ಮಣ್ಣನಾಲೆ ವೃತ್ತದ ಸಮೀಪ ವಾಸವಾಗಿರುವ ವೈದ್ಯ ವಿಷ್ಣು ಅವರ ಪುತ್ರ ಪ್ರಸಾದ್‌ ನಾಗರಹಾವಿನ ಕಡಿತದಿಂದ ತಪ್ಪಿಸಿಕೊಂಡ ಬಾಲಕ. ಪ್ರಸಾದ್‌ ತನ್ನ ತಾಯಿ ಪ್ರಿಯಾ ಜತೆ ಮನೆಯಿಂದ ಹೊರ ಬಂದು ಮೆಟ್ಟಿಲು ಇಳಿಯುವಾಗ ನಾಗರಹಾವನ್ನು ಗಮನಿಸದೆ ಕಾಲಿಟ್ಟಿದ್ದಾನೆ. ಕೂಡಲೇ ಹಾವು ಹೆಡೆ ಎತ್ತಿ ಬುಸುಗುಟ್ಟಿ ಕಚ್ಚಲು ಮುಂದಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪ್ರಿಯಾ ಅವರು ಮಗನನ್ನು ತನ್ನತ್ತ ಎಳೆದುಕೊಂಡಿದ್ದಾರೆ. ನಂತರ ಹಾವು ಪಕ್ಕಕ್ಕೆ ಸರಿದು ಹೋಗುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು