ಸರಗೂರು: ‘ನಂದಿನಾಥಪುರ ಗ್ರಾಮದಲ್ಲಿ 20 ಎಕರೆ ಜಾಗದಲ್ಲಿ 192 ನಿವೇಶನ ನಿರ್ಮಿಸಿ ಬಡವರಿಗೆ ವಿತರಿಸಲಾಗುವುದು. 3 ತಿಂಗಳೊಳಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿನಾಥ ಪುರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ನಡೆದ ವಿಶೇಷ ಗ್ರಾಮ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದರು.
‘₹50 ಕೋಟಿ ವೆಚ್ಚದಲ್ಲಿ ಕಬಿನಿ ಜಲಾಶಯದ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ’ ಎಂದರು.
‘ಗ್ರಾಮದಲ್ಲಿ ಕೆರೆ, ಜಮೀನುಗಳಿಗೆ ತೆರಳಲು ಇರುವ ಓಣಿಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಬೇಕು. ಶಾಲೆಯ ಕಟ್ಟಡ ದುರಸ್ತಿಗೊಳಿಸಬೇಕು. ನೂತನ ಕಟ್ಟಡ ಹಾಗೂ ಸಿಸಿ ರಸ್ತೆ, ಚರಂಡಿಗಳನ್ನು ನಿರ್ಮಿಸಬೇಕು’ ಎಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅನಿಲ್ ಚಿಕ್ಕಮಾದು, ‘ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿ
ಗಳಿಗೆ ಸೂಚಿಸುತ್ತೇನೆ’ ಎಂದರು.
ಸಭೆಯಲ್ಲಿ ಬಿದರಹಳ್ಳಿ ಗ್ರಾ.ಪಂ ಅಧ್ಯಕ್ಷ ಬಿ.ಶಿವಣ್ಣ, ಉಪಾಧ್ಯಕ್ಷೆ ರತ್ನಮ್ಮ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಸರಗೂರು ತಾ.ಪಂ ಇಒ ಲಿಂಗರಾಜು, ಸಿಡಿಪಿಒ ಆಶಾ, ನೀರಾವರಿ ಇಲಾಖೆಯ ನಾಗೇಶ್, ಕೃಷಿ ಇಲಾಖೆಯ ಶಶಿಕಾಂತ್, ಪಿಡಿಒ ಪರಮೇಶ್, ಗುರುಸ್ವಾಮಿ, ಹೇಮಂತ್ ಕುಮಾರ್, ಗ್ರಾ.ಪಂ ಸದಸ್ಯರಾದ ಅಂಕನಾಯಕ, ಚೆನ್ನನಾಯಕ, ವೆಂಕಟಸ್ವಾಮಿ, ವಿಜಯ್‌ಕುಮಾರ್, ಕುಮಾರ್, ನಾಗರತ್ನ, ಶಿವಪ್ಪ, ಸೋಮೇಶ್, ಪುಟ್ಟಮ್ಮ, ಸತೀಶ್, ಮುಖಂಡರಾದ ಎನ್.ಡಿ.ರಾಜಣ್ಣ, ಶಿವಣ್ಣ ಭೋವಿ, ಕೆಂಪ ಭೋವಿ, ಬಸಪ್ಪ, ಶೇಖರ್, ಚಲುವಯ್ಯ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.