ಬೆಂಗಳೂರು: ‘ಕಣ್ಣಿನಲ್ಲಿ ರಕ್ತ ಬರುತ್ತಿದೆ. ಪ್ರತಿನಿತ್ಯ ವೈದ್ಯರು ಚುಚ್ಚಿ ಚುಚ್ಚಿ ಸಾಯಿಸುತ್ತಿದ್ದಾರೆ. ಇದರ ಬದಲು ಒಂದು ಇಂಜೆಕ್ಷನ್ ನೀಡಿ ನಮ್ಮನ್ನು ಮೇಲಕ್ಕೆ ಕಳುಹಿಸಿಬಿಡಲಿ’.

–ಮಿಂಟೊ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ಹಿರಿಯ ಮಹಿಳೆಯೊಬ್ಬರು ಕಣ್ಣೀರು ಹಾಕಿ, ಅಳಲು ತೋಡಿಕೊಂಡ ಪರಿಯಿದು.

ಕಳೆದ ಮಂಗಳವಾರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಪಟ್ಟ 23 ಮಂದಿಯಲ್ಲಿ ಐವರು ಮಹಿಳೆಯರು ಹಾಗೂ ಎಂಟು ಮಂದಿ ಪುರುಷರು ಸೇರಿ 13 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಇವರೆಲ್ಲರೂ 50 ವರ್ಷ ಮೇಲ್ಪಟ್ಟವರಾಗಿದ್ದು, ಎಲ್ಲರೂ ದೃಷ್ಟಿ ಕಳೆದುಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದ ರೋಗಿಗಳಲ್ಲಿ ಇಬ್ಬರ ಕಣ್ಣುಗಳು ಮಾತ್ರ ಸಂಪೂರ್ಣ ವಾಸಿಯಾಗಿವೆ.

ಶಸ್ತ್ರಚಿಕಿತ್ಸೆಗೆ ಒಳಪಟ್ಟವರು ಅಂಧಕಾರದಿಂದ ಹೊರಬರಲು ನಿತ್ಯ ಹೋರಾಟ ನಡೆಸುತ್ತಿದ್ದಾರೆ. ದೃಷ್ಟಿ ಬರುವ ಬಗ್ಗೆ ವೈದ್ಯರೂ ಭರವಸೆ ನೀಡದಿರುವುದು ಇವರಲ್ಲಿ ಆತಂಕ ಮೂಡಿಸಿದೆ. ನಿತ್ಯ ಕೈ ಹಾಗೂ ಕಣ್ಣಿಗೆ ಇಂಜೆಕ್ಷನ್ ನೀಡಲಾಗುತ್ತಿದ್ದು, ಇವರ ಆಕ್ರಂದನ ಮುಗಿಲು ಮುಟ್ಟಿದೆ.

ಶಸ್ತ್ರಚಿಕಿತ್ಸೆ ವೈಫಲ್ಯಕ್ಕೆಔಷಧದ ದುಷ್ಪರಿಣಾಮವೇ ಕಾರಣ ಎಂಬುದು ಆಸ್ಪತ್ರೆಯ ವರದಿಯಿಂದ ಸಾಬೀತಾಗಿದೆ. ಔಷಧದ ಮಾದರಿಯನ್ನು ಔಷಧ ನಿಯಂತ್ರಣಾ ಮಂಡಳಿಗೂ ಕಳುಹಿಸಲಾಗಿದ್ದು, ವರದಿಗಾಗಿ ವೈದ್ಯರು ಎದುರು ನೋಡುತ್ತಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಸ್ಥಗಿತಗೊಳಿಸಿದ್ದು, ಅದರ ಕೊಠಡಿಯನ್ನೂ ಮುಚ್ಚಲಾಗಿದೆ. ತುರ್ತು ಚಿಕಿತ್ಸೆಯನ್ನು ಮಾತ್ರ ನೀಡಲಾಗುತ್ತಿದೆ.

ನೋವು ತಾಳಲಾಗುತ್ತಿಲ್ಲ: ‘ಟೇಲರ್ ಕೆಲಸ ಮಾಡಿಕೊಂಡಿದ್ದೆ. ಸೂಜಿಗೆ ದಾರ ಪೋಣಿಸಲು ಕಷ್ಟವಾಗುತ್ತಿತ್ತು. ಕಣ್ಣಿನ ಪರೀಕ್ಷೆ ಮಾಡಿಸಿದ ಬಳಿಕ ದೃಷ್ಟಿಗೆ ಶೇ 75ರಷ್ಟು ಹಾನಿಯಾಗಿರುವುದು ತಿಳಿದು ಬಂದಿತು. ಹಾಗಾಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸೂಚಿಸಿದರು. ಆದರೆ, ಇದೀಗ ಸಂಪೂರ್ಣ ದೃಷ್ಟಿ ಹೋಗಿದೆ. ಕಣ್ಣಿನ ಪರದೆ ಸುಟ್ಟು ಹೋಗಿದ್ದು, ಮುಂದೆ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಉಂಟಾಗಿದೆ’ ಎಂದು ಹೊರಮಾವಿನ ಸುಜಾತಾ ಅಳಲು ತೋಡಿಕೊಂಡರು.

‘ಆಸ್ಪತ್ರೆಯಲ್ಲಿ ಎಷ್ಟು ದಿನ ಇರಬೇಕು ಎಂದು ವೈದ್ಯರು ಖಚಿತಪಡಿಸುತ್ತಿಲ್ಲ.ದೃಷ್ಟಿ ಬರುವ ಬಗ್ಗೆ ವೈದ್ಯರೂ ಭರವಸೆ ನೀಡುತ್ತಿಲ್ಲ. ಇದರಿಂದ ಮುಂದೆ ಏನು ಮಾಡಬೇಕೆನ್ನುವುದು ತಿಳಿಯುತ್ತಿಲ್ಲ’ ಎಂದರು.

‘ಪೊರೆ ಶಸ್ತ್ರಚಿಕಿತ್ಸೆ ವೇಳೆ ರೋಗಿಗಳ ಕಣ್ಣಿಗೆ ಲೇಪಿಸಿರುವ ಮುಲಾಮು ಕಣ್ಣಿಗೆ ಹಾನಿ ಮಾಡಿದೆ. ಮುಲಾಮಿನಲ್ಲಿದ್ದ ಕೀಟಾಂಶ ಕಣ್ಣಿನಲ್ಲಿ ಸೋಂಕು ಉಂಟಾಗಲು ಪ್ರಮುಖ ಕಾರಣ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಸ್ಪತ್ರೆಯ ವರದಿ ಬಂದಿದ್ದು, ಔಷಧದ ದೋಷವೇ ಕಾರಣ ಎನ್ನುವುದು ಸಾಬೀತಾಗಿದೆ. ವೈದ್ಯರು ಚಿಕಿತ್ಸೆಯಲ್ಲಿ ಯಾವುದೇ ಲೋಪವೆಸಗಿಲ್ಲ’ ಎಂದು ಮಿಂಟೊ ಆಸ್ಪತ್ರೆ ನಿರ್ದೇಶಕಿ ಸುಜಾತಾ ರಾಥೋಡ್ ಮಾಹಿತಿ ನೀಡಿದರು.

ಪೊರೆ ತೆಗೆಸಲು ಬಂದು ಕಣ್ಣು ಕಳೆದುಕೊಂಡರು

ಶಸ್ತ್ರಚಿಕಿತ್ಸೆಗೆ ಒಳಪಟ್ಟವರಲ್ಲಿ ಬಹುತೇಕರು ಕಣ್ಣಿನ ಪೊರೆ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದವರು. ‘ಒಂದು ಕಣ್ಣಿನಲ್ಲಿ ಶೇ 50ರಷ್ಟು ದೃಷ್ಟಿದೋಷ ಕಾಣಿಸಿಕೊಂಡಿತ್ತು. ಪೊರೆ ತೆಗೆಸಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಆ ಕಣ್ಣಿನ ಪೂರ್ತಿ ದೃಷ್ಟಿಯೂ ಹೋಯಿತು. ಕಣ್ಣಿಗೆ ಇಂಜೆಕ್ಷನ್ ನೀಡುತ್ತಿದ್ದಾರೆ. ಆ ನೋವಿನಿಂದಾಗಿ ನಿದ್ದೆಯೂ ಬರುತ್ತಿಲ್ಲ’ ಎಂದು ಕೊಳ್ಳೆಗಾಲದ ಪುಟ್ಟನಂಜಮ್ಮ ಬೇಸರ ವ್ಯಕ್ತಪಡಿಸಿದರು.

‘ವೈದ್ಯರು ಕೂಡ ಸೂಕ್ತ ಮಾಹಿತಿ ನೀಡುತ್ತಿಲ್ಲ. ದೃಷ್ಟಿ ಬರದಿದ್ದಲ್ಲಿ ದಾನಿಗಳಿಂದ ಕಣ್ಣು ಪಡೆದು, ಜೋಡಿಸುವುದಾಗಿ ಹೇಳುತ್ತಿದ್ದಾರೆ’ ಎಂದರು.

ಔಷಧ ಬಳಸದಂತೆ ಸೂಚನೆ

‘ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಬಳಸಿದ ಔಷಧದ ದುಷ್ಪರಿಣಾಮದಿಂದಲೇ ವ್ಯತಿರಿಕ್ತ ಫಲಿತಾಂಶ ಬಂದಿದೆ ಎಂದು ಆಸ್ಪತ್ರೆ ವರದಿಯಲ್ಲಿ ಉಲ್ಲೇಖವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಯೂಜೆಲ್ 2% ಆಫ್ತಮಾಲಿಕ್ ವಿಸಿಯೊಸರ್ಜಿಕಲ್ ಡಿವೈಸ್ ಬ್ಯಾಚ್ ನಂ. ಒಯುವಿ 190203 ಔಷಧವನ್ನು ಮುಂದಿನ ಆದೇಶದವರೆಗೆ ಯಾವುದೇ ಆಸ್ಪತ್ರೆಯಲ್ಲೂ ಬಳಸಬಾರದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣ ವಿಭಾಗದ ಜಂಟಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಮಿಂಟೊ ವೈದ್ಯರ ವಿರುದ್ಧ ಎಫ್‌ಐಆರ್

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದರೂ ರೋಗಿಗಳಿಗೆ ದೃಷ್ಟಿ ಬಾರದ ಪ್ರಕರಣ ಸಂಬಂಧ ಮಿಂಟೊ ಆಸ್ಪತ್ರೆಯ ವೈದ್ಯರ ವಿರುದ್ಧ ವಿ.ವಿ.ಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಶಸ್ತ್ರಚಿಕಿತ್ಸೆ ಬಳಿಕ ದೃಷ್ಟಿ ಕಳೆದುಕೊಂಡಿರುವ ರುದ್ರೇಶ್ ಎಂಬುವರ ಪತ್ನಿ ಸುಜಾತಾ ಅವರು ದೂರು ನೀಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಹಾಗೂ ರೋಗಿಗಳ ಸುರಕ್ಷತೆಗೆ ಧಕ್ಕೆ ತಂದ ಆರೋಪದಡಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರುದ್ರೇಶ್ ಸೇರಿದಂತೆ 15ಕ್ಕೂ ಹೆಚ್ಚು ಮಂದಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅದಾದ ನಂತರ, ಹಲವರಿಗೆ ದೃಷ್ಟಿಯೇ ಬಂದಿಲ್ಲ. ವೈದ್ಯರ ನಿರ್ಲಕ್ಷ್ಯದಿಂದ ಈ ರೀತಿಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಸುಜಾತಾ ಆಗ್ರಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು ಹಾಗೂ ಅವರ ಜೊತೆಗಿದ್ದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದು ಹೇಳಿದರು.

ಕಣ್ಣು ಕೆಂಪಾಗುತಿತ್ತು. ಪರೀಕ್ಷಿಸಿದ ವೈದ್ಯರು ಮಿಂಟೊ ಆಸ್ಪತ್ರೆಗೆ ಚೀಟಿ ನೀಡಿದರು. ವೈದ್ಯರ ಸೂಚನೆ ಅನುಸಾರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಈಗ ಏನೂ ಕಾಣುತ್ತಿಲ್ಲ. ಜೀವನೋಪಾಯ ಹೇಗೆಂದೇ ತೋಚುತಿಲ್ಲ
–ಮಂಜಪ್ಪ, ಶಸ್ತ್ರಚಿಕಿತ್ಸೆಗೆ ಒಳಪಟ್ಟವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.