ಶನಿವಾರ, ಜನವರಿ 16, 2021
17 °C
ರಂಗಾಯಣದಲ್ಲಿ ಗಮನ ಸೆಳೆದ ‘ರಾಗ ಸರಾಗ’ ಹಾಗೂ ಕೋಲಾಟ

‘ಪ‍ರ್ವ’ಕ್ಕಾಗಿ ₹50 ಲಕ್ಷ ಕೊಡಿಸುವೆ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಾಹಿತಿ ಎಲ್.ಎಲ್.ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ರಂಗರೂಪಕ್ಕೆ ತರಲು ₹50 ಲಕ್ಷದಷ್ಟು ಹಣವನ್ನು ಸರ್ಕಾರದಿಂದ ರಂಗಾಯಣಕ್ಕೆ ಕೊಡಿಸುವುದಾಗಿ ಶಾಸಕ ಎಲ್.ನಾಗೇಂದ್ರ ಭರವಸೆ ನೀಡಿದರು.

ರಂಗಾಯಣದ ಭೂಮಿಗೀತದಲ್ಲಿ ಗುರುವಾರ ಅವರು ‘ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಪರ್ವ’ ಕಾದಂಬರಿಯ ರಂಗ ಪ್ರಯೋಗ ಮಹತ್ವದ ಕಾರ್ಯ. ಇದಕ್ಕೆ ಹೆಚ್ಚಿನ ಹಣ ಬೇಕಿರುವುದು ನಿಜ. ಕಾರ್ಯಪ್ಪ ಅವರೊಂದಿಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಗತ್ಯ ಇರುವ ಹಣವನ್ನು ಕೊಡಿಸಲು ಬದ್ಧನಾಗಿದ್ದೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಹೇಳಿದರು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿಯೂ ರಂಗಾಯಣ ಸುಮ್ಮನಿರಲಿಲ್ಲ. ಜೂನ್ 5ರಿಂದ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಯಶಸ್ವಿಯಾಗಿ ರಂಗ ಚಟುವಟಿಕೆಗಳನ್ನು ಆರಂಭಿಸಲಾಯಿತು. ಇವುಗಳೆಲ್ಲದರ ದಾಖಲೆಯೆ ‘ಕೋವಿಡ್ ಕತ್ತಲೆಯಲ್ಲೂ ರಂಗ ಬೆಳಕು’ ಪುಸ್ತಕ ಎಂದರು.

ನಿರ್ದೇಶಕ ಶಶಿಧರ ಅಡಪ, ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಇದ್ದರು.

ಸೂಜಿಗಲ್ಲಿನಂತೆ ಸೆಳೆದ ‘ರಾಗ-ಸರಾಗ’: ರಂಗಾಯಣದಲ್ಲಿ ನಡೆದ ‘ರಾಗ–ಸರಾಗ’ ಕಾರ್ಯಕ್ರಮ ನೋಡುಗರನ್ನು ಬಹುವಾಗಿ ಸೆಳೆಯಿತು.

ಬಿ.ವಿ.ಕಾರಂತ ಅವರು ಅವಾದ್ಯ ಕಛೇರಿಯನ್ನು 31 ವರ್ಷದ ಹಿಂದೆ ನಡೆಸಿದ್ದರು. ಕಲ್ಲು, ಜಾಗಟೆ, ಮಡಕೆ, ಚಿಟಿಕೆ, ಬಿದಿರಿನ ಬೊಂಬು, ತೆಂಗಿನಕಾಯಿ ಚಿಪ್ಪು ಮೊದಲಾದ ವಸ್ತುಗಳನ್ನು ನುಡಿಸುವ ಮೂಲಕ ಹೊಸದೊಂದು ಪ್ರಯೋಗ ಮಾಡಿದ್ದರು. ಈಗ ಮತ್ತೆ ಅದೇ ಸಂಗೀತ
ಕಛೇರಿ ಕೇಳಿ ಬಂದಿತು. ಇದಕ್ಕೂ ಮುನ್ನ ನಡೆದ ಕೋಲಾಟ ಸೂಜಿಗಲ್ಲಿನಂತೆ ಸೆಳೆಯಿತು. ಕಲಾವಿದ ಧನಂಜಯ್ಯ ಮತ್ತು ಸಂಗಡಿಗರು ಹಾಡಿದ ಮಂಕುತಿಮ್ಮನ ಕಗ್ಗವೂ ಬಹುವಾಗೆ ಸೆಳೆಯುವಲ್ಲಿ ಸಫಲವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು