ಮಂಗಳವಾರ, ಸೆಪ್ಟೆಂಬರ್ 21, 2021
21 °C
ಜಿಲ್ಲೆಯಾದ್ಯಂತ ಜಿಟಿಜಿಟಿ ಮಳೆ, ಮೋಡಕವಿದ ವಾತಾವರಣ

ಹದ ಮಳೆಯಲ್ಲಿ ಮಿಂದ ಮೈಸೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರ ಸೇರಿದಂತೆ ಜಿಲ್ಲೆಯಾ ದ್ಯಂತ ಭಾನುವಾರ ಹದವಾದ ಮಳೆ ಸುರಿದಿದೆ. ಎಲ್ಲೆಡೆ ತಂಪಾದ ವಾತಾವರಣವಿತ್ತು. ಕುಳಿರ್ಗಾಳಿಯ ಬೀಸುವಿಕೆ ಹೆಚ್ಚಿತ್ತು.

ನಂಜನಗೂಡು ತಾಲ್ಲೂಕಿನ ಮರಳೂರಿನಲ್ಲಿ 3.5 ಸೆಂ.ಮೀ.ಗೂ ಅಧಿಕ ಮಳೆಯಾಗಿದೆ. ತಾಲ್ಲೂಕಿನ ಚಿಕ್ಕಯ್ಯನಛತ್ರ, ರಾಮಾಪುರಗಳಲ್ಲಿ 3, ಸುತ್ತೂರಿನಲ್ಲಿ 2 ಸೆಂ.ಮೀ, ಮಲ್ಲೂಪುರ, ತಾಯೂರು, ತಗಡೂರಿನಲ್ಲಿ 1.5, ಹುಳಿಮಾವಿನಲ್ಲಿ 2.5 ಸೆಂ.ಮೀ ಮಳೆಯಾಗಿದೆ.‌

ಮೈಸೂರು ನಗರದಲ್ಲಿ 2 ಸೆಂ.ಮೀ, ಯಡಕೊಳ ಭಾಗದಲ್ಲಿ 1.6, ಶ್ರೀರಾಂಪುರದಲ್ಲಿ 1 ಸೆಂ.ಮೀ ಆಗಿದೆ.

ಎಚ್.ಡಿ.ಕೋಟೆಯ ಅಂತರಸಂತೆ, ಕಂಚಮಳ್ಳಿ, ಹೊಮ್ಮರಗಳ್ಳಿ, ಹೆಬ್ಬಳಗುಪ್ಪೆ ಭಾಗಗಳಲ್ಲಿ 1.5, ಹುಣಸೂರಿನ ಧರ್ಮಾಪುರದ ಕರಿಮುದ್ದನಹಳ್ಳಿ 12.5, ಕೆ.ಆರ್.ನಗರದ ಸಾಲಿಗ್ರಾಮ, ಹರದನಹಳ್ಳಿ, ಲಕ್ಷ್ಮೀಪುರದಲ್ಲಿ 10.5, ಪಿರಿಯಾಪಟ್ಟಣದ ಹಾರನಹಳ್ಳಿ ಕಣಗಾಲು, ದೊಡ್ಡಕಮರವಳ್ಳಿ, ಚಂದಗಾಲುಕಾವಲ್ 12.5‌, ತಿ.ನರಸೀಪುರದ ಕುಪ್ಪೇಗಾಲ ಮತ್ತು ಬೆನಕನಹಳ್ಳಿಯಲ್ಲಿ 2 ಸೆಂ.ಮೀ ಮಳೆ ಸುರಿದಿದೆ. ಸೋಮವಾರವೂ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ನಗರದಲ್ಲಿ ಪೊಲೀಸ್ ಭವನದ ಸಮೀಪ ಮರದ ಕೊಂಬೆ ಬಿದ್ದಿರುವುದು ಬಿಟ್ಟರೆ, ನಗರದಲ್ಲಿ ಮಳೆಯು ಹೆಚ್ಚೇನು ಅನಾಹುತ ಸೃಷ್ಟಿಸಲಿಲ್ಲ.

ಮಳೆಯು ಗ್ರಾಮೀಣ ಪ್ರದೇಶಗಳ ಮಳೆಯಾಶ್ರಿತ ಭೂಮಿಯಲ್ಲಿನ ಬೆಳೆಗಳಿಗೆ, ತೋಟಗಾರಿಕಾ ಬೆಳೆಗಳಿಗೆ, ಕೊಳವೆಬಾವಿಗಳಿಗೆ ಸಹಕಾರಿಯಾಗಿದೆ. ಕೆಲವೆಡೆ ಭತ್ತ ಬಿತ್ತನೆಗೆ ತೊಡಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು