ಫೆ.4ರಂದು ವಿಶ್ವ ಕ್ಯಾನ್ಸರ್ ದಿನ.....

ಜಗತ್ತಿನಲ್ಲಿ ಪ್ರತಿ ವರ್ಷ 96 ಲಕ್ಷ ಕ್ಯಾನ್ಸರ್ ರೋಗಿಗಳು ಮೃತಪಡುತ್ತಿದ್ದಾರೆ. 2030ರ ವೇಳೆಗೆ ಇದು ದ್ವಿಗುಣಗೊಳ್ಳುತ್ತದೆ ಎಂದು ಅಧ್ಯಯನ ಹೇಳಿದೆ. ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರ ಸಾಲಿಗೆ ಕ್ಯಾನ್ಸರ್ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ. ಜಗತ್ತಿನೆಲ್ಲೆಡೆ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಶ್ರಮಿಸುತ್ತಿದೆ. ಪ್ರತಿ ವರ್ಷ ಫೆ.4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸುತ್ತಿದ್ದು, ಈ ಬಾರಿಯ ಧ್ಯೇಯವಾಕ್ಯ ‘ಐ ಆ್ಯಮ್ ಅಂಡ್ ಐ ವಿಲ್’ (ನಾನು ಮತ್ತು ನನ್ನಿಂದ ಸಾಧ್ಯ).

ವಿಶ್ವದಲ್ಲಿ ಸಾವು ಉಂಟುಮಾಡುವ ಎರಡನೇ ಕಾಯಿಲೆ ಕ್ಯಾನ್ಸರ್. ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಶೇ 70ರಷ್ಟು ಮಂದಿ ಕ್ಯಾನ್ಸರ್ನಿಂದ ಮೃತಪಡುತ್ತಿದ್ದಾರೆ. ಈ ದೇಶಗಳಲ್ಲಿ ಕಾನ್ಸರ್ ರೋಗಕ್ಕೆ ಚಿಕಿತ್ಸಾ ಸೌಲಭ್ಯ ಶೇ 30ರಷ್ಟು ಮಾತ್ರ ಲಭ್ಯವಿದೆ. ಆದರೆ, ಅತಿಹೆಚ್ಚಿನ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ಶೇ 90ರಷ್ಟು ಚಿಕಿತ್ಸಾ ಸೌಲಭ್ಯವಿದೆ. 3ನೇ 1ರಷ್ಟು ಸಾಮಾನ್ಯ ಕ್ಯಾನ್ಸರ್ಗಳನ್ನು ಗುಣ ಪಡಿಸಬಹುದು.

ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮಹಿಳೆಯರಲ್ಲಿ ಸ್ತನ, ಗರ್ಭಕೋಶ, ಗಂಟಲಿನ ಕ್ಯಾನ್ಸರ್, ಪುರುಷರಲ್ಲಿ ಶ್ವಾಸಕೋಶ, ಅನ್ನನಾಳ, ಗಂಟಲು, ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳ ಅತಿಯಾದ ಬಳಕೆ, ಮದ್ಯ ಸೇವನೆಯಿಂದಾಗಿ ಪುರುಷರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ನಗರ ಪ್ರದೇಶದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಗ್ರಾಮೀಣ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗಿದೆ ಎಂದು ಮೈಸೂರಿನ ಹೆಬ್ಬಾಳದಲ್ಲಿರುವ ಭಾರತ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆಯ ವೈದ್ಯಕೀಯ ಸೂಪರಿಂಟೆಂಡೆಂಟ್ ಡಾ.ಎಂ.ಎಸ್. ವಿಶ್ವೇಶ್ವರ ತಿಳಿಸಿದರು.

ಯುವತಿಯರಿಗೆ ತಡವಾಗಿ ಮದುವೆ ಮಾಡುವುದು, ಮಗುವಿಗೆ ಹಾಲು ಕುಡಿಸದೇ ಇರುವುದು, ಹಾರ್ಮೋನ್ಗಳ ಮಾತ್ರೆ ತೆಗೆದುಕೊಳ್ಳುವುದರಿಂದ ಸ್ತನ ಕ್ಯಾನ್ಸರ್ ಬರುತ್ತಿದೆ. ಮಹಿಳೆಯರು 18ರಿಂದ 22 ವರ್ಷದೊಳಗೆ ಮದುವೆ ಆಗಬೇಕು. ಹೆಚ್ಚೆಂದರೆ 25 ವರ್ಷದೊಳಗೆ ಮೊದಲ ಮಗು ಪಡೆಯಬೇಕು. ಆದರೆ, ನಿಸರ್ಗಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದರಿಂದ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಮುಸ್ಲಿಂ ಯುವತಿಯರಿಗೆ ಬೇಗ ಮದುವೆ ಮಾಡುವುದರಿಂದ ಅವರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಕಡಿಮೆ. ಆದರೆ, ಗರ್ಭಕೋಶ ಕ್ಯಾನ್ಸರ್ ಪ್ರಮಾಣ ಜಾಸ್ತಿ ಎಂದು ವಿವರಿಸಿದರು.

