ಎಚ್.ಡಿ.ಕೋಟೆ: ಪತಿಯನ್ನು ಕಳೆದುಕೊಂಡರೂ ಛಲ ಬಿಡದೆ ತನ್ನ ಮಕ್ಕಳನ್ನು ಓದಿಸಿ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದ ಕುಟುಂಬವೊಂದು ಈಗ ಬೀದಿಗೆ ಬಂದಿದೆ.
ತಾಲ್ಲೂಕಿನ ಸವ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರೋಪುರ ಗ್ರಾಮದ ವಳ್ಳಿಯಮ್ಮ ಅವರು ಪಾರ್ಶ್ವವಾಯು (ಅರ್ಧಾಂಗವಾಯು) ರೋಗ ದಿಂದ ಕೈ, ಕಾಲು ಸ್ವಾಧೀನ ಕಳೆದುಕೊಂಡಿದ್ದಾರೆ. ಈಕೆಯ ಮಗಳು ಮಂಜುಳಾ ಕೊಳಕು ಮಂಡಲದ ಹಾವು ಕಡಿತಕ್ಕೆ ಒಳಗಾಗಿ ಸೂಕ್ತ ಚಿಕಿತ್ಸೆ ದೊರಕದೆ ಕಾಲು ಊತ ಬಂದು ಕೀವು ತುಂಬಿದೆ.
ಮಂಜುಳಾಗೆ ಕಾಲು ಕಳೆದುಕೊಳ್ಳುವ ಆತಂಕದಲ್ಲಿದ್ದು, ಈ ಕುಟುಂಬಕ್ಕೆ ತುರ್ತು ನೆರವಿನ ಅಗತ್ಯವಿದೆ.
ಮಂಜುಳಾ ಅವರ ಗಂಡ ವಿನೋದಕುಮಾರ್ ಒಬ್ಬನೇ ಕೂಲಿ ಮಾಡಿ ಅತ್ತೆ ಮತ್ತು ಹೆಂಡತಿ ಹಾಗೂ ಹತ್ತು ವರ್ಷದ ಹೆಣ್ಣು ಮಗಳನ್ನು ಊಟ ಉಪಚಾರ ಹಾಗೂ ಚಿಕಿತ್ಸೆಗೆ ಹಣ ಭರಿಸಬೇಕಾಗಿದೆ.
ಹಾರೋಪುರ ಗ್ರಾಮಸ್ಥರು ಈ ಕುಟುಂಬದ ಪರಿಸ್ಥಿತಿ ನೋಡಿ ಗ್ರಾಮದಿಂದ ಸುಮಾರು ₹ 50 ದೇಣಿಗೆ ಸಂಗ್ರಹಿಸಿ ಇದುವರೆಗೆ ಚಿಕಿತ್ಸೆಗೆ ನೆರವಾಗಿದ್ದಾರೆ.
ತಾಯಿ ಮಗಳ ಔಷಧಿಗೆ ತಿಂಗಳಿಗೆ ₹ 10 ರಿಂದ ₹ 15 ಸಾವಿರ ಚಿಕಿತ್ಸೆಗೆ ಬೇಕಿದೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚು ಆಗುವುದರಿಂದ ಗ್ರಾಮಸ್ಥರು ಕೂಡಾ ಕೈ ಚೆಲ್ಲಿ ಕುಳಿತಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ ದಾನಿಗಳ ಸಹಕಾರದ ನಿರೀಕ್ಷೆಯಲ್ಲಿ ಈ ಕುಟುಂಬ ಇದ್ದು, ಇವರಿಗೆ ನೆರವಾಗುವ ಮೂಲಕ ಮಾನವೀಯತೆ ಮರೆಯಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ದಾನಿಗಳು, ವಳ್ಳಿಯಮ್ಮ, ಬ್ಯಾಂಕ್ ಖಾತೆ ಸಂಖ್ಯೆ: 85022379182, ಐಎಫ್‌ಎಸ್‌ಸಿ ಕೋಡ್ KGRB 0000042, ಕಾವೇರಿ ಗ್ರಾಮೀಣ ಬ್ಯಾಂಕ್ ಎಚ್.ಡಿ.ಕೋಟೆ ಶಾಖೆಗೆ ಹಣ ಜಮೆ ಮಾಡಲು ಕೋರಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.