ತಿ.ನರಸೀಪುರ: ತಾಲ್ಲೂಕಿನ ಮೂಗೂರು ಗ್ರಾಮದಲ್ಲಿ ಬುಧವಾರ ರಾತ್ರಿ ಬೈಕ್‌ನಿಂದ ಬಿದ್ದು ಯುವಕ ಮೃತಪಟ್ಟು, ಮೊತ್ತೊಬ್ಬ ಯುವಕ ಗಾಯಗೊಂಡಿದ್ದಾನೆ.

ಗ್ರಾಮದ ಶ್ರೀರಾಮ ಕಾಲೊನಿಯ ನಿವಾಸಿ ಪುಟ್ಟಸ್ವಾಮಿ ಅವರ ಪುತ್ರ ಅಭಿಷೇಕ್ (25)ಮೃತಪಟ್ಟವರು. ಗ್ರಾಮದ ಬಸ್ ನಿಲ್ದಾಣದ ಕಡೆಗೆ ಹೋಗುವಾಗ ನಾಯಿ ಅಡ್ಡಬಂದಿದೆ. ನಾಯಿ ತಪ್ಪಿಸಲು ಹೋಗಿ ಬೈಕ್ ಕೆಳಗೆ ಬಿದ್ದಿದೆ. ಗಾಯಗೊಂಡ ಅಭಿಷೇಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಬೈಕ್ ಓಡಿಸುತ್ತಿದ್ದ ಶಶಿಕುಮಾರ್ ಎಂಬಾತ ಗಾಯಗೊಂಡಿದ್ದಾನೆ. ತಿ.ನರಸೀಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರ ಸಾವು

ಮೈಸೂರು–ತಿ.ನರಸೀಪುರ ರಸ್ತೆಯ ವರಕೋಡು ಗೇಟ್ ಬಳಿ ಗುರುವಾರ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ತಿ.ನರಸೀಪುರ ತಾಲ್ಲೂಕಿನ ಕಲಿಯೂರು ಗ್ರಾಮದ ರಾಮು (37) ಮೃತಪಟ್ಟಿದ್ದಾರೆ.

ಇವರು ಬೈಕ್‌ನಲ್ಲಿ ಮೈಸೂರಿನತ್ತ ಬರುತ್ತಿದ್ದರು. ಲಾರಿ ಮೈಸೂರಿನಿಂದ ತಿ.ನರಸೀಪುರದ ಕಡೆಗೆ ಹೋಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವರುಣಾ ಠಾಣೆಯಲ್ಲಿ ದಾಖಲಾಗಿದೆ.

ಬಾಲಕ ಸಾವು

ಮೊಬೈಲ್ ಗೇಮ್ ಆಡುವ ಗೀಳು ಹೊಂದಿದ್ದ 14 ವರ್ಷದ ಬಾಲಕನೊಬ್ಬ ಗುರುವಾರ ಸಂಜೆ ಶಟರ್ ಎಳೆಯುವ ಕಬ್ಬಿಣದ ಕೊಕ್ಕೆ ಕುತ್ತಿಗೆಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾನೆ.

9ನೇ ತರಗತಿ ಓದುತ್ತಿದ್ದ ಈ ಬಾಲಕ ಮೊಬೈಲ್ ಗೇಮ್‌ವೊಂದನ್ನು ಹೆಚ್ಚು ಆಡುತ್ತಿದ್ದ. ಅದರಲ್ಲಿ ನೀಡಿದ್ದ ‘ಟಾಸ್ಕ್’ಅನ್ನು ಪೂರ್ಣಗೊಳಿಸಲು ಕಬ್ಬಿಣದ ಕೊಕ್ಕೆಯನ್ನು ಕುತ್ತಿಗೆಗೆ ಸಿಲುಕಿಸಿಕೊಂಡು ಸಾಹಸ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಕೊಕ್ಕೆಯು ಕುತ್ತಿಗೆಗೆ ಬಿಗಿದು ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.