ಅರಿವಿನ ಕೊರತೆಯಿಂದಾಗಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಹೆಚ್ಚಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ರೋಗಗಳ ಬಗ್ಗೆ ಅರಿವು ಮೂಡುತ್ತಿದೆ. ಆದರೆ, ಇದು ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದರು.

ಭಾರತ್ ಆಸ್ಪತ್ರೆಗೆ ಪ್ರತಿ ತಿಂಗಳು ಸರಾಸರಿ 250 ಹೊರರೋಗಿಗಳು ಬರುತ್ತಾರೆ. ಇವರಲ್ಲಿ ಗರ್ಭಕೋಶ, ಸ್ತನ, ಅನ್ನನಾಳ, ಶಿರ ಮತ್ತು ಕುತ್ತಿಗೆ ಕ್ಯಾನ್ಸರ್ ರೋಗಿಗಳೇ ಜಾಸ್ತಿ ಇರುತ್ತಾರೆ ಎಂದು ಹೇಳಿದರು.

ಕ್ಯಾನ್ಸರ್ ಎಂದ ತಕ್ಷಣ ಭಯಪಡುವ ಅಗತ್ಯವಿಲ್ಲ. ಮೊದಲ ಹಾಗೂ 2ನೇ ಹಂತದಲ್ಲಿ ಚಿಕಿತ್ಸೆ ಪಡೆದರೆ ಈ ರೋಗವನ್ನು ಪೂರ್ಣ ಪ್ರಮಾಣದಲ್ಲಿ ವಾಸಿ ಮಾಡಬಹುದು. ರೋಗವು 3 ಹಾಗೂ ಅಂತಿಮ ಹಂತಕ್ಕೆ ತಲುಪಿದರೆ ಗುಣಮುಖರಾಗುವುದು ಕಷ್ಟ. ಹೀಗಾಗಿ, ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಚಿಕಿತ್ಸೆ ಪಡೆಯುವುದೇ ಇದಕ್ಕೆ ಇರುವ ಅತ್ಯುತ್ತಮ ಔಷಧ ಎಂದು ಡಾ.ವಿಶ್ವೇಶ್ವರ ಅವರು ಸಲಹೆ ನೀಡಿದರು.

ಕ್ಯಾನ್ಸರ್ ಗೆದ್ದ 200 ಮಂದಿ: ಭಾರತ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆಯಲ್ಲಿ ಕಳೆದ 10 ವರ್ಷಗಳಲ್ಲಿ ಸುಮಾರು 200 ರೋಗಿಗಳು ಕ್ಯಾನ್ಸರ್ ರೋಗವನ್ನು ಗೆದ್ದಿದ್ದಾರೆ. ಅವರು ಎಲ್ಲರಂತೆ ಸಹಜ ಜೀವನ ನಡೆಸುತ್ತಿದ್ದಾರೆ. ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ‘ಸ್ವಯಂ ಸಹಾಯ ಗುಂಪು’ ಮಾಡಿಕೊಂಡು ರೋಗಿಗಳಿಗೆ ಆಪ್ತ ಸಮಾಲೋಚಕರ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. ಕ್ಯಾನ್ಸರ್ ರೋಗಿಗಳಲ್ಲಿರುವ ತಪ್ಪುಕಲ್ಪನೆ ಹೋಗಲಾಡಿಸಿ, ಅವರಲ್ಲಿ ನವ ಚೈತನ್ಯ ಮೂಡಿಸುವುದು, ರೋಗವನ್ನು ಧೈರ್ಯದಿಂದ ಎದುರಿಸುವ ಕುರಿತು ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ, ತಮ್ಮ ಜೀವನದಲ್ಲಿ ಆದ ಅನುಭವಗಳು, ಕ್ಯಾನ್ಸರ್ ಗೆಲ್ಲಲು ಪಟ್ಟ ಶ್ರಮದ ಬಗ್ಗೆ ವಿವರಿಸುತ್ತಾರೆ.

ಫೆ.4ರಂದು ಮೆರವಣಿಗೆ: ಭಾರತ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆಯು ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಫೆ.4ರಂದು ಸಂಜೆ 6ಕ್ಕೆ ನಗರದ ಜೆ.ಕೆ.ಮೈದಾನದಲ್ಲಿ ಮೇಣದಬತ್ತಿ ಮೆರವಣಿಗೆ ಹಮ್ಮಿಕೊಂಡಿದೆ. ಮೇಯರ್ ಪುಷ್ಪಲತಾ ಜಗನ್ನಾಥ್ ಚಾಲನೆ ನೀಡಲಿದ್ದಾರೆ.

ಬೆಂಗಳೂರಿನ ಎಚ್.ಸಿ.ಜಿ ಆಸ್ಪತ್ರೆಯ ಅಧ್ಯಕ್ಷ ಡಾ.ಅಜಯ್ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಮೆರವಣಿಗೆಯು ಜೆ.ಕೆ.ಮೈದಾನದಿಂದ ಹೊರಟು ರೈಲ್ವೆ ನಿಲ್ದಾಣದ ವೃತ್ತದಿಂದ ಸಾಗಿ ಜೆ.ಕೆ.ಮೈದಾನವನ್ನು ಒಂದು ಸುತ್ತು ಹಾಕಲಿದೆ. ಇದರಲ್ಲಿ ಆಸ್ಪತ್ರೆಯ ವೈದ್ಯರು, ರೋಗದಿಂದ ಗುಣಮುಖರಾದವರು, ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

ಎಲ್ಲರ ಸಹಕಾರ ಅಗತ್ಯ: ಕ್ಯಾನ್ಸರ್ ಬಗ್ಗೆ ವೈದ್ಯರು ಅಥವಾ ಕ್ಯಾನ್ಸರ್ ಗೆದ್ದವರು ಮಾತ್ರ ಅರಿವು ಮೂಡಿಸುವುದಲ್ಲ. ಈ ವರ್ಷದ ಧ್ಯೇಯವಾಕ್ಯ ‘ಐ ಆ್ಯಮ್ ಅಂಡ್ ಐ ವಿಲ್’ದ ಪ್ರಕಾರ, ಆರೋಗ್ಯ ಕಾರ್ಯಕರ್ತರು, ಕೆಲಸಗಾರರು, ಧಾರ್ಮಿಕ ಮುಖಂಡರು, ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳು, ಅಭಿಮಾನಿ ಸಂಘಗಳು, ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಎಲ್ಲರೂ ಸೇರಿ ಈ ಬಗ್ಗೆ ಅರಿವು ಮೂಡಿಸಬೇಕು. ಹೌದು, ಈ ರೋಗದ ಬಗ್ಗೆ ಅರಿವು ಮೂಡಿಸಲು ನನ್ನಿಂದಲೂ ಸಾಧ್ಯವಿದೆ ಎಂಬ ಸಂಕಲ್ಪ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಡಾ.ವಿಶ್ವೇಶ್ವರ ತಮ್ಮ ಇಂಗಿತ ವ್ಯಕ್ತಪಡಿಸಿದರು.

ಸರ್ಕಾರವೂ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಬೇಕು. ಪಲ್ಸ್ ಪೋಲಿಯೊ ನಿರ್ಮೂಲನೆಗೆ ಕೈಗೊಂಡ ಅಭಿಯಾನದ ಮಾದರಿಯಲ್ಲೇ ಕ್ಯಾನ್ಸರ್ ತಡೆಗಟ್ಟಲು ದೊಡ್ಡ ಮಟ್ಟದಲ್ಲಿ ಅಭಿಯಾನ ಕೈಗೊಳ್ಳಬೇಕು. ಇದಕ್ಕಾಗಿ ಖಾಸಗಿ ಸಂಸ್ಥೆಗಳ ಸಹಯೋಗ ಪಡೆಯಬೇಕು. ಹೊಗೆಸೊಪ್ಪು ಬೆಳೆಯನ್ನು ನಿಷೇಧಿಸಿ, ಪರ್ಯಾಯ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು. ಕಲುಷಿತ ಆಹಾರ, ರಾಸಾಯನಿಕ ಮಿಶ್ರಿತ ಆಹಾರ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು. ಟಿ.ವಿ, ಪತ್ರಿಕಾ ಮಾಧ್ಯಮದ ಮೂಲಕ ಅರಿವು ಮೂಡಿಸಬೇಕು. ಜಾಥಾ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು.

ಲಕ್ಷ ಜನರಲ್ಲಿ 140 ಜನರಿಗೆ ಕ್ಯಾನ್ಸರ್

ಜೀವನ ಶೈಲಿ, ಆಹಾರ ಪದ್ಧತಿಯಲ್ಲಿ ಬದಲಾವಣೆ, ಕೆಲಸದ ಒತ್ತಡ, ಅನುವಂಶೀಯ ಕಾರಣಗಳಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆಯ ಹೆಚ್ಚುತ್ತಿದೆ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿರುವ ಜನಸಂಖ್ಯೆ ಆಧಾರಿತ ನೋಂದಣಿ ವಿಭಾಗದ ಪ್ರಕಾರ, ಒಂದು ಲಕ್ಷ ಜನರಲ್ಲಿ 140 ಮಂದಿಗೆ ಕ್ಯಾನ್ಸರ್ ಬರುತ್ತಿದೆ. ಅದೇ ರೀತಿ ವಿಧಾನದಿಂದ ಮೈಸೂರಿನ ಜನಸಂಖ್ಯೆಗೆ ಅನುಗುಣವಾಗಿ ಕ್ಯಾನ್ಸರ್ ರೋಗಿಗಳ ಪ್ರಮಾಣವನ್ನು ಪತ್ತೆ ಮಾಡಬಹುದು ಎಂದು ವಿವರಿಸಿದರು ಮೈಸೂರಿನ ಸಿದ್ದಪ್ಪ ಚೌಕದ ಬಳಿ ಇರುವ ಪ್ರೀತಿ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥ ಡಾ.ಅನಿಲ್ ಥಾಮಸ್.

ಮನುಷ್ಯನ ಜೀವಕೋಶಗಳ ಉತ್ಪತ್ತಿಯನ್ನು ಆಂಕೋ ಜೀನ್ಗಳು ನಿಯಂತ್ರಿಸುತ್ತವೆ. ಇಂತಹ ಕೋಟ್ಯಂತರ ಜೀನ್ಸ್ಗಳು ಇರುತ್ತವೆ. ಒಟ್ಟಿಗೆ ಐದು ಆಂಕೋ ಜೀನ್ಗಳಿಗೆ ಹಾನಿಯಾದರೆ ಕ್ಯಾನ್ಸರ್ ಬರುತ್ತದೆ. ಕ್ಯಾನ್ಸರ್ ಎಂಬುದು ಕಾರಣ ಇಲ್ಲದೇ ಬರುವಂತಹ ರೋಗ. ಜೀವಕೋಶಗಳು ಉತ್ಪತ್ತಿಯಾಗುವ ಸಂದರ್ಭದಲ್ಲಿ ಇಡೀ ಜೆನೆಟಿಕ್ ಅಂಶಗಳು ಕಾಪಿ ಆಗಬೇಕು. ಒಂದು ಕೋಶದಿಂದ ಮತ್ತೊಂದು ಕೋಶಕ್ಕೆ ಕಾಪಿ ಹಾಗುವ ಸಂದರ್ಭದಲ್ಲಿ ತೊಂದರೆ ಉಂಟಾದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ತಂಬಾಕು ಉತ್ಪನ್ನಗಳ ಸೇವನೆ, ಟಾಕ್ಸಿಕ್ ಕೆಮಿಕಲ್ಗಳು ಹೀಗೆ… ಅನೇಕ ಅಂಶಗಳು ಜೀನ್ಸ್ ಕಾಪಿ ಆಗುವಾಗ ತೊಂದರೆ ಕೊಡುತ್ತವೆ. ಹೀಗಾಗಿ, ತಂಬಾಕು ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ಹಾನಿಗಿಂತ ಡಾಂಬರು ಹಾಕುವ ಸಂದರ್ಭದಲ್ಲಿ ಟಾಕ್ಸಿಕ್ ಕೆಮಿಕಲ್ಗಳ ವಾಸನೆ ಹೀರುವ ಕಾರ್ಮಿಕರಿಗೆ ತೊಂದರೆ ಹೆಚ್ಚು. ಇವರಿಗೆ ಬಹುಬೇಗ ಕ್ಯಾನ್ಸರ್ ಬರುತ್ತದೆ. ಆದರೆ, ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಹೇರಳವಾಗಿರುವುದರಿಂದ ಕ್ಯಾನ್ಸರ್ಗೆ ತುತ್ತಾಗುವ ಜನರ ಪ್ರಮಾಣವೂ ಹೆಚ್ಚಾಗಿದೆ ಎಂದು ವಿವರಿಸಿದರು.

ಪ್ರೀತಿ ಕ್ಯಾನ್ಸರ್ ಆಸ್ಪತ್ರೆಗೆ ಮೈಸೂರು ಹಾಗೂ ಸುತ್ತಮುತ್ತಲಿನ 200 ಚದರ ಕಿ.ಮೀ. ವ್ಯಾಪ್ತಿಯಿಂದ ರೋಗಿಗಳು ಬರುತ್ತಾರೆ. ಬಡ ಹಾಗೂ ಮಧ್ಯಮ ಕುಟುಂಬಗಳ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಗೆ ಬರುವ ರೋಗಿಗಳ ಪೈಕಿ ಶೇ 60ರಷ್ಟು ರೈತರು. ಈ ಪೈಕಿ ಬಹುಪಾಲು ಮಂದಿ ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಬರುತ್ತಾರೆ.

ರೋಗದ ಬಗ್ಗೆ ಅವರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದಿಲ್ಲ. ಕ್ಯಾನ್ಸರ್ ಲಕ್ಷಣಗಳುಕಾಣಿಸಿಕೊಂಡರೂ ಅದರ ಬಗ್ಗೆ ಅವರು ಲಕ್ಷ್ಯ ಇಡುವುದಿಲ್ಲ. ಅಂತಿಮವಾಗಿ ತಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ, ನೋವು ವಿಪರೀತವಾಗಿ ಬಾಧಿಸುತ್ತಿದೆ ಎನ್ನುವಾಗ ಆಸ್ಪತ್ರೆಗೆ ಬರುತ್ತಾರೆ. ಆಗ ಕಾಲ ಮಿಂಚಿ ಹೋಗಿರುತ್ತದೆ. ರೋಗವನ್ನು ಗುಣಪಡಿಸಲು ಸಾಧ್ಯವಾಗುವುದಿಲ್ಲ. ಆದರೆ, ಒಂದಷ್ಟು ದಿನ ಚೆನ್ನಾಗಿ ಬದುಕಲು ಸಾಧ್ಯವಿದೆ. ಅದಕ್ಕೆ ರೋಗಿಗಳಲ್ಲಿ ಆತ್ಮವಿಶ್ವಾಸ ಎಂಬ ಮದ್ದು ಇರಬೇಕಷ್ಟೆ ಎಂಬುದು ಡಾ.ಅನಿಲ್ ಥಾಮಸ್
ಅವರ ಅನಿಸಿಕೆ.

ರೋಗಕ್ಕಿಂತ ಕುಟುಂಬದ ಹಿತ ಬಯಸಿದ ಮಹಿಳೆ

59 ವರ್ಷದ ಮಹಿಳೆಯೊಬ್ಬರು ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಪ್ರೀತಿ ಕ್ಯಾನ್ಸರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4ನೇ ಹಂತ ತಲುಪಿರುವುದರಿಂದ ರೋಗ ವಾಸಿಯಾಗದು. ಆದರೆ, ಆ ಬಗ್ಗೆ ಅವರಿಗೆ ಚಿಂತೆ ಇಲ್ಲ. ರೋಗ ಬಂದಾಗಿದೆ, ಅದಕ್ಕೆ ಏಕೆ ಅಳುತ್ತಾ ಕೂರಬೇಕು? ಧೈರ್ಯವಾಗಿ ಎದುರಿಸಬೇಕು ಎಂಬ ದೃಢ ಸಂಕಲ್ಪ ಅವರದ್ದು. ಕ್ಯಾನ್ಸರ್ಗೆ ತುತ್ತಾಗಿ 5 ವರ್ಷಗಳು ಗತಿಸಿವೆ. ಅವರು ಈಗಲೂ ಎಲ್ಲರಂತೆ ಸಹಜ ಜೀವನ ನಡೆಸುತ್ತಿದ್ದಾರೆ.

ಸ್ತನ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಆದರೆ, ಮಕ್ಕಳ ಮದುವೆ ಸೇರಿದಂತೆ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ರೋಗದ ಬಗ್ಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಅದೇ ಸಮಯಕ್ಕೆ ಗಂಡ ಅಪಘಾತದಲ್ಲಿ ಗಾಯಗೊಂಡು ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿತ್ತು. ಮಕ್ಕಳು, ಗಂಡನ ಆರೈಕೆಯಲ್ಲೇ ಕಾಲ ಕಳೆದೆ. ಆಸ್ಪತ್ರೆಗೆ ದಾಖಲಾಗುವವರೆಗೂ ಮಕ್ಕಳಿಗೆ ಹೇಳಿರಲಿಲ್ಲ. ಮಗ, ಮಗಳು ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದು ಮಹಿಳೆ ತಿಳಿಸಿದರು.

ಅವರು ನಿಯಮಿತ ಆಹಾರ ಸೇವನೆ ಮಾಡುತ್ತಾರೆ. ಹೊರಗಿನ ತಿಂಡಿ–ತಿನಿಸು ತಿನ್ನುವುದಿಲ್ಲ. ಮೂರು ಬಾರಿ ಅಮೆರಿಕಕ್ಕೆ ಹೋಗಿ ಬಂದಿದ್ದಾರೆ. ಮತ್ತೊಮ್ಮೆ ಅಮೆರಿಕ ಪ್ರವಾಸ ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.

‘ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಅಲ್ಲ. ಅದೂ ಒಂದು ಸಾಮಾನ್ಯ ಕಾಯಿಲೆ. ಆದರೆ, ಅದರ ಬಗ್ಗೆ ಉದಾಸೀನ ಮಾಡಬಾರದು. ವೃತ್ತಿ, ಹಣಕ್ಕಿಂತ ಆರೋಗ್ಯ ಮುಖ್ಯ. ರೋಗ ಬಂದ ಮೇಲೆ ಅದನ್ನು ಒಪ್ಪಿಕೊಳ್ಳಬೇಕು. ನೋವು ಪಡುತ್ತಾ ಕೊರಗುತ್ತಿದ್ದರೆ ರೋಗ ಮತ್ತಷ್ಟು ಉಲ್ಬಣಗೊಳ್ಳುತ್ತದೆ ಎಂದು ಕಿವಿಮಾತು ಹೇಳುತ್ತಾರೆ.

5 ವರ್ಷವಲ್ಲ, 23 ವರ್ಷದಿಂದ ಬದುಕಿದ್ದಾರೆ

ಶ್ರೀರಾಂಪುರದ ಅಂಬುಜಾ ಶ್ರೀನಿವಾಸ್ 1995ರಲ್ಲಿ ಸ್ತನ ಕ್ಯಾನ್ಸರ್ಗೆ ತುತ್ತಾಗಿದ್ದರು. ಕ್ಯಾನ್ಸರ್ ಇರುವುದು ಗೊತ್ತಾಗುವ ವೇಳೆಗಾಗಲೇ 3ನೇ ಹಂತಕ್ಕೆ ತಲುಪಿದ್ದರು. ಕ್ಯಾನ್ಸರ್ ಹೆಸರು ಕೇಳುತ್ತಿದ್ದಂತೆಯೇ ಆಕಾಶವೇ ಕಳಚಿ ಬಿದ್ದಂತಹ ಅನುಭವ ಅಂಬುಜಾ ಅವರಿಗೆ ಆಗಿತ್ತು. ಪರೀಕ್ಷೆ ನಡೆಸಿದ ವೈದ್ಯರು, ‘ಇನ್ನು ಹೆಚ್ಚೆಂದರೆ 5 ವರ್ಷಗಳವರೆಗೆ ಬದುಕಬಹುದು. ಆದರೆ, ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಕ್ಯಾನ್ಸರ್ ಅನ್ನು ಮೆಟ್ಟಿನಿಲ್ಲಲು ಸಾಧ್ಯವಿದೆ. ಆತಂಕವನ್ನು ಬಿಟ್ಟು ಒಳ್ಳೆಯ ಜೀವನ ಶೈಲಿಯನ್ನು ರೂಢಿಸಿಕೊಳ್ಳಿ. ರೋಗವನ್ನು ಧೈರ್ಯವಾಗಿ ಎದುರಿಸಿ’ ಎಂದು ವೈದ್ಯರು ಸಲಹೆ ನೀಡಿದ್ದರು. ಅದರಂತೆ ಆತ್ಮವಿಶ್ವಾಸದಿಂದ ಬದುಕಿದ ಅಂಬುಜಾ ಅವರು 23 ವರ್ಷಗಳಿಂದ ಎಲ್ಲರಂತೆ ಸಹಜ ಜೀವನ ನಡೆಸುತ್ತಿದ್ದಾರೆ.

‘ನಾನು ನೈರುತ್ಯ ರೈಲ್ವೆಯ ಮೈಸೂರು ವಿಭಾಗೀಯ ಕಚೇರಿಯಲ್ಲಿ ಅಕೌಂಟೆಂಟ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದೆ. ಸ್ತನದಲ್ಲಿ ಗಡ್ಡೆ ಇತ್ತು. ರೈಲ್ವೆ ಆಸ್ಪತ್ರೆ ಸೇರಿದಂತೆ ಕೆಲವೆಡೆ ಪರೀಕ್ಷೆ ಮಾಡಿಸಿದ್ದೆ. ಆದರೆ, ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದೇ ವೈದ್ಯರು ತಿಳಿಸಿದ್ದರು. ಒಮ್ಮೆ ನೋವು ತೀವ್ರವಾಗಿತ್ತು. ಭಾರತ್ ಆಸ್ಪತ್ರೆ ಹಾಗೂ ಗ್ರಂಥಿ ಸಂಸ್ಥೆಯಲ್ಲಿ ಪರೀಕ್ಷಿಸಿದಾಗ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಆಗೆಲ್ಲಾ, ಕ್ಯಾನ್ಸರ್ ಎಂದರೆ ಸಾವೇ ಗತಿ ಎಂಬ ಕಲ್ಪನೆ ಇತ್ತು. ಇದರಿಂದ ತೀವ್ರ ಆತಂಕಕ್ಕೆ ಒಳಗಾದೆ. ಆದರೆ, ಆ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಡಾ. ಅನಿಲ್ ಥಾಮಸ್ ಅವರು ನೀಡಿದ ಚಿಕಿತ್ಸೆ ಹಾಗೂ ಸ್ಫೂರ್ತಿದಾಯಕ ಮಾತುಗಳೇ ನಾನು ಇನ್ನೂ ಬದುಕಲು ಕಾರಣ’ ಎಂದು ಅಂಬುಜಾ ತಿಳಿಸಿದರು.

‘ನೀವು ಕ್ಯಾನ್ಸರ್ನ 3ನೇ ಹಂತದಲ್ಲಿ ಬಂದಿದ್ದೀರಿ. ಇಂತಹ ಪರಿಸ್ಥಿತಿಯಲ್ಲಿ ಕ್ಯಾನ್ಸರ್ ವಾಸಿ ಮಾಡುವುದು ಕಷ್ಟಸಾಧ್ಯ. ಇನ್ನು 5 ವರ್ಷಗಳವರೆಗೆ ಬದುಕಿರುತ್ತೀರಿ ಎಂದು ವೈದ್ಯರು ಹೇಳಿದ್ದರು. ಮಕ್ಕಳು ಇನ್ನೂ ಶಾಲೆಗೆ ಹೋಗುತ್ತಿದ್ದಾರೆ. ನಾನು ಸತ್ತರೆ ಅವರಿಗೆ ಗತಿ ಯಾರು ಎಂಬ ಆತಂಕ ಮನೆಮಾಡಿತ್ತು. ನನಗೆ ಕ್ಯಾನ್ಸರ್ ಇರುವುದು ಕಚೇರಿಯಲ್ಲೂ ಗೊತ್ತಾಗಿತ್ತು. ನಿರಂತರವಾಗಿ ಕೆಲಸ ಮಾಡಲು ಕಷ್ಟವಾಗುತ್ತಿತ್ತು. ಇದನ್ನು ಕಂಡ ಕೆಲ ಸಹೋದ್ಯೋಗಿಗಳು, ಮೇಕಪ್ ಹಾಕಿಕೊಂಡು ಕಚೇರಿಗೆ ಬರುತ್ತಾಳೆ, ಕೆಲಸ ಮಾತ್ರ ಮಾಡುವುದಿಲ್ಲ ಎಂದು ವ್ಯಂಗ್ಯವಾಡುತ್ತಿದ್ದರು. ಆದರೆ, ನನ್ನ ಆಂತರ್ಯದ ನೋವು ಮಾತ್ರ ಅವರಿಗೆ ಅರ್ಥವಾಗುತ್ತಿರಲಿಲ್ಲ’ ಎಂದ ಅಂಬುಜಾ ಅವರ ಕಣ್ಣಾಲಿಗಳು ತುಂಬಿಬಂದವು.

‘ಮಗ, ಮಗಳಿಗೆ ಮದುವೆಯಾಗಿದೆ. ಮೊಮ್ಮಕ್ಕಳು ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಇನ್ನು ಸಾವಿನ ಬಗ್ಗೆ ಯಾವುದೇ ಭಯವಿಲ್ಲ. ಯಾವಾಗ ಬೇಕಾದರೂ ಸಾವು ಬರಲಿ. ಅದನ್ನು ಮುಕ್ತವಾಗಿ ಸ್ವೀಕರಿಸುತ್ತೇನೆ. ಇರುವವರೆಗೂ ಖುಷಿಯಾಗಿ ಇರುತ್ತೇನೆ’ ಎಂದು ಆತ್ಮವಿಶ್ವಾಸದಿಂದ ನುಡಿದರು.

ಕೋರ್ಟ್ ಕಲಾಪದಲ್ಲೂ ಪಾಲ್ಗೊಳ್ಳುವೆ

ವಕೀಲರಾದ ಎಂ.ಎಲ್.ಗುಣರಾಜ್ (65) ಅವರಿಗೆ ಮೂರು ವರ್ಷಗಳ ಹಿಂದೆ ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಆರಂಭಿಕ ಹಂತದಲ್ಲೇ ರೋಗ ಪತ್ತೆಯಾಗಿದ್ದರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಅವರು ಈಗ ನ್ಯಾಯಾಲಯದ ಕಲಾಪಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಮೊದಲಿನಂತೆ ಯಥಾಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.

‘ನನಗೆ ಮೂಳೆ ನೋವು ಕಾಣಿಸಿಕೊಂಡಿತ್ತು. ಸರಿಯಾಗಿ ಊಟ ಮಾಡಲು ಆಗುತ್ತಿರಲಿಲ್ಲ. ನೋವು ವಿಪರೀತವಾಗಿದ್ದರಿಂದ ಭಾರತ್ ಕ್ಯಾನ್ಸರ್ ಆಸ್ಪತ್ರೆಗೆ ಬಂದೆ. ಕ್ಯಾನ್ಸರ್ ಎಂಬುದು ಗೊತ್ತಾಗುತ್ತಿದ್ದಂತೆ ಆತಂಕಕ್ಕೆ ಒಳಗಾದೆ. ಆದರೆ, 1ನೇ ಹಂತವಾಗಿದ್ದರಿಂದ ಭಯಪಡುವ ಅಗತ್ಯ ಇರಲಿಲ್ಲ. ಈಗ ರೋಗ ವಾಸಿಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಗುಣರಾಜ್.

ಕ್ಯಾನ್ಸರ್ ಗೆದ್ದ 98 ವರ್ಷದ ವೃದ್ಧೆ

ಗ್ರಾಮೀಣ ಭಾಗದ 80 ವರ್ಷದ ವೃದ್ಧೆ ಕುರಿ ಮೇಯಿಸಿಕೊಂಡು ಜೀವನ ನಡೆಸುತ್ತಿದ್ದರು. ಅವರಿಗೆ ದವಡೆ ಕ್ಯಾನ್ಸರ್ ಬಂದಿತ್ತು. ಪ್ರೀತಿ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾದ ವೃದ್ಧೆಯ ದವಡೆ ಹಾಗೂ ಸುತ್ತಲಿನ ಮಾಂಸವನ್ನು ತೆಗೆಯಲಾಗಿತ್ತು. ಇದಕ್ಕಾಗಿ ನಿರಂತರ 8 ಗಂಟೆಗಳವರೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈಗ ಆಕೆ ಆರೋಗ್ಯವಾಗಿದ್ದಾರೆ. ಕ್ಯಾನ್ಸರ್ ಎಂಬ ಕಾರಣಕ್ಕೆ ಮನೆಯವರು ವೃದ್ಧೆಗಾಗಿ ಪ್ರತ್ಯೇಕ ಗುಡಿಸಿಲು ಕಟ್ಟಿಕೊಟ್ಟಿದ್ದಾರೆ. ಅಲ್ಲಿ ವಾಸವಿರುವ ವೃದ್ಧೆಯು ಈಗಲೂ ಕುರಿ ಮೇಯಿಸುತ್ತಾರೆ. ಪ್ರತಿದಿನ ಕನಿಷ್ಠ 20 ಕಿ.ಮೀ. ನಡೆಯುತ್ತಾರೆ. ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು 18 ವರ್ಷಗಳು ಕಳೆದರೂ ಅವರು ಎಲ್ಲರಂತೆ ಬದುಕಿದ್ದಾರೆ. ಎಂದಾದರೂ ಬೇಸರ ಉಂಟಾದರೆ ಪ್ರೀತಿ ಕ್ಯಾನ್ಸರ್ ಸೆಂಟರ್ಗೆ ಬರುವ ಆಕೆ, ತನಗೆ ಚಿಕಿತ್ಸೆ ನೀಡಿದ ಡಾ.ಅನಿಲ್ ಥಾಮಸ್ ಅವರನ್ನು ಭೇಟಿಯಾಗುತ್ತಾರೆ. ಎಲ್ಲ ರೋಗಿಗಳು ಹೋಗುವವರೆಗೂ ಕಾಯುತ್ತಾರೆ. ಬಳಿಕ, ವೈದ್ಯರನ್ನು ಭೇಟಿಯಾಗಿ, ತನ್ನ ಕುಟುಂಬದವರಿಂದ ಆಗುವ ನೋವನ್ನು ಹೇಳಿಕೊಂಡು ಕಣ್ಣೀರು ಸುರಿಸುತ್ತಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.