‘ಬಾಬೂಜಿ ಭಾವಚಿತ್ರದ ಕೆಳಗೆ ಪೊರಕೆ’

ತಿ.ನರಸೀಪುರ: ಡಾ.ಬಾಬು ಜಗಜೀವನರಾಂ ಪುಣ್ಯಸ್ಮರಣೆ ಆಚರಣೆ ವೇಳೆ ಪುರಸಭೆಯ ಅಧಿಕಾರಿಗಳು ಬಾಬೂಜಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿ ಡಾ.ಬಾಬು ಜಗಜೀವನರಾಂ ಸಂಘಟನೆಯ ಮುಖಂಡರು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.
ಪುರಸಭೆಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಬಾಬೂಜಿ ಭಾವಚಿತ್ರದ ಕೆಳಗೆ ಪೊರಕೆ ಇಟ್ಟು ಅಪಮಾನ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಪುರಸಭಾ ಸದಸ್ಯ ಅರ್ಜುನ್ ಮಾತನಾಡಿ, ‘ಬಾಬೂಜಿ ಅವರ ಭಾವಚಿತ್ರವನ್ನು ಕತ್ತಲೆ ಕೋಣೆಯಲ್ಲಿ ಇಡಲಾಗಿದೆ. ಭಾವಚಿತ್ರದ ಕೆಳಗೆ ಪೊರಕೆ ಇಟ್ಟಿದ್ದಾರೆ. ಇದು ಅಸಂಬದ್ಧ ವರ್ತನೆ. ಹಸಿರು ಕ್ರಾಂತಿಯ ಹರಿಕಾರನಿಗೆ ಅಗೌರವ ತೋರಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ಡಿ.ನಾಗೇಶ್, ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಮಲೆಯೂರು ಶಂಕರ್, ಗೋವಿಂದರಾಜು, ಖಜಾಂಚಿ ಬಿ.ಎಲ್. ಮಹದೇವ್, ಕಾರ್ಯದರ್ಶಿ ಪುಟ್ಟಸ್ವಾಮಿ, ಮೂಗೂರು ಮಹದೇವ ಸ್ವಾಮಿ, ಕುಮಾರ್, ಸಿ.ಡಿ.ವೆಂಕಟೇಶ್, ಶಿವಣ್ಣ, ರವಿ, ಮಲ್ಲೇಶ್, ಕರಿಯಪ್ಪ, ವಸಂತಕುಮಾರ್, ಮಾದೇ ಸ್ವಾಮಿ, ವಿಶ್ವ, ಶಿವಣ್ಣ, ರವಿ, ಚೇತನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.