ಮೈಸೂರು: ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ವಾಡಿಕೆಯ ವರ್ಷಧಾರೆಯಾಗಿದೆ. ಚಿತ್ತಾ ಮಳೆಯ ಕೃಪೆಯಿಂದ ಹಿಂಗಾರು ಹಂಗಾಮಿನ ಬಿತ್ತನೆ ಒಂದು ವಾರದ ಅವಧಿಯಲ್ಲಿ ಬಿರುಸುಗೊಂಡಿದೆ. ಡಿಸೆಂಬರ್ ಅಂತ್ಯದವರೆಗೂ ಹಿಂಗಾರು ಹಂಗಾಮಿನ ಬಿತ್ತನೆ ನಡೆಯಲಿದೆ.

60,305 ಹೆಕ್ಟೇರ್‌ನಲ್ಲಿ ಹಿಂಗಾರು ಬಿತ್ತನೆಯ ಗುರಿ ಸಾಧನೆಯನ್ನು ಜಿಲ್ಲಾ ಕೃಷಿ ಇಲಾಖೆ ಹೊಂದಿದೆ.ಇದುವರೆಗೂ 24,498 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಶೇ 41ರಷ್ಟು ಬಿತ್ತನೆ ಮುಗಿದಿದ್ದು, ಇನ್ನೂ ಶೇ 59ರಷ್ಟು ಭೂಮಿಯಲ್ಲಿ ಬಿತ್ತನೆ ನಡೆಯಬೇಕಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

‘11,735 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಿದ್ದು, 8200 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. 25,720 ಹೆಕ್ಟೇರ್‌ನಲ್ಲಿ ಹುರುಳಿ ಬಿತ್ತನೆಯ ಗುರಿಗೆ, 11,238 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆಸಲಾಗಿದೆ’ ಎಂದು ಜಿಲ್ಲಾ ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಗೌರಮ್ಮ ಅಗಸಿಬಾಗಿಲ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘6615 ಹೆಕ್ಟೇರ್‌ನಲ್ಲಿ ಅವರೆ ಬಿತ್ತನೆಯ ಗುರಿ ಹೊಂದಲಾಗಿದ್ದು, 2144 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ. 4855 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳದ ಬಿತ್ತನೆಗೆ, ಇದೂವರೆಗೂ 1895 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ’ ಎಂದು ಅವರು ಹೇಳಿದರು.

ಕಡಲೆ, ಹೈಬ್ರಿಡ್ ಜೋಳ, ಅಲಸಂದೆ, ಹುಚ್ಚೆಳ್ಳಿನ ಬಿತ್ತನೆಯೂ ಶುರುವಾಗಿದೆ. ಕಬ್ಬಿನ ನಾಟಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ನೀರಾವರಿ ಆಶ್ರಯದಲ್ಲಿ ಭತ್ತ ಬೆಳೆಯಲಿದ್ದು, ಇನ್ನೂ ಸಸಿ ಮಡಿಯ ತಯಾರಿಕೆಯೇ ಶುರುವಾಗಿಲ್ಲ ಎಂದು ಅವರು ತಿಳಿಸಿದರು.

ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಶೇ 68ರಷ್ಟು ಬಿತ್ತನೆಯಾಗಿದ್ದರೆ, ಹುಣಸೂರಿನಲ್ಲಿ 49, ನಂಜನಗೂಡಿನಲ್ಲಿ 28, ತಿ.ನರಸೀಪುರದಲ್ಲಿ 31, ಮೈಸೂರಿನಲ್ಲಿ ಶೇ 14ರಷ್ಟು ಬಿತ್ತನೆಯಾಗಿದೆ. ಎಂಟು ದಿನಗಳ ಹಿಂದೆ ಒಂದು ಹೆಕ್ಟೇರ್‌ನಲ್ಲೂ ಹಿಂಗಾರು ಬಿತ್ತನೆಯಾಗದಿದ್ದ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಇದೀಗ ಶೇ 38ರಷ್ಟು ಬಿತ್ತನೆ ನಡೆದಿದ್ದರೆ, ತಿ.ನರಸೀಪುರದಲ್ಲಿ ಶೇ 21ರಷ್ಟು ಬಿತ್ತನೆಯಾಗಿದೆ ಎಂದು ಗೌರಮ್ಮ ಮಾಹಿತಿ ನೀಡಿದರು.

ಸರಗೂರಿನಲ್ಲಿ ಮಾತ್ರ ಕಡಿಮೆ ಮಳೆ

ಅ.21ರವರೆಗೂ ಜಿಲ್ಲೆಯ ವಾಡಿಕೆ ಮಳೆ 72.45 ಸೆಂ.ಮೀ. ಈ ಅವಧಿಯಲ್ಲಿ 75.20 ಸೆಂ.ಮೀ. ವರ್ಷಧಾರೆಯಾಗಿದ್ದು, 2.75 ಸೆಂ.ಮೀ. ಮಳೆ ಹೆಚ್ಚಿಗೆ ಸುರಿದಿದೆ. ಅಕ್ಟೋಬರ್‌ನಲ್ಲಿ 10.8 ಸೆಂ.ಮೀ. ವಾಡಿಕೆ ಮಳೆಯಾಗಬೇಕಿದ್ದು, 9.98 ಸೆಂ.ಮೀ. ವರ್ಷಧಾರೆಯಾಗಿದೆ.

ಸರಗೂರು ತಾಲ್ಲೂಕಿನಲ್ಲಿ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 81.76 ಸೆಂ.ಮೀ. ಮಳೆ ಸುರಿಯುವ ಜಾಗದಲ್ಲಿ 67.61 ಸೆಂ.ಮೀ.ನಷ್ಟು ಮಾತ್ರ ವರ್ಷಧಾರೆಯಾಗಿದೆ. ಶೇ 17ರಷ್ಟು ಕೊರತೆಯ ಮಳೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 45.95 ಸೆಂ.ಮೀ. ಮಳೆ ಸುರಿದಿತ್ತು.

ಉಳಿದ ಎಲ್ಲ ತಾಲ್ಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.