ಗುರುವಾರ , ಜುಲೈ 29, 2021
24 °C

ಆಷಾಢ ಶುಕ್ರವಾರ: ಬೆಟ್ಟದ ಪಾದದಲ್ಲೇ ನಮಿಸಿದ ಭಕ್ತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ಕೋವಿಡ್ ಕಾರಣಕ್ಕಾಗಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹೀಗಾಗಿ, ಬಹಳಷ್ಟು ಮಂದಿ ಭಕ್ತರು ಬೆಟ್ಟದ ಪಾದದಲ್ಲೇ ದೇವರಿಗೆ ನಮಿಸಿ ಹೊರಟರು. ಆದರೆ, ಸರ್ಕಾರದಿಂದ ಶಿಷ್ಟಾಚಾರ ಪಾಲನೆ ಮಾಡಲಾಗುವ ವ್ಯಕ್ತಿಗಳು ಹಾಗೂ ಅವರೊಂದಿಗೆ ಹಲವು ಮಂದಿ ದೇಗುಲ ಪ್ರವೇಶಿಸಿದರು.

ಉತ್ತನಹಳ್ಳಿ, ತಾವರೆಕಟ್ಟೆ ಹಾಗೂ ಮೆಟ್ಟಿಲುಗಳ ಬಳಿ ಬಿಗಿ ಪೊಲೀಸ್ ಪಹರೆ ಹಾಕಲಾಗಿತ್ತು. ಸಾಮಾನ್ಯ ಜನರನ್ನು ಇಲ್ಲಿ ಪೊಲೀಸರು ಬಿಡಲಿಲ್ಲ. ಮೆಟ್ಟಿಲುಗಳ ಬಳಿಯೇ ಕರ್ಪೂರ ಹಚ್ಚಿ, ಕೈಮುಗಿದ ಭಕ್ತರು ಮನೆಯತ್ತ ಸಾಗಿದರು.

ಆದರೆ, ಶಾಸಕರಾದ ಎಸ್.ಎ.ರಾಮದಾಸ್, ಸಚಿವರಾದ ಬೈರತಿ ಬಸವರಾಜು, ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಮಂದಿ ಜನಪ್ರತಿನಿಧಿಗಳು ದೇಗುಲ ಪ್ರವೇಶಿಸಿದರು. ನಟ ದರ್ಶನ್ ಅವರೂ ದೇಗುಲಕ್ಕೆ ಬರುತ್ತಾರೆ ಎಂಬ ಊಹಾಪೋಹಾಗಳು ಹರಡಿದ್ದವು. ಆದರೆ, ಅವರು ದೇಗುಲಕ್ಕೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು