ಶುಕ್ರವಾರ, ಆಗಸ್ಟ್ 23, 2019
21 °C
370ನೇ ವಿಧಿ ರದ್ದತಿ ನಿರ್ಧಾರಕ್ಕೆ ಮೆಚ್ಚುಗೆ

‘ಜೈ ನರೇಂದ್ರ ಮೋದಿ’ ಎಂದ ಭಗವಾನ್!

Published:
Updated:
Prajavani

ಮೈಸೂರು: ‘370 ನೇ ವಿಧಿ ರದ್ದತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿರುವ ಸಾಹಿತಿ ಕೆ.ಎಸ್‌.ಭಗವಾನ್‌, ಪ್ರಧಾನಿಗೆ ಜೈಕಾರ ಹಾಕಿದ್ದಾರೆ. ಈ ಕುರಿತು ಹೇಳಿಕೆ ನೀಡಿದ್ದು, ‘ಇಂಥ ನಿರ್ಧಾರದಿಂದ ಮೋದಿ, ಇತಿಹಾಸದಲ್ಲಿ ಅಜರಾಮರ
ರಾಗಿ ಉಳಿಯುವರು’ ಎಂದಿದ್ದಾರೆ.

‘ಆರ್ಟಿಕಲ್ 370ನ್ನು ರದ್ದತಿ ಮೂಲಕ, ರಾಷ್ಟ್ರವನ್ನು ಹಾಗೂ 72 ವರ್ಷಗಳಿಂದ ಸಂಕಟದಲ್ಲಿ ನರಳುತ್ತಿದ್ದ ಕಾಶ್ಮೀರದ ಜನತೆಯನ್ನು ನಮ್ಮ ನೆಚ್ಚಿನ ಪ್ರಧಾನಿ ಸಂತಸಪಡಿಸಿದ್ದಾರೆ. ಅಲ್ಲಿ, ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದ ಹಣವನ್ನು ಇನ್ನುಮುಂದೆ ಜನತೆಯ ಕಲ್ಯಾಣಕ್ಕಾಗಿ, ಅಭಿವೃದ್ಧಿಗಾಗಿ ಬಳಸಲು ಅನುಕೂಲ’ ಎಂದು ಹೇಳಿದ್ದಾರೆ.

ಇಡೀ ದೇಶವನ್ನು ಒಂದೇ ಸಂವಿಧಾನದ ಅಡಿ ತಂದಿರುವುದು ಬಹಳ ಶ್ಲಾಘನೀಯ ಕಾರ್ಯ. ಇದಕ್ಕಾಗಿ ಇಡೀ ರಾಷ್ಟ್ರ ತಹ ತಹಿಸುತ್ತಿತ್ತು. ಸನ್ಮಾನ್ಯ ಮೋದಿ ಇತಿಹಾಸದಲ್ಲಿ ಅಜರಾಮರವಾಗಿ ಉಳಿಯುತ್ತಾರೆ ಎನ್ನಲು ಸಂತೋಷ ಮತ್ತು ಹೆಮ್ಮೆ ಆಗುತ್ತದೆ. ಜೈ ನರೇಂದ್ರ ಮೋದಿ!’ ಎಂದು ಭಗವಾನ್‌ ಹೊಗಳಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಈ ಪತ್ರವನ್ನು ಕುಹಕದಿಂದಾಗಲೀ, ವ್ಯಂಗ್ಯದಿಂದಾಗಲೀ ಬರೆದಿಲ್ಲ. ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಸರಿಯಾಗಿದೆ. ಹಾಗಾಗಿ, ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದೇನೆ’ ಎಂದರು.

Post Comments (+